News

ಪ್ರಧಾನಮಂತ್ರಿ ಮತ್ಯ ಸಂಪದ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

22 December, 2022 5:42 PM IST By: Kalmesh T
Application Invitation for Subsidy under Pradhan Mantri Matsya Sampad Yojana

1 . COVID ನಿಮಿತ್ತ ಕೇಂದ್ರ ಸರ್ಕಾರದಿಂದ ತುರ್ತು ಸಭೆ: ಜನನಿಬಿಡ ಪ್ರದೇಶದಲ್ಲಿ ಮಾಸ್ಕ್‌ ಧರಿಸಲು ಸೂಚನೆ

2 . ಮೀನುಗಾರಿಕೆ ಮತ್ತು ಜಲಕೃಷಿ ಪ್ರಗತಿಗೆ ಮೀನುಗಾರಿಕೆ ಇಲಾಖೆಯ ಕ್ರಮ

3 . ಚರ್ಮಗಂಟು ರೋಗ ನಿಯಂತ್ರಿಸಲು 37.5 ಲಕ್ಷ ಲಸಿಕೆ ಜಿಲ್ಲೆಗಳಿಗೆ: ಪ್ರಭು ಚವ್ಹಾಣ

4 . ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ಬಿಳಿಜೋಳ ಖರೀದಿ ಕೇಂದ್ರಗಳು ಆರಂಭ

5 . ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

6 . ಟೊಮೆಟೊ ದರ ಕುಸಿತ: ಹೊಲದಲ್ಲೆ ಟೊಮೆಟೊ ಚೆಲ್ಲಿ ರೈತನ ಆಕ್ರೋಶ

7 . ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅನ್ನದಾತರಿಂದ ಬೆಳಗಾವಿ ಚಲೋ

8 . ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯುವಂತೆ ಆಗ್ರಹಿಸಿ ಹೆದ್ದಾರಿ ತಡೆ

9 . ಕೇಂದ್ರ ಸರ್ಕಾರ ಹಮ್ಮಿಕೊಂಡ "ರಾಗಿ ಉಪಹಾರ" ಕರ್ನಾಟಕದ ಬಾಣಸಿಗರಿಂದ ತಯಾರಿ

10 . ಅಮೆರಿಕ ಸಮ್ಮೇಳನಕ್ಕೆ ಮಂಡ್ಯದ ಕೃಷಿ ವಿದ್ಯಾರ್ಥಿನಿ ಆಯ್ಕೆ

1-One

ಚೀನಾದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ  ಇಲಾಖೆಯು ತುರ್ತು ಸಭೆಯನ್ನು ನಡೆಸಿದೆ.

ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಬುಧವಾರ ಉನ್ನತ ಮಟ್ಟದ ಸಭೆ ನಡೆಯಿತು.

ಈ ವೇಳೆ ಜನನಿಬಿಡ ಸ್ಥಳಗಳಲ್ಲಿ ಮಾಸ್ಕ್‌ ಧರಿಸುವಂತೆ  ಸಲಹೆ ನೀಡಲಾಗಿದೆ.

ಕಿಕ್ಕಿರಿದ ಜಾಗದಲ್ಲಿ, ಒಳಾಂಗಣದಲ್ಲಿ ಅಥವಾ ಹೊರಾಂಗಣದಲ್ಲಿದ್ದರೆ ಕಡ್ಡಾಯವಾಗಿ ಮಾಸ್ಕ್ ಬಳಸಿ.

ಉಸಿರಾಟ ಮತ್ತು ಆರೋಗ್ಯ ಸಮಸ್ಯೆ ಇರುವವರು ಅಥವಾ  ವಯಸ್ಸಾದವರು ಮತ್ತಷ್ಟು ಮುತುವರ್ಜಿ ವಹಿಸಬೇಕು

 ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ತಿಳಿಸಿದ್ದಾರೆ. 

ದೇಶದಲ್ಲಿ ಕೇವಲ 27-28% ಜನರು ಮುನ್ನೆಚ್ಚರಿಕೆ ಡೋಸ್ ತೆಗೆದುಕೊಂಡಿದ್ದಾರೆ.

ಮುನ್ನೆಚ್ಚರಿಕೆ ಡೋಸ್ ತೆಗೆದುಕೊಳ್ಳಲು ಎಲ್ಲರಿಗೂ ಮನವಿ ಮಾಡುತ್ತೇವೆ. ಮುನ್ನೆಚ್ಚರಿಕೆ ಡೋಸ್ ಎಲ್ಲರಿಗೂ ಕಡ್ಡಾಯವಾಗಿದೆ ಎಂದರು.

