News

ಸರ್ಕಾರದ ವಿವಿಧ ಸಾಲ ಸೌಲಭ್ಯ ಯೋಜನೆಗಳಿಗೆ ಅರ್ಜಿ ಆಹ್ವಾನ

06 September, 2023 2:43 PM IST By: Maltesh
Application Invitation for Various Loan Facility Schemes of Govt

ಚಿತ್ರದುರ್ಗ: 2023-24ನೇ ಸಾಲಿನ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ದಿ ನಿಗಮದ ವತಿಯಿಂದ ಅಲ್ಪಸಂಖ್ಯಾತರಾದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ಖರು, ಪಾರ್ಸಿಗಳು ಹಾಗೂ ಆಂಗ್ಲೋ ಇಂಡಿಯನ್ ಜನಾಂಗದವರ ಏಳಿಗೆಗಾಗಿ ವಿವಿಧ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದ್ದು, ಯೋಜನೆಗಳ ಸದುಪಯೋಗ ಪಡೆದುಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು https://kmdconline.karnataka.gov.in ವೆಬ್‍ಸೈಟ್ ಮೂಲಕ ಸೆಪ್ಟೆಂಬರ್ 25 ರೊಳಗೆ ಸಲ್ಲಿಸಬೇಕು ಹಾಗೂ ಅರ್ಜಿ ಪ್ರಿಂಟ್ ತೆಗೆದು ಅಗತ್ಯ ದಾಖಲೆಗಳನ್ನು ಹಾರ್ಡ್ ಪ್ರತಿ ಮೂಲಕ ಜಿಲ್ಲಾ ಕಚೇರಿಗೆ ಸಲ್ಲಿಸಬೇಕು.

ಶ್ರಮ ಶಕ್ತಿ ಯೋಜನೆ: ಅಲ್ಪಸಂಖ್ಯಾತರ ಸಮುದಾಯದ ಸಾಂಪ್ರದಾಯಕ ಕುಶಲಕರ್ಮಿಗಳಿಗೆ ಮತ್ತು ಕುಲಕಸುಬುದಾರರಿಗೆ ಅವರ ವೃತ್ತಿ ಕೌಶಲ್ಯವನ್ನು ಅಭಿವೃದ್ದಿ ಪಡಿಸಿಕೊಳ್ಳಲು ಈ ಸಾಲ ನೀಡಲಾಗುತ್ತುದೆ.  ನಿಗಮದಿಂದ ಕಡಿಮೆ ಬಡ್ಡಿದರದಲ್ಲಿ ಅಂದರೆ ಶೇ 4ರ ಬಡ್ಡಿ ದರದಲ್ಲಿ 36 ಕಂತುಗಳಲ್ಲಿ ಮರುಪಾವತಿಸುವ ಷರತ್ತಿನೊಂದಿಗೆ ರೂ.50,000 ವರೆಗೆ ಸಾಲ ಸೌಲಭ್ಯ ನೀಡಲಾಗುವುದು. ಇದರಲ್ಲಿ ಅರ್ಜಿದಾರರಿಗೆ ಶೇ. 50% ರ ಬ್ಯಾಕ್ ಎಂಡ್ ಸಹಾಯಧನವಾಗಿರುತ್ತದೆ.

ಶ್ರಮಶಕ್ತಿ (ವಿಶೇಷ ಮಹಿಳಾ ಯೋಜನೆ): ಅಲ್ಪಸಂಖ್ಯಾತರ ಸಮುದಾಯದ ವಿಧವೆ ವಿಚ್ಚೇದಿತ ಅವಿವಾಹಿತ ಮಹಿಳೆಯರಿಗೆ ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷ ಯೋಜನೆಯಾಗಿದೆ. ಯೋಜನೆಯಡಿ ಶೇ 4ರ ಬಡ್ಡಿದರದಲ್ಲಿ ರೂ. 25,000/- ಸಾಲ ಮತ್ತು ರೂ 25,000/- ಸಹಾಯಧನ ಸೇರಿ ಒಟ್ಟು ರೂ. 50,000/- ವಿವಿಧ ಆರ್ಥಿಕ ಚಟುವಟಿಗಳನ್ನು ಕೈಗೆತ್ತಿಕೊಳ್ಳಲು ಅಥವಾ ಅಭಿವೃದ್ದಿ ಪಡಿಸಿಕೊಳ್ಳಲು ಸಾಲ ಮತ್ತು ಸಹಾಯಧನವನ್ನು ನೀಡಲಾಗುವುದು.

ಗಂಗಾ ಕಲ್ಯಾಣ ಯೋಜನೆ: ಈ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯ ಬಯಸುವ ಫಲಾನುಭವಿಗಳು ಸಣ್ಣ ಮತ್ತು ಅತಿಸಣ್ಣ ರೈತರಾಗಿರಬೇಕು. ಪ್ರತಿ ಫಲಾನುಭವಿ ಕನಿಷ್ಠ 1ಎಕರೆ 20 ಗುಂಟೆ (1ಎಕರೆ 50 ಸೆಂಟ್ಸ್) ಎಕರೆಯಿಂದ ಗರಿಷ್ಠ 5 ಎಕರೆವರೆಗೆ ಖುಷ್ಕಿ ಜಮೀನು ಹೊಂದಿರುವ ಮತ್ತು ವ್ಯವಸಾಯ ವೃತ್ತಿಯನ್ನೇ ಅವಲಂಬಿಸಿದೆ. ಗ್ರಾಮೀಣ ಪ್ರದೇಶಗಳಲ್ಲಿ ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ರೂ.96,000/- ಮೀರಿರದ, ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರುವ ಅರ್ಜಿದಾರರಿಗೆ ನಿಗಮದಿಂದ ರೂ 3 ಲಕ್ಷ ಸಹಾಯಧನದಲ್ಲಿ ಕೋಳವೆಬಾವಿ ಸೌಲಭ್ಯ ನೀಡಲಾಗುತ್ತದೆ.

ಟ್ಯಾಕ್ಸಿ, ಗೂಡ್ಸ್, ಆಟೋರಿಕ್ಷ ವಾಹನ ಖರೀದಿಸಲು ಸಹಾಯಧನ ಯೋಜನೆ: ಈ ಯೋಜನೆಯನ್ನು ನಿಗಮದ ವತಿಯಿಂದ ರಾಷ್ಟ್ರೀಕೃತ ಬ್ಯಾಂಕ್‍ಗಳ ಸಹಾಯಧನದೊಂದಿಗೆ ಅನುಷ್ಠಾನಗೊಳಿಲಾಗುತ್ತದೆ. ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿ ಬ್ಯಾಂಕ್‍ಗಳಿಂದ ಮಂಜೂರಾತಿ ಪಡೆದ ಫಲಾನುಭವಿಗಳಿಗೆ ಟ್ಯಾಕ್ಸಿ, ಗೂಡ್ಸ್, ಆಟೋರಿಕ್ಷ ವಾಹನ ಖರೀಧಿಸಲು ವಾಹನದ ಮೌಲ್ಯದ ಶೇ.33% ರಷ್ಟು ಸಹಾಯಧನ ಗರಿಷ್ಠ ರೂ 3ಲಕ್ಷ ಸಹಾಯಧನವನ್ನು ನೀಡಲಾಗುತ್ತದೆ.

ವೃತ್ತಿ ಪ್ರೋತ್ಸಹ ಯೋಜನೆ: ಅಲ್ಪಸಂಖ್ಯಾತರ ಸಮುದಾಯದ ಜನರಿಗೆ ಹಣ್ಣು ಹಂಪಲು ಮಾರಾಟ, ಕೋಳಿ ಮತ್ತು ಮೀನು ಮಾರಾಟಟ, ಬೇಕರಿ, ಲ್ಯಾಂಡ್ರಿ, ಡ್ರೈ ಕ್ಲೀನಿಂಗ್, ಬ್ಯೂಟಿ ಪಾರ್ಲರ್, ವಾಟರ್ ವಾಶ್ ಪಂಕ್ಚರ್ ಮ್ಯಾಕನಿಕ್ ಶಾಫ್ ಬಿದರಿ ಕೆಲಸ, ಗೊಂಬೆ ತಯಾರಿಕೆ ಇತ್ಯಾದಿ ಚಟುವಟಿಕೆಗಳನ್ನು ಪ್ರಾರಂಭಿಸಲು ಅಥವಾ ಅಭಿವೃದ್ದಿ ಪಡಿಸಲು ನಿಗಮದಿಂದ ಶೇ 50% ಸಹಾಯಧನ ನೀಡಲಾಗುವುದು.