News

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

08 September, 2021 8:08 PM IST By:

ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ವಿಕಲಚೇತನರು ಸಾಮಾಜಿಕ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಸಧೃಢವಾಗಲು 2021-22ನೇ ಸಾಲಿಗೆ ಕೆಳಕಂಡ ವಿವಿಧ ಯೋಜನೆಗಳಡಿ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ವಿಕಲಚೇತನರ ಹಾಗೂ ಹಿರಿಯ ಸಬಲೀಕರಣ ಇಲಾಖೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಸಾಧಿಕ್ ಹುಸೇನ್ ಖಾನ್ ಅವರು ತಿಳಿಸಿದ್ದಾರೆ.

ಈಗಾಗಲೇ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಫಲಾನುಭವಿಗಳಿಂದ ಕಡಿಮೆ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದರಿಂದ ಮತ್ತೊಮ್ಮೆ ಪುನ: ಎರಡನೇ ಬಾರಿ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸಿ ಈ  ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. 

 ಅಂಧ ವಿದ್ಯಾರ್ಥಿಗಳಿಗೆ ಬ್ರೈಲ್ ಕಿಟ್ ಯೋಜನೆ, ಶ್ರವಣದೋಷವುಳ್ಳ ವ್ಯಕ್ತಿಗಳಿಗೆ ಹೊಲಿಗೆ ಯಂತ್ರ ಯೋಜನೆ, ಅಂಧ ವಿದ್ಯಾರ್ಥಿಗಳಿಗೆ ಟಾಕಿಂಗ್ ಲ್ಯಾಪಟಾಪ್ ಹಾಗೂ ಶಿಶು ಪಾಲನಾ ಭತ್ಯೆ ಯೋಜನೆಗಳಡಿ ಅರ್ಜಿ ಸಲ್ಲಿಸಬಹುದಾಗಿದೆ.

ನಿಗದಿತ ಅರ್ಜಿ ನಮೂನೆಗಳನ್ನು ಕಲಬುರಗಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಅಥವಾ ಇಲಾಖೆಯ www.dwdsc.kar.nic.in ವೆಬ್‌ಸೈಟ್‌ದಿಂದ ಪಡೆದು ಭರ್ತಿ ಮಾಡಿ 2021ರ ಸೆಪ್ಟೆಂಬರ್ 20 ರೊಳಗಾಗಿ ಸಲ್ಲಿಸಬೇಕು.  ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಯಾವುದೆ ಕಾರಣಕ್ಕೂ ಪರಿಗಣಿಸಲಾಗುವುದಿಲ್ಲ.

ಹೆಚ್ಚಿನ ಮಾಹಿತಿಗಾಗಿ ಈ ಕಚೇರಿ ದೂರವಾಣಿ ಹಾಗೂ ವಿಕಲಚೇತನರ ಸಹಾಯವಾಣಿ ಸಂಖ್ಯೆ 08472-235222 ನ್ನು ಅಥವಾ ತಾಲೂಕು ನೋಡಲ್ ಅಧಿಕಾರಿಗಳು (ಎಸಿಡಿಪಿಓ) ಶಿಶು ಅಭಿವೃದ್ದಿ ಯೋಜನಾಧಿಕಾರಿಗಳ ತಾಲೂಕು ಕಚೇರಿ ಕಲಬುರಗಿ, ಆಳಂದ, ಅಫಜಲಪೂರ, ಚಿತ್ತಾಪೂರ, ಚಿಂಚೋಳಿ, ಜೇವರ್ಗಿ, ಸೇಡಂ. ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತರು (ಎಮ್.ಆರ್.ಡಬ್ಲೂ) ತಾಲೂಕು ಪಂಚಾಯತ ಕಚೇರಿ ಕಲಬುರಗಿ ಮೊಬೈಲ್ ಸಂಖ್ಯೆ 9972079714, ಅಫಜಲಪುರ-9448808141, ಆಳಂದ-9483054495, ಜೇವರ್ಗಿ-9741875881, ಚಿತ್ತಾಪೂರ-9845204328, ಚಿಂಚೋಳಿ-9880671171 ಹಾಗೂ ಸೇಡಂ-9902417925ಗೆ ಸಂಪರ್ಕಿಸಲು ಕೋರಲಾಗಿದೆ.