 

2-Two

ಭಾರತ ಸರ್ಕಾರದ ಮೀನುಗಾರಿಕೆ ಇಲಾಖೆಯು ನಡೆಸುತ್ತಿರುವ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ

ಒಳನಾಡು ಮೀನುಗಾರಿಕೆಯ ಅಭಿವೃದ್ಧಿಯನ್ನು ತೀವ್ರಗೊಳಿಸಲು ಮತ್ತು ವೈವಿಧ್ಯಗೊಳಿಸಲು ನಿರ್ಧರಿಸಿದೆ.

ವಿವಿಧ ಜಾತಿಗಳನ್ನು ವಿಸ್ತರಿಸುವುದು, ಹೊಸ ಜಾತಿಗಳನ್ನು ಪರಿಚಯಿಸುವುದು

ಮತ್ತು ಬೇಡಿಕೆ ಪೂರೈಕೆಯಲ್ಲಿನ ಅಂತರವನ್ನು ತುಂಬುವ ಮೂಲಕ ಗುಣಮಟ್ಟದ ಉತ್ಪನ್ನಗಳನ್ನು ಉತ್ಪಾದಿಸಲು ಉತ್ತೇಜಿಸುವುದು.

ಆಯಾ ತಳಿಗಳಿಗೆ ಸೂಕ್ತವಾದ ಆಹಾರದ ಆಯ್ಕೆ, ಉತ್ತಮ ಸಂತಾನವೃದ್ಧಿ,

ತಳೀಯವಾಗಿ ಸುಧಾರಿತ ತಳಿಗಳ ಪ್ರಮುಖ ಕ್ರಮಗಳು.

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರಿಕಾ ಇಲಾಖೆಯು

ಮೀನು ಕೃಷಿಕರ ವೈಜ್ಞಾನಿಕ ಪ್ರವಾಸಗಳು, ತರಬೇತಿ ಮತ್ತು ಮೀನು ಸಾಕಣೆ

ಮತ್ತು ಜಲಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಪರಿಚಯಿಸುವುದನ್ನು ಸಹ ಬೆಂಬಲಿಸುತ್ತಿದೆ.

 

3-Three

ರಾಜ್ಯದಲ್ಲಿ ಚರ್ಮಗಂಟು ರೋಗ ನಿಯಂತ್ರಿಸುವ ಉದ್ದೇಶದಿಂದ 35 ಲಕ್ಷ ಡೋಸ್ ಲಸಿಕೆಗಳನ್ನು ಖರೀದಿಸಲಾಗಿದೆ

ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್   ತಿಳಿಸಿದ್ದಾರೆ.

ಚರ್ಮಗಂಟು ರೋಗವನ್ನು ನಿಯಂತ್ರಿಸುವ ಉದ್ದೇಶದಿಂದ ಹಾವೇರಿ, ಬಳ್ಳಾರಿ, ಚಿತ್ರದುರ್ಗ,

ಧಾರವಾಡ, ಉಡುಪಿ ಹಾಗೂ ರಾಯಚೂರು ಜಿಲ್ಲೆಗಳಿಗೆ ತಲಾ  5ಲಕ್ಷ ರೂಪಾಯಿಗಳಂತೆ

ಒಟ್ಟು 30 ಲಕ್ಷ ರೂಪಾಯಿ ಅನುದಾನವನ್ನು ತುರ್ತು ಔಷಧ ಪೂರೈಕೆಗೆ ಬಿಡುಗಡೆ ಮಾಡಲಾಗಿದೆ ಎಂದರು.

ಚರ್ಮಗಂಟು ರೋಗ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಕೇಳಿದ ಪ್ರಶ್ನೆಗೆ ಸದನದಲ್ಲಿ ಉತ್ತರಿಸಿದ ಅವರು, ಕೇಂದ್ರ ಸರ್ಕಾರದ ಅನುದಾನದಲ್ಲಿ ಪ್ರತಿ ಡೋಸ್ಗೆ 5ರೂಪಾಯಿ 25 ಪೈಸೆಯಂತೆ 37 ಲಕ್ಷ ಲಸಿಕೆಗಳನ್ನು ಖರೀದಿಸಿ

ಜಿಲ್ಲೆಗಳಿಗೆ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು. 

ಬೆಂಗಳೂರಿನ ಹೆಬ್ಬಾಳದಲ್ಲಿರುವ ರಾಜ್ಯದ ಪ್ರಾಣಿ ಆರೋಗ್ಯ ಮತ್ತು ಜೈವಿಕ ಸಂಸ್ಥೆ ವತಿಯಿಂದ

35 ಲಕ್ಷ ಡೋಸ್ ಲಸಿಕೆಗಳನ್ನು ರಾಜ್ಯ ಸರ್ಕಾರದಿಂದ ಜಿಲ್ಲೆಗಳಿಗೆ ವಿತರಿಸಲಾಗಿದೆ ಎಂದರು.

ಚರ್ಮಗಂಟು ರೋಗದ ಚಿಕಿತ್ಸೆಗೆ ಔಷಧಿ ಮತ್ತು ಪೂರಕ ರಾಸಾಯನಿಕಗಳನ್ನು ಪೂರೈಸಲು ಹಾಗೂ ಪರಿಹಾರ ಧನಕ್ಕೆ 11ಕೋಟಿ ಹೆಚ್ಚುವರಿ ಅನುದಾನಕ್ಕಾಗಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಜಾನುವಾರುಗಳಿಗೆ ಲಸಿಕೆ ಹಾಕಲು ಪಶುಸಂಗೋಪನಾ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ,

ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ತರಬೇತಿ ಪಡೆದ ಲಸಿಕೆದಾರರು, ಮೈತ್ರಿ ಕಾರ್ಯಕರ್ತರನ್ನು

ಲಸಿಕಾ ಕಾರ್ಯಕ್ರಮಕ್ಕೆ  ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.

 

4-Four

2022-23ನೇ ಸಾಲಿನ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮತ್ತು ಬಿಳಿಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿರುತ್ತದೆ.

ಸದರಿ ತಾಲ್ಲೂಕುಗಳ ಸುತ್ತಮುತ್ತಲೂ ಭತ್ತ ಮತ್ತು ಬಿಳಿಜೋಳ ಬೆಳೆದ ರೈತರು

ತಮ್ಮ ವ್ಯಾಪ್ತಿಗೆ ಬರುವ ಖರೀದಿ ಕೇಂದ್ರಗಳಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಳ್ಳುವಂತೆ ಧಾರವಾಡ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಕೃಷಿ ಇಲಾಖೆಯಿಂದ ನೀಡಿದ FRUITS ನೋಂದಣಿ ಸಂಖ್ಯೆಯನ್ನು ಒದಗಿಸಿ ರೈತರು ನೋಂದಣಿ ಆಗತಕ್ಕದ್ದು.

ರೈತರು ಬೆಳೆದಿರುವ ಬೆಳೆಯ ಮಾಹಿತಿ “FRUITS” ದತ್ತಾಂಶದಲ್ಲಿ ಲಭ್ಯವಿಲ್ಲದಿದ್ದರೆ

ರೈತರು ತಕ್ಷಣ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ

ಬೆಳೆ ಮಾಹಿತಿಯನ್ನು “ಪ್ರೂಟ್ಸ್” ದತ್ತಾಂಶದಲ್ಲಿ ಸೇರ್ಪಡಿಸಿ ನಂತರ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ನೋಂದಾಯಿಸತಕ್ಕದ್ಧು ಎಂದು ತಿಳಿಸಿದ್ದಾರೆ.

ಪ್ರತಿ ರೈತರಿಂದ ಎಕರೆಗೆ 25 ಕ್ವಿಂಟಲ್ ಹಾಗೂ ಗರಿಷ್ಟ 40 ಕ್ವಿಂಟಲ್ ಮಿರದಂತೆ ಭತ್ತ ಹಾಗೂ ಬಿಳಿಜೋಳ ಖರೀದಿಸಲಾಗುವುದು. 

ರೈತರು ತಮ್ಮ “ಪ್ರೂಟ್ಸ್” ಗುರುತಿನ ಸಂಖ್ಯೆಯೊಂದಿಗೆ ನೋಂದಾಯಿಸಿದ ನಂತರ

ತಾವು ಬೆಳೆದ ಭತ್ತದ ಮಾದರಿಯೊಂದಿಗೆ ಬಂದು ತಾವು ಖರೀದಿಗೆ ನೀಡಬಹುದಾದ ದಿನಾಂಕದ ವಿವರಗಳನ್ನು ಖರೀದಿ ಕೇಂದ್ರಗಳಲ್ಲಿ ಪಡೆಯಬಹುದು.

ಜಿಲ್ಲೆಯ ರೈತರು ಜನವರಿ 31,2023 ರಿಂದ ಮಾರ್ಚ್‌ 31, 2023ರ ಒಳಗಾಗಿ

ಈಗಾಗಲೇ ಸ್ಥಾಪಿಸಲಾದ ಖರೀದಿ ಕೇಂದ್ರಗಳಿಗೆ ಒದಗಿಸಿ ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು  ತಿಳಿಸಿದ್ದಾರೆ.

 

5 – Five

ಕೊಪ್ಪಳದಲ್ಲಿ ಪ್ರಧಾನಮಂತ್ರಿ ಮತ್ಯ ಸಂಪದ ಯೋಜನೆಯಡಿ ಜಿಲ್ಲಾ ಮೀನುಗಾರಿಕೆ ಇಲಾಖೆ

ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಿದೆ. ಯೋಜನೆಯಡಿ ಬಯೋಫ್ಲಾಕ್, ಮೀನುಮರಿ ಕೊಳಗಳ ನಿರ್ಮಾಣ

ಮತ್ತು ಹೂಡಿಕೆ ವೆಚ್ಚ, ಆರ್‌ಎಎಸ್ ಘಟಕ, ಅಕ್ಟೇರಿಯಂ ಕಿಯೋಸ್ಕ ಸೈಕಲ್ ಮತ್ತು

ಶಾಖ ನಿರೋಧಕ ಪೆಟ್ಟಿಗೆ ಖರೀದಿ ಸೇರಿ ವಿವಿಧ ಘಟಕಗಳಿಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಿದ್ದು,

ಆಸಕ್ತರು ಒಂದು ವಾರದೊಳಗೆ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆ ಎಡಿ ತಿಳಿಸಿದ್ದಾರೆ.

 

6-Six

ಟೊಮೆಟೊ ದರ ತೀವ್ರ ಕುಸಿತಗೊಂಡ ಕಾರಣ  ಹೊಲದಲ್ಲೇ ಟೊಮೆಟೊ ಚೆಲ್ಲಿ ರೈತರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ.

ಗ್ರಾಮದ ರೈತ ಅಜ್ಜಪ್ಪ ಬನ್ನಿ ಒಂದೂವರೆ ಎಕರೆ ಜಮೀನಿನಲ್ಲಿ ₹40 ಸಾವಿರ ಖರ್ಚು ಮಾಡಿ ಟೊಮೆಟೊ ಬೆಳೆದಿದ್ದರು.

ಆದರೆ ಮಾರುಕಟ್ಟೆಯಲ್ಲಿ ದರ ತೀವ್ರ ಕುಸಿದ ಪರಿಣಾಮ ಹಾಕಿದ ಖರ್ಚು ಸಿಗಲಿಲ್ಲ ಎಂದು ಕಂಗಾಲಾಗಿದ್ದಾರೆ.

25 ಕೆ.ಜಿ.ಯ ಟೊಮೆಟೊ ಬಾಕ್ಸ್‌ಗೆ ಸುಮಾರು 500ರಿಂದ 600 ದರ ನಿರೀಕ್ಷಿಸಲಾಗಿತ್ತು.

ಆದರೆ ಮಾರುಕಟ್ಟೆಯಲ್ಲಿ ಕೇವಲ ₹70 ರೂಪಾಯಿಗೆ ದರ ಕುಸಿದ ಕಾರಣ, ಟೊಮೆಟೊಗಳನ್ನು ಹೊಲದಲ್ಲೆ ಸುರಿದಿದ್ದಾರೆ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಉತ್ತಮ ಇಳುವರಿ ಬಂದರೂ ಉತ್ತಮ ದರ ಸಿಗುತ್ತಿಲ್ಲ. ಬೀಜ–ಗೊಬ್ಬರ, ಉಳುಮೆ, ಕಾರ್ಮಿಕರ ಖರ್ಚು ಬರುತ್ತಿಲ್ಲ.

ಸಾಲ ಮಾಡಿ ಟೊಮೆಟೊ ಬೆಳೆದು ಕಣ್ಣೀರು ಹಾಕುವಂತಾಗಿದೆ ಎಂದು ಅಜ್ಜಪ್ಪ ಬನ್ನಿ ಬೇಸರ ವ್ಯಕ್ತಪಡಿಸಿದ್ದಾರೆ.

 

7-Seven

ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಡಿಸೆಂಬರ್‌ 27ರಂದು

ಬೆಳಗಾವಿ ಚಲೋ ನಡೆಸಲು ಅಖಿಲ ಭಾರತ ಕಿಸಾನಸಭಾ ಕರ್ನಾಟಕ ರಾಜ್ಯ ಮಂಡಳಿ ಮುಂದಾಗಿದೆ. 

ಕೃಷಿ ಪಂಪ್ ಸೆಟ್‌ಗಳಿಗಾಗಿ ಅಕ್ರಮ ಸಕ್ರಮವೂ ಸೇರಿದಂತೆ ಅರ್ಜಿ ಸಲ್ಲಿಸಿದ ಎಲ್ಲಾ ರೈತರಿಗೂ

ಕ್ರಮಬದ್ಧ ವಿದ್ಯುತ್ ಸಂಪರ್ಕ, ಉತ್ತಮ ಹಾಗೂ ಸಮರ್ಪಕ ಟಿ.ಸಿ ಅಳವಡಿಸಬೇಕು.

20 ವರ್ಷದಿಂದ ನಿಲ್ಲಿಸಿರುವ ಠೇವಣಿ ಆಧಾರಿತ ಸಾಮಾನ್ಯ ವಿದ್ಯುತ್ ಸಂಪರ್ಕ ಪುನರ್ ಪ್ರಾರಂಭಿಸಿ

ರೈತರಿಗೆ ಅಕ್ರಮ ಸಕ್ರಮ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಲದೇ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡುವ ಫಾರಂ-50, 53

ಮತ್ತು ವಿಶೇಷವಾಗಿ ತೋಗರಿ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ, ಜಾನುವಾರು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು.

MSP ಬೆಲೆ ನಿಗದಿಗಾಗಿ ಮತ್ತು ಕಬ್ಬಿಗೆ ಸಕ್ಕರೆ ಇಳುವರಿಗೆ ಆಧಾರಿತ ಬೆಲೆ ನಿಗದಿ ಮಾಡಬೇಕು.

ಕರ್ನಾಟಕ ರಾಜ್ಯದ ಬಹು ಭಾಗದಲ್ಲಿ ಬ್ರಿಡ್ಜ್ ಕಮ್ ಬ್ಯಾರೇಜ್‌ ಹಾಗೂ ಕೇಟೀ ವೈಯರ್‌ ನಿರ್ಮಿಸಿ

ಕೃಷಿಗೆ ನೀರಾವರಿ ಅನುಕೂಲ ಮಾಡಿಕೊಡಬೇಕು ಎನ್ನುವುದು ಪ್ರಮುಖ ಬೇಡಿಕೆಗಳಾಗಿವೆ.

 

 

8-Eight

ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆಯಬೇಕು ಹಾಗೂ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಆಗ್ರಹಿಸಿ

ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕದ ಕಾರ್ಯಕರ್ತರು ಚಾಮರಾಜನಗರದಲ್ಲಿ ಬುಧವಾರ ಹೆದ್ದಾರಿ ತಡೆ ನಡೆಸಿದರು.

ಸಂತೇಮರಹಳ್ಳಿ ವೃತ್ತದ ಬಳಿಯ ಅಂಚೆ ಕಚೇರಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತು

ವಾಹನ ಸಂಚಾರ ತಡೆದ ಪ್ರತಿಭಟನಕಾರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್‌ ಖಾಸಗೀಕರಣವನ್ನು ಕೈ ಬಿಡಬೇಕು.

ಕಾಡು ಪ್ರಾಣಿಗಳ ದಾಳಿಯಿಂದ ರೈತರ ಪ್ರಾಣ ಹಾಗೂ ಫಸಲುಗಳಿಗೆ ರಕ್ಷಣೆ ನೀಡುವುದರ ಜೊತೆಗೆ ನಷ್ಟ ತುಂಬಿಕೊಡಬೇಕು.

ಪ್ರತಿ ಟನ್‌ ಕಬ್ಬಿಗೆ ₹4000 ಬೆಲೆ ನಿಗದಿ ಮಾಡಬೇಕು’ ಎಂದು ಒತ್ತಾಯಿಸಿದರು.

 

9-Nine

ರಾಗಿ ವರ್ಷ 2023ರ ನೆನಪಿಗಾಗಿ ಕೇಂದ್ರ ಕೃಷಿ ಸಚಿವ ನರೇಂದ್ರಸಿಂಗ್ ತೋಮರ್ ಅವರು ಆಯೋಜಿಸಿದ್ದ

ರಾಗಿ ಊಟಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಸಂಸತ್ತಿನ ಸದಸ್ಯರು ಆಗಮಿಸಿದ್ದರು.

"ರಾಗಿ ಮತ್ತು ಜೋಳದಿಂದ ತಯಾರಿಸಿದ ಸಿಹಿತಿಂಡಿಗಳನ್ನು ತಯಾರಿಸಲಾಗಿತ್ತು.

ಇದಕ್ಕಾಗಿ ವಿಶೇಷವಾಗಿ ಕರ್ನಾಟಕದಿಂದ ಬಾಣಸಿಗರನ್ನು ಕರೆತಂದದ್ದು ವಿಶೇಷ ಎಂದು ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕೋರಿಕೆಯ ಮೇರೆಗೆ ವಿಶ್ವಸಂಸ್ಥೆಯು

2023 ಅನ್ನು ಅಂತರರಾಷ್ಟ್ರೀಯ ರಾಗಿ ವರ್ಷ ಎಂದು ಗೊತ್ತುಪಡಿಸಿದೆ.

ಏಪ್ರಿಲ್ 2018 ರಲ್ಲಿ ಭಾರತ ಸರ್ಕಾರವು ರಾಗಿಯನ್ನು ಪೌಷ್ಟಿಕ ಏಕದಳ ಎಂದು ಗೊತ್ತುಪಡಿಸಿತು

ಮತ್ತು ಪೋಶನ್ ಮಿಷನ್ ಅಭಿಯಾನದಲ್ಲಿ ರಾಗಿಯನ್ನು ಸಹ ಸೇರಿಸಲಾಯಿತು.

 

10-Ten

ರಾಗಿ ಪೌಷ್ಟಿಕಾಂಶದ ಬಗ್ಗೆ ಸಂಶೋಧನೆ ನಡೆಸಿರುವ ವಿದ್ಯಾರ್ಥಿನಿ ಪ್ರೀತಿ ಬೆಳಗಾವಿ ಜಿಲ್ಲೆಯವರು.

ರಾಗಿಯಲ್ಲಿರುವ ಅಪೂರ್ವ ಪೌಷ್ಟಿಕಾಂಶ ಕುರಿತು ಸಂಶೋಧನೆ ನಡೆಸಿರುವ

ಮಂಡ್ಯ ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯೊಬ್ಬರು ಅಮೆರಿಕದ ಕ್ಯಾಲಿಪೋರ್ನಿಯಾದಲ್ಲಿರುವ

ಸ್ಯಾಂಡಿಗೋದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಸಮ್ಮೇಳನಕ್ಕೆ ಆಯ್ಕೆಯಾಗಿದ್ದಾರೆ.

ಜ.13ರಿಂದ 18ರವರೆಗೆ ಈ ಸಮ್ಮೇಳನ ನಡೆಯಲಿದೆ.

ಪ್ರೀತಿ ಕಾಂಬಳೆ ರಾಗಿ ಕುರಿತು ಮಾಡಲಾದ ಸಂಶೋಧನೆಯನ್ನು ಮಂಡಿಸಲು ಅವಕಾಶವನ್ನು ಪಡೆದಿದ್ದಾರೆ.

ಮೂಲತಃ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕು ಹಾಲಿ ತಿದನೂರು ಗ್ರಾಮದವರಾದ ಪ್ರೀತಿ

ಎ.ಸಿ.ಫಾರಂ ಕೃಷಿ ವಿಶ್ವವಿದ್ಯಾಲಯದಲ್ಲಿ ಎರಡನೇ ವರ್ಷದ ಎಂಎಸ್ಸಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಇವಿಷ್ಟು ಈ ಹೊತ್ತಿನ ಪ್ರಮುಖ ಕೃಷಿ ಸುದ್ದಿಗಳು

ಇನ್ನೂ ಹೆಚ್ಚಿನ ಕೃಷಿ ಸಂಬಂಧಿ ಮಾಹಿತಿಗಳಿಗಾಗಿ ನೋಡ್ತಾಯಿರಿ ಕೃಷಿ ಜಾಗರಣ ಕನ್ನಡ.  

ನಮಸ್ಕಾರ…