News

ಎಸ್ಎಸ್ಎಲ್ಸಿ, ಐಟಿಐ ಪಾಸಾದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿ 3591 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

09 June, 2021 10:24 PM IST By:
Railway

ರೈಲ್ವೆ ಇಲಾಖೆಯಲ್ಲಿ ಖಾಲಿಯಿರುವ 3,591 ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 24 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ. ಇದು ನೇರ ನೇಮಕಾತಿ ಪ್ರಕ್ರಿಯೆಯಾಗಿದ್ದರಿಂದ ಇಲ್ಲಿ ಪರೀಕ್ಷೆ ನಡೆಸಲಾಗುವುದಿಲ್ಲ.

ನೇಮಕಾತಿ ಪ್ರಕ್ರಿಯೆ ಮೆರಿಟ್ ಲಿಸ್ಟ್ ಆಧಾರದಲ್ಲಿ ನಡೆಯಲಿದೆ. ಮೆರಿಟ್ ಲಿಸ್ಟ್​ನ್ನು 10ನೇ ತರಗತಿ ಮತ್ತು ಐಟಿಐ ಪರೀಕ್ಷೆಯ ಅಂಕದ ಆಧಾರದ ಮೇಲೆ ತಯಾರಿಸಲಾಗುತ್ತದೆ. ಒಂದು ವೇಳೆ ಇಬ್ಬರು ವಿದ್ಯಾರ್ಥಿಗಳು ಸರಾಸರಿ ಅಂಕವು ಸಮನಾಗಿದ್ದರೆ ಅಂತಹ ಅಭ್ಯರ್ಥಿಗಳಲ್ಲಿ ಯಾರು ವಯಸ್ಸಿನಲ್ಲಿ ಹಿರಿಯರೋ ಅವರಿಗೆ ಮೊದಲ ಆದ್ಯತೆ ನೀಡಲಾಗುವುದು.

ವಯೋಮಿತಿ: ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 15 ವರ್ಷ ಮೇಲ್ಪಟ್ಟವರಾಗಿ ಇರಬೇಕು. ಮತ್ತು 24 ವರ್ಷಕ್ಕಿಂತ ಒಳಗಿನ ಅಭ್ಯರ್ಥಿಗಳಾಗಿರಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರುವ ಅಭ್ಯರ್ಥಿಗಳ ಗರಿಷ್ಠ ವಯೋಮಾನ ಮಿತಿ 5 ವರ್ಷ ವಿನಾಯಿತಿ ಇರುತ್ತದೆ.. ಉಳಿದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಾನ ಮಿತಿಯಲ್ಲಿ 3 ವರ್ಷಗಳ ವಿನಾಯಿತಿ ನೀಡಲಾಗಿದೆ.

ಶುಲ್ಕ: ಸಾಮಾನ್ಯ ಅಭ್ಯರ್ಥಿಗಳು 100 ರೂಪಾಯಿ ಶುಲ್ಕ ಪಾವತಿಸಬೇಕು.  ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಥವಾ ಅಂಗವೈಕಲ್ಯ ಹೊಂದಿದ ಅಭ್ಯರ್ಥಿಗಳು ಯಾವುದೇ ಶುಲ್ಕ ಪಾವತಿಸುವ ಅಗತ್ಯ ಇರುವುದಿಲ್ಲ. ಮಹಿಳಾ ಅಭ್ಯರ್ಥಿಗಳು ಕೂಡ ಯಾವುದೇ ಶುಲ್ಕ ಪಾವತಿಸಬೇಕಿಲ್ಲ.

ಹುದ್ದೆಗಳು: ಮುಂಬೈ ವಿಭಾಗ (ಎಮ್​ಎಮ್​ಸಿಟಿ) – 738

ವಡೋದರಾ ವಿಭಾಗ (ಬಿಆರ್​ಸಿ) – 489

ಅಹಮದಾಬಾದ್ ವಿಭಾಗ (ಎಡಿಐ) – 611

ರತ್​ಲಮ್ ವಿಭಾಗ (ಆರ್​ಟಿಎಮ್) – 434

ರಾಜ್​ಕೋಟ್ ವಿಭಾಗ (ಆರ್​ಜೆಟಿ) – 176

ಭಾವ್​ನಗರ್ ವರ್ಕ್​ಶಾಪ್ (ಬಿವಿಪಿ) – 210

ಲೋವರ್ ಪರೇಲ್ ವರ್ಕ್​ಶಾಪ್ (ಪಿಎಲ್) – 396

ಮಹಾಲಕ್ಷ್ಮೀ ವರ್ಕ್​ಶಾಪ್ (ಎಮ್​ಎಕ್ಸ್) – 64

ದಾಹೊದ್ ವರ್ಕ್​ಶಾಪ್ (ಡಿಹೆಚ್​ಡಿ) – 187

ಪ್ರತಾಪ್ ನಗರ್ ವರ್ಕ್​ಶಾಪ್ (ಪಿಆರ್​ಟಿಎನ್) – 45

ಸಾಬರ್​ಮತಿ ವರ್ಕ್​ಶಾಪ್ (ಎಸ್​ಬಿಐ) – 60

ಸಾಬರ್​ಮತಿ ಸಿಗ್ನಲ್ ವರ್ಕ್​ಶಾಪ್ (ಎಸ್​ಬಿಐ) – 25

ಪ್ರಧಾನ ಕಚೇರಿ – 34

ಅರ್ಜಿ ಸಲ್ಲಿಸುವ ಪ್ರಕ್ರಿಯೆ?

ಇಲಾಖೆಯ ಲಿಂಕ್ www.rrc-wr.com ಗೆ ಭೇಟಿ ನೀಡಬೇಕು. ಇಲ್ಲಿ ಮೇಲ್ಗಡೆಯಿರುವ ಹೊಸ ಫೈಲ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಮತ್ತೇ ನಾಲ್ಕು ಪುಟಗಳ ಲಿಂಕ್ ಕಾಣಿಸುತ್ತದೆ. ಕ್ಲಿಕ್ ಹಿಯರ್ ಟು ಅಪ್ಲೈ, ಹೌ ಟು ಅಪ್ಲೈ ಹಾಗೂ ಡೌನ್ಲೋಡ್ ನೋಟಿಫಿಕೇಷನ್ ಹೀಗೆ ಕಾಣಿಸುತ್ತದೆ. ಅಪ್ಲೈ ಮಾಡುವುದಕ್ಕಿಂತ ಮುಂಚಿತವಾಗಿ ನೋಟಿಫಿಕೇಷನ್ ಮತ್ತ್ ಅರ್ಜಿ ಹೇಗೆ ಸಲ್ಲಿಸಬೇಕೆಂಬುದನ್ನು ಸರಿಯಾಗಿ ಓದಿಕೊಂಡು ನಂತರ ಅರ್ಜಿ ಸಲ್ಲಿಸಬೇಕು.