ದಾಖಲಾತಿಗಳು:

ಆದಾಯ ಪ್ರಮಾಣಪತ್ರ ಹೊಂದಿರಬೇಕು. ಆಧಾರ್ ಕಾರ್ಡ್ ಇರಬೇಕು.ವಯಸ್ಸಿಗೆ ಸಂಬಂಧಿಸಿದಂತೆ ದೃಢೀಕರಣ ಪ್ರಮಾಣ ಪತ್ರ ಇರಬೇಕು. ವಿಕಲಚೇತನರ ಗುರುತಿನ ಚೀಟಿ ಹೊಂದಿರಬೇಕು. ಜಾತಿ ಪ್ರಮಾಣ ಪತ್ರ (1000 ಕ್ಕಿಂತ ಕಡಿಮೆ ಮೌಲ್ಯದ ಸಾಧನ ಸಲಕರಣೆಗಳಿಗೆ  ಕಡ್ಡಾಯವಿಲ್ಲ.

ವಿವಿಧ ವೃತ್ತಿಗಳಲ್ಲಿ ಕೌಶಲ್ಯ ಅಭಿವೃದ್ಧಿ ತರಬೇತಿ ಪಡೆಯಲು ಅರ್ಜಿ ಆಹ್ವಾನ

ಪ್ರಸಕ್ತ 2021-22ನೇ ಸಾಲಿನಲ್ಲಿ ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ತಂತ್ರಜ್ಞಾನ ತರಬೇತಿ ಸಂಸ್ಥೆಗಳ ನೆರವು  ಉಪಯೋಜನೆಯಡಿ ಕಲಬುರಗಿಯ ಜಿ.ಟಿ.ಟಿ.ಸಿ. ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 4, 6 ಹಾಗೂ 12 ತಿಂಗಳ ಅವಧಿಗೆ ವಿವಿಧ ವೃತಿಗಳಲ್ಲಿ ಉಚಿತ ಕೌಶಲ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಅರ್ಹ ನಿರುದ್ಯೋಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ತರಬೇತಿ ಕೇಂದ್ರದ  ಪ್ರಾಂಶುಪಾಲರಾದ ಶ್ರೀ ಜೈರಾಜ ಟಿ. ನರಗುಂದ ಅವರು ತಿಳಿಸಿದ್ದಾರೆ. 

ಎಸ್.ಎಸ್.ಎಲ್.ಸಿ., ಪಿ.ಯು.ಸಿ., ಐ.ಟಿ.ಐ., ಡಿಪ್ಲೋಮಾ ಹಾಗೂ ಬಿ.ಇ. ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು. ತರಬೇತಿ ಅವಧಿಯಲ್ಲಿ ಪ್ರತಿ ತಿಂಗಳು 2500 ರೂ.ಗಳ ಶಿಷ್ಯವೇತನ ನೀಡಲಾಗುತ್ತದೆ. ಆಸಕ್ತಿಯುಳ್ಳ ಅಭ್ಯರ್ಥಿಗಳು 2021ರ ಸೆಪ್ಟೆಂಬರ್ 15 ರೊಳಗಾಗಿ ಕಲಬುರಗಿ ಜಿ.ಟಿ.ಟಿ.ಟಿ. ಕೇಂದ್ರಕ್ಕೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಸಂತ್ರಾಸವಾಡಿ ಎಂ.ಜಿ ರಸ್ತೆಯಲ್ಲಿರುವ ಜಿ.ಟಿ.ಟಿ.ಸಿ ಕೇಂದ್ರ   ಕೇಂದ್ರಕ್ಕೆ ಖುದ್ದಾಗಿ ಸಂಪರ್ಕಿಸಿ ಅಥವಾ ಮೊಬೈಲ್ ಸಂಖ್ಯೆ  8722822497, 9591817050 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.