ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ೨೦೨೦-೨೧ನೇ ಸಾಲಿನಲ್ಲಿ ಗೇರು ಕೃಷಿಗೆ ಪ್ರೋತ್ಸಾಹಧನವನ್ನು ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಕೊಡಲಾಗುತ್ತದೆ. ಇದು ೨೦೨೦-೨೧ನೇ ಸಾಲಿಗೆ ಮಾತ್ರ ಅನ್ವಯವಾಗುವಂತೆ ಗೇರು ಗಿಡಗಳ ಖರೀದಿ, ಗೇರು ತೋಟ ನಿರ್ಮಾಣ ಮತ್ತು ನಿರ್ವಹಣೆಗೆ ಸೀಮಿತವಾಗಿದೆ. ಮೊದಲು ಬಂದವರಿಗೆ ಆದ್ಯತೆ ನೀಡಲಾಗುವುದು.
ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರ, ಪುತ್ತೂರು ಇಲ್ಲಿನ ನರ್ಸರಿ, ಅಥವಾ ಗೇರು ಮತ್ತು ಕೋಕೊ ಅಭಿವೃದ್ಧಿ ನಿರ್ದೇಶನಾಲಯ, ಕೊಚಿನ್ ಇವರಿಂದ ದೃಢೀಕರಿಸಿದ ಇನ್ಯಾವುದೇ ನರ್ಸರಿಗಳಿಂದ ಗಿಡಗಳನ್ನು ಖರೀದಿಸಿದ ಮೂಲ ಬಿಲ್ಲನ್ನು ಲಗತ್ತಿಸಬೇಕು. ಜೆರಾಕ್ಸ್ ಪ್ರತಿಗಳನ್ನು ಪರಿಗಣಿಸುವುದಿಲ್ಲ.
ಸಾಮಾನ್ಯ ಪದ್ಧತಿಯಲ್ಲಿ (೨೦೦ ಗಿಡ/ಒಂದು ಹೆಕ್ಟೇರಿಗೆ) ಒಬ್ಬರಿಗೆ ನಾಲ್ಕು ಹೆಕ್ಟೇರ್ ವರೆಗೆ ಸೀಮಿತವಾಗಿ ಕೊಡಲಾಗುವುದು.
ಡ್ರಿಪ್ ನೀರಾವರಿಯಲ್ಲಿ ಗೇರಿನ ತೋಟ:
ಅ) ಹೆಕ್ಟೇರ್ ಒಂದಕ್ಕೆ ಗಿಡಗಳ ಖರೀದಿಗೆ ನಲವತ್ತು ಸಾವಿರದವರೆಗೆ ಸಹಾಯಧನ ಆ) ಗೇರು ತೋಟ ನಿರ್ಮಾಣ ಮತ್ತು ನಿರ್ವಹಣೆಗೆ ಒಂದು ಹೆಕ್ಟೇರಿಗೆ ರೂ. 36,೦೦೦/-
ಡ್ರಿಪ್ ನೀರಾವರಿ ಇಲ್ಲದೆ ಗೇರಿನ ತೋಟ : ಅ) ಹೆಕ್ಟೇರ್ ಒಂದಕ್ಕೆ ಗಿಡಗಳ ಖರೀದಿಗೆ ಇಪ್ಪತ್ತು ಸಾವಿರದವರೆಗೆ ಸಹಾಯಧನ ಆ) ಗೇರು ತೋಟ ನಿರ್ಮಾಣ ಮತ್ತು ನಿರ್ವಹಣೆಗೆ ಒಂದು ಹೆಕ್ಟೇರಿಗೆ ರೂ. 18,೦೦೦/-
3) ಕ್ಷೇತ್ರಭೇಟಿ ಹಾಗೂ ಪರಿಶೀಲನೆಯ ನಂತರ ಸಹಾಯಧನವನ್ನು ಬ್ಯಾಂಕ್ ಖಾತೆಗೆ ಹಾಕಲಾಗುವುದು
ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದೆ. ಅರ್ಜಿ ಫಾರ್ಮ್ ನ್ನು ಪಡೆಯಲು ಹಾಗೂ ಹೆಚ್ಚಿನ ಮಾಹಿತಿಗೆ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ಜಾಲತಾಣಕ್ಕೆ https://cashew.icar.gov.in/rkvy ಭೇಟಿ ನೀಡಬಹುದು.
ಗೇರು ಕೃಷಿ ಮಾಡುವವರನ್ನು ಪ್ರೋತ್ಸಾಹಿಸುವುದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರ ಪಟ್ಟಣದಲ್ಲಿರುವ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದವರು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಗೇರು ಕೃಷಿಗೆ ಪ್ರೋತ್ಸಾಹ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ರೈತರು ಅರ್ಜಿ ಸಲ್ಲಿಸಿ ಲಾಭ ಪಡೆದುಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ 08251-231530, 230902 ಗೆ ಸಂಪರ್ಕಿಸಬಹುದು.