2020-21ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ 6 ಮತ್ತು 9ನೇ ತರಗತಿಗಳ ಪ್ರವೇಶಕ್ಕಾಗಿ ದೇಶದಾದ್ಯಂತ ಇರುವ 33 ಸೈನಿಕ ಶಾಲೆಗಳಲ್ಲಿ ಪ್ರವೇಶ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ..
ಪರೀಕ್ಷೆಯು 2021ರ ಜನವರಿ 10ರಂದು ನಡೆಯಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳಿಗೆ 400, ಇತರರಿಗೆ 550 ಪರೀಕ್ಷಾ ಶುಲ್ಕ ಇರಲಿದೆ. ಆಸಕ್ತಿಯುಳ್ಳ ಅರ್ಹ ವಿದ್ಯಾರ್ಥಿಗಳು https:// aissee.nta.nic.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ನವೆಂಬರ 19 ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಪರೀಕ್ಷೆಗೆ ಸಂಬಂಧಿಸಿದ ಯೋಜನೆ, ಕಾಲಾವಧಿ, ಮಾಧ್ಯಮ, ಪರೀಕ್ಷೆಯ ಪಠ್ಯಕ್ರಮ, ಸೈನಿಕ ಶಾಲೆಗಳ ಪಟ್ಟಿ ಹಾಗೂ ತಾತ್ಕಾಲಿಕ ಪ್ರವೇಶ, ಸೀಟುಗಳ ಮೀಸಲು, ಪರೀಕ್ಷೆ ನಡೆಯುವ ನಗರಗಳು, ಕೇಂದ್ರಗಳು, ಮುಖ್ಯ ದಿನಾಂಕ ಇತ್ಯಾದಿ ವೆಬ್‍ಸೈಟ್‌ನಲ್ಲಿ ಲಭ್ಯವಿರುತ್ತವೆ. ಪರೀಕ್ಷೆಗಾಗಿ ಪ್ರವೇಶ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ವಿವರವಾದ ಮಾಹಿತಿ ಕೈಪಿಡಿಯನ್ನು ಓದಿಕೊಂಡಿರಬೇಕು. ಆನ್‍ಲೈನ್ ಮೂಲಕ ಮಾತ್ರ ವೆಬ್‍ಸೈಟ್ https://aissee.nta.nic. ಸಹಾಯದಿಂದ ನ.19 ರೊಳಗೆ ಅರ್ಜಿ ಸಲ್ಲಿಸಬೇಕು.
ಆರನೇ ತರಗತಿಗೆ ಪ್ರವೇಶ ಪಡೆಯುವ ಅಭ್ಯರ್ಥಿಗಳು ಮಾರ್ಚ್ 31, 2021ಕ್ಕೆ 10 ರಿಂದ 12 ವರ್ಷದ ನಡುವೆ ಇರಬೇಕು. ಬಾಲಕ ಮತ್ತು ಬಾಲಕಿಯರಿಗೆ ಎಲ್ಲಾ ಸೈನಿಕ ಶಾಲೆಗಳಲ್ಲಿ ಪ್ರವೇಶ ತೆರೆದಿರುತ್ತದೆ. ಒಂಬತ್ತನೇ ತರಗತಿ ಅಭ್ಯರ್ಥಿಗಳು ಮಾರ್ಚ್ 31, 2021ಕ್ಕೆ 13 ರಿಂದ 15 ವರ್ಷದ ನಡುವೆ ಇರಬೇಕು. ಹಾಗೂ ಪ್ರವೇಶ ಸಮಯದಲ್ಲಿ ಒಂದು ಮಾನ್ಯತೆ ಹೊಂದಿರುವ ಶಾಲೆಯಿಂದ 8ನೇ ತರಗತಿಗೆ ತೇರ್ಗಡೆ ಹೊಂದಿರಬೇಕು.
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಅರ್ಜಿ ಸಲ್ಲಿಕೆ-ನ. 21ರವರೆಗೆ ವಿಸ್ತರಣೆ
2020-21 ನೇ ಸಾಲಿನಲ್ಲಿ ಪಿಯುಸಿ, ಡಿಗ್ರಿ, ಸ್ನಾತಕೋತ್ತರ ಪದವಿಗಳಲ್ಲಿ ಪ್ರಥಮ ಯತ್ನದಲ್ಲಿ ಪಾಸಾದ ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನಕ್ಕಾಗಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ದಿನಾಂಕವನ್ನು ನ.21 ರ ವರೆಗೆ ಮುಂದುವರೆಸಲಾಗಿದೆ. ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾದ ವೆಬ್‍ಸೈಟ್ ವಿಳಾಸ sw.kar.nic.in ಆಗಿದ್ದು, ಅರ್ಹತೆ ಇರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.