News

ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಅಡಿಯಲ್ಲಿ ವಿವಿಧ ವೃತ್ತಿಗಳಲ್ಲಿ ತರಬೇತಿ ಪಡೆಯಲು ಅರ್ಜಿ ಆಹ್ವಾನ

24 May, 2021 9:06 PM IST By:
pradhan mantri koushalya training

ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೋನಾ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು ಹಾಗೂ  ಆರೋಗ್ಯ ವಲಯದಲ್ಲಿ ಹೆಚ್ಚಿನ ಪರಿಣಿತ ಸಹಾಯಕ ತಂತ್ರಜ್ಞರ ಸಿಬ್ಬಂದಿಯ ಅವಶ್ಯಕತೆ ಇರುವುದನ್ನು ಮನಗಂಡು, ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಮಂತ್ರಾಲಯದ ಅಧೀನದಲ್ಲಿ ಪ್ರಧಾನ ಮಂತ್ರಿ ಕೌಶಲ್ಯ ವಿಕಾಸ ಯೋಜನೆ 3.0 ರ ಅಡಿಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ವತಿಯಿಂದ ಈ ಕೆಳಕಂಡ ವೃತ್ತಿಗಳಲ್ಲಿ ಒಂದು ತಿಂಗಳ ಅವಧಿಗೆ ಉಚಿತ ತರಬೇತಿ  ಪಡೆಯಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್‌ನ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ತಿಳಿಸಿದ್ದಾರೆ.

ತುರ್ತು ವೈದ್ಯಕೀಯ ತಂತ್ರಜ್ಞ ಮೂಲ, ಫ್ಲೆಬೋಟೊಮಿಸ್ಟ್ ಹಾಗೂ ವೈದ್ಯಕೀಯ ದಾಖಲೆ ಸಹಾಯಕ ವೃತ್ತಿಗಳಿಗೆ ತರಬೇತಿ ಪಡೆಯಲು ದ್ವಿತೀಯ ಪಿಯುಸಿ (ವಿಜ್ಞಾನ) ವಿಭಾಗದಲ್ಲಿ ಪಾಸಾಗಿರಬೇಕು. ಜನರಲ್ ಡ್ಯೂಟಿ ಅಸಿಸ್ಟೆಂಟ್ (ಜಿಡಿಎ), ಜಿಡಿಎ-ಸುಧಾರಿತ (ವಿಮರ್ಶಾತ್ಮಕ ಆರೈಕೆ), ಗೃಹ ಆರೋಗ್ಯ ಸಹಾಯಕ ಹಾಗೂ ವೈದ್ಯಕೀಯ ಸಲಕರಣೆ ತಂತ್ರಜ್ಞಾನ / ಸಹಾಯಕ ವೃತ್ತಿಗಳಿಗೆ ತÀರಬೇತಿ ಪಡೆಯಲು ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರಬೇಕು.

ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ತರಬೇತಿ ಪಡೆಯಲು ಆನ್‌ಲೈನ್   https://docs.google.com/forms/d/e/1FAIpQLSfPJ-iJ1eaJGlHg1xgmjLkoNLJQpdFtm3PD4WMo-DqRdtGY_A/viewform?usp=sf_link ಲಿಂಕ್ ಮೂಲಕ 2021ರ ಜೂನ್ 5  ರೊಳಗಾಗಿ ಅರ್ಜಿ ಸಲ್ಲಿಸಿ ತಮ್ಮ ಸ್ವ-ವಿವರಗಳನ್ನು ಮಾಹಿತಿಯನ್ನು (ವಿದ್ಯಾರ್ಹತೆಗಳ ದಾಖಲೆಗಳನ್ನು) ಕಲಬುರಗಿ ಜಿಲ್ಲಾ ಕೌಶಲ್ಯ ಮಿಷನ್‌ನ dsoklb2017@gmail.comಈ-ಮೇಲ್ ವಿಳಾಸಕ್ಕೆ ಸಲ್ಲಿಸಬೇಕು.  ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 8317384664 ಹಾಗೂ ಕಚೇರಿ ದೂರವಾಣಿ ಸಂಖ್ಯೆ 08472-225569 ಗೆ ಸಂಪರ್ಕಿಸಬೇಕೆAದು ಅವರು ತಿಳಿಸಿದ್ದಾರೆ.

 ಉಚಿತ ಕೌಶಲ್ಯ ತರಬೇತಿಗಾಗಿ ಅರ್ಜಿ ಆಹ್ವಾನ

ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ ಅಡಿಯಲ್ಲಿ ಜಿಲ್ಲ ಕೌಶಲ್ಯ ಮಿಷನ್ ವತಿಯಿಂದ ಹೆಲ್ತ್‍ಕೇರ್‍ಗೆ ಸಂಬಂಧಪಟ್ಟಂತೆ ಕೌಶಲ್ಯ ತರಬೇತಿಯನ್ನು ನೀಡಲು ಶಿವಮೊಗ್ಗ ಜಿಲ್ಲೆಯ ಆಸಕ್ತ ಯುವತಿ ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಎಸ್‍ಎಸ್‍ಎಲ್‍ಸಿ ಉತ್ತೀರ್ಣ ಹಾಗೂ ಪಿಯುಸಿ ಸೈನ್ಸ್ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಎಸ್‍ಎಸ್‍ಎಲ್‍ಸಿ ಶೈಕ್ಷಣಿಕ ಹಿನ್ನೆಲೆಯವರು ಜಿಡಿಎ ಅಡ್ವಾನ್ಸ್‍ಡ್ (ಕ್ರಿಟಿಕಲ್ ಕೇರ್) , ಜನರಲ್ ಡ್ಯೂಟಿ ಅಸಿಸ್ಟೆಂಟ್ (ಜಿಡಿಎ), ಹೋಂ ಹೆಲ್ತ್ ಐಡ್ಸ್, ಮೆಡಿಕಲ್ ಇಕ್ಯೂಪ್‍ಮೆಂಟ್ ಟೆಕ್ನಾಲಜಿ ಅಸಿಸ್ಟೆಂಟ್ ವಿಭಾಗದಲ್ಲಿ ತರಬೇತಿ ನೀಡಲಾಗುವುದು. ಪಿಯುಸಿ ಅಭ್ಯರ್ಥಿಗಳಿಗೆ ಎಮರ್ಜೆನ್ಸಿ ಮೆಡಿಕಲ್ ಟೆಕ್ನಿಷಿಯನ್, ಪ್ಲೆಬೊಟೋನಿಸ್ಟ್ ಮತ್ತು ಮೆಡಿಕಲ್ ರೆಕಾರ್ಡ್ ಅಸಿಸ್ಟೆಂಟ್ ತರಬೇತಿ ನೀಡಲಾಗುವುದು.

ಆಸಕ್ತ ಅರ್ಹ ಅಭ್ಯರ್ಥಿಗಳು ಮೇ 28ರ ಒಳಗಾಗಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಕಚೇರಿಯ ಗಿರೀಶ್ 9538191000, ಹಾಲೇಶ್ 7019410542, ದೇವೇಂದ್ರನಾಯ್ಕ 8762424173 ಸಂಖ್ಯೆಗೆ ಕರೆ ಮಾಡಿ ತಮ್ಮ ಹೆಸರು ನೋಂದಾಯಿಸಬಹುದು ಎಂದು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.