ಚಿತ್ರದುರ್ಗ ಜಿಲ್ಲೆಯಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿ ಹುದ್ದೆಗಳಿಗಾಗಿ ನೇಮಕಾತಿಗಾಗಿ ಕರ್ನಾಟಕ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಧಿಸೂಚನೆ ಹೊರಡಿಸಿದ್ದಾರೆ
ಒಟ್ಟು ಹುದ್ದೆಗಳು: 129, ಅಂಗನವಾಡಿ ಕಾರ್ಯಕರ್ತೆ-19, ಅಂಗನವಾಡಿ ಸಹಾಯಕಿ-110 (ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು)
ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ 27-01-2021, ಅರ್ಜಿಸಲ್ಲಿಸಲು ಕೊನೆಯ ದಿನಾಂಕ 26-02-2021
ವಿದ್ಯಾರ್ಹತೆ: ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು 10ನೇ ತರಗತಿ ಪಾಸಾಗಿರಬೇಕು. ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 4ನೇ ತರಗತಿ ಪಾಸಾಗಿರಬೇಕು.
ಅರ್ಜಿಸಲ್ಲಿಸಲು ವಯಸ್ಸು: ಕನಿಷ್ಠ ವಯೋಮಿತಿ:18 ವರ್ಷ , ಗರಿಷ್ಠ ವಯೋಮಿತಿ:35 ವರ್ಷ
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿ ಶುಲ್ಕವಿರುವುದಿಲ್ಲ. ಹುದ್ದೆಗಳಿಗೆ ಅಭ್ಯರ್ಥಿಯನ್ನು ಮೆರಿಟ್ ವಿಧಾನದ ಮೇಲೆ ಆಯ್ಕೆ ಮಾಡುತ್ತಾರೆ. ವಿಧವಾ ಅಭ್ಯರ್ಥಿಗಳಿಗೆ ಹೆಚ್ಚಿನ ಆಧ್ಯತೆ ನೀಡಲಾಗುವುದು ಈ https://anganwadirecruit.kar.nic.in/ ಲಿಂಕ್ ಮುಖಾಂತರ ನೀವು ಅರ್ಜಿಯನ್ನು ಸಲ್ಲಿಸಬಹುದು.