ಸರ್ಕಾರದಿಂದ ಈರುಳ್ಳಿ ಶೇಖರಣೆ ಘಟಕ ನಿರ್ಮಾಣಕ್ಕೆ ಸಹಾಯಧನ ಸೌಲಭ್ಯಸಿಗುತ್ತದೆ. ಕೂಡಲೇ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ... ಇಲ್ಲಿದೆ ಮಾಹಿತಿ.
2020-21ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯಡಿಯಲ್ಲಿ ಒಗ್ಗೂಡಿಸುವಿಕೆ ಕಾರ್ಯಕ್ರಮದಡಿಯಲ್ಲಿ ಈರುಳ್ಳಿ ಶೇಖರಣೆ ಘಟಕ ನಿರ್ಮಿಸಿಕೊಳ್ಳಲು ಅವಕಾಶವಿದ್ದು, ಪ್ರತಿ ಘಟಕಕ್ಕೆ ಒಟ್ಟು ರೂ.1,63,560/- ಸಹಾಯಧನ ಸೌಲಭ್ಯವಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಬಳ್ಳಾರಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈರುಳ್ಳಿಯು ಹೆಚ್ಚು ತೇವಾಂಶಭರಿತ ಬೆಳೆಯಾಗಿದ್ದು, ಶೀಘ್ರವಾಗಿ ಹಾಳಾಗುವ ಗುಣ ಹೊಂದಿರುವ ಕಾರಣ ಸುಮಾರು 3 ರಿಂದ 4 ತಿಂಗಳುಗಳ ಕಾಲ ಈರುಳ್ಳಿಯನ್ನು ಹಾಳಾಗದಂತೆ ಶೇಖರಿಸಿ ಸಂಗ್ರಹಿಸಲು ಹಾಗೂ ಮಾರುಕಟ್ಟೆ ಬೆಲೆ ಏರಿಳಿತ ಕಂಡಾಗ ಸದರಿ ಘಟಕದಲ್ಲಿ ಸಂಗ್ರಹಿಸಿದ ಈರುಳ್ಳಿಗೆ ಉತ್ತಮ ಬೆಲೆ ದೊರಕುವ ಕಾರಣ ಆಸಕ್ತ ರೈತರು ಈರುಳ್ಳಿ ಶೇಖರಣ ಘಟಕವನ್ನು ನಿರ್ಮಿಸಿಕೊಂಡು ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಬಳ್ಳಾರಿ ಜಿಲ್ಲೆಯ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆ ಕಛೇರಿಗೆ ಸಂಪರ್ಕಿಸಲು ಕೋರಲಾಗಿದೆ.
ಇದನ್ನೂ ಓದಿ..... ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ಪಡೆಯಲು ನವೆಂಬರ್ 17 ರವರೆಗೆ ಅರ್ಜಿ ಸಲ್ಲಿಸಿ.
ಇತ್ತೀಚೆಗೆ ಮಳೆಯಿಂದಾಗಿ ಸಾಕಷ್ಟು ಈರುಳ್ಳಿ ಬೆಳೆ ಹಾಳಾಗಿದೆ. ಇನ್ನೂ ಕೆಲವು ರೈತರು ಕಟಾವು ಮಾಡುವ ಹಂತದಲ್ಲಿದ್ದಾರೆ. ಈರುಳ್ಳಿ ಬೆಲೆ ಈಗಾಗಲೇ ಮಾರುಕಟ್ಟೆಯಲ್ಲಿ ಉತ್ತಮ ಬೆಲೆಯೂ ಇದೆ. ಈರುಳ್ಳಿ ಹೆಚ್ಚು ತೇವಾಂಶದಿಂದ ಕೂಡಿದ್ದರಿಂದ ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಒಂದು ನೀವು ಸಂಗ್ರಹ ಮಾಡಿಕೊಳ್ಳಲು ಬಯಸಿದ್ದರೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಯಡಿಯಲ್ಲಿ ಒಗ್ಗೂಡಿಸುವಿಕೆ ಕಾರ್ಯಕ್ರಮದಡಿಯಲ್ಲಿ ಈರುಳ್ಳಿ ಶೇಖರಣೆ ಘಟಕ ನಿರ್ಮಿಸಿಕೊಳ್ಳಲು ಅವಕಾಶವಿದೆ. ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳಬಹುದು.