News

ವಿವಿಧ ವೃತ್ತಿಗಳಿಗೆ ಕೌಶಲ್ಯ ತರಬೇತಿ ಪಡೆಯಲು ಅರ್ಜಿ ಆಹ್ವಾನ

26 April, 2021 12:37 PM IST By:

ಕಲಬುರಗಿ ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್) ಸಹಯೋಗದೊಂದಿಗೆ 2016-17 ಹಾಗೂ 2017-18 ನೇ ಸಾಲಿನ ಡಿ.ಎಂ.ಎಫ್ ಯೋಜನೆಯಡಿ ಕಲಬುರಗಿ ತಾಲೂಕಿನ ಪ್ರತ್ಯಕ್ಷ ಹಾಗೂ ಪರೋಕ್ಷ ಗಣಿ ಬಾಧಿತ ಪ್ರದೇಶದ ಆಸಕ್ತ ಅಭ್ಯರ್ಥಿಗಳಿಂದ ಕೆಳಕಂಡ ವಿವಿಧ ವೃತ್ತಿಗಳಿಗೆ ಕೌಶಲ್ಯ ತರಬೇತಿ ನೀಡಲು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಸಿಡಾಕ್ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೃತ್ತಿ ತರಬೇತಿಗಳ ವಿವರ: ಭಾರಿ ವಾಹನ ಚಾಲನೆ (1 ತಿಂಗಳ ವಸತಿಯುತ), ಸಿ.ಎನ್.ಸಿ ಟರ್ನಿಂಗ್ ಮಿಲ್ಲಿಂಗ್ ಮತ್ತು ಟೂಲ್ ಡಿಸೈನ್, ಅಡ್ವಾನ್ಸಡ್ ವೆಲ್ಡಿಂಗ್ ಟೆಕ್ನೊಲಾಜಿಸ್, ಬ್ಯೂಟಿ ಪಾರ್ಲರ್ ಮ್ಯಾನೇಜ್‌ಮೆಂಟ್ (ವಸತಿಯುತ), ಮೋಟಾರ್ ಹಾಗೂ ಪಂಪ್ ಮೇಂಟೆನೆನ್ಸ್, ಮಹಿಳೆಯರಿಗಾಗಿ ಫ್ಯಾಷನ್ ಡಿಸೈನಿಂಗ್ ತರಬೇತಿ, ಅಗರಬತ್ತಿ ಹಾಗೂ ಮೇಣದ ಬತ್ತಿ ತರಬೇತಿ, ಅಟೋಮೋಬೈಲ್ ರಿಪರ‍್ಸ್, ಹೋಮ್ ಅಪ್ಲಾಯನ್ಸೆಸ್ ರಿಪೇರ್, ಎ.ಸಿ.ರೆಫ್ರಿಜ್‌ರೇಷನ್ ರಿಪೇರ್ ತರಬೇತಿ ಇದೆ. ವಿವಿಧ ವೃತ್ತಿಗಳಿಗೆ 1 ರಿಂದ 4 ತಿಂಗಳ ಅವಧಿಯಲ್ಲಿ ತರಬೇತಿ ನೀಡಲಾಗುತ್ತದೆ.

ವಸತಿ ರಹಿತ ತರಬೇತಿಗೆ ಸೇರಿದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳಿಗೆ 2500 ರೂ. ಶಿಷ್ಯವೇತನ ನೀಡಲಾಗುತ್ತದೆ. ತರಬೇತಿಗೆ ಭೌತಿಕ ಗುರಿ ನಿಗದಿಪಡಿಸಿದ್ದು, ಮೊದಲು ಅರ್ಜಿ ಸಲ್ಲಿಸಿದವರಿಗೆ ಮೊದಲ ಆದ್ಯತೆ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್ https://forms.gle/Df7Qq8AKVFjdk3gF7 ಮೂಲಕ ದಿ.05-05-2021 ರೊಳಗೆ ಅರ್ಜಿ ಸಲ್ಲಿಸಿ ದಿ.07-05-2021 ರೊಳಗೆ ಈ ಕಚೇರಿಗೆ ಭೌತಿಕ ಪ್ರತಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಂಟಿ ನಿರ್ದೇಶಕರು, ಸಿಡಾಕ್, ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಹಾಗೂ ಮೋಬೈಲ್ ಸಂಖ್ಯೆ  7338382764, 8147307003, 8884872109  ಸಂಪರ್ಕಿಸಲು ಕೋರಿದ್ದಾರೆ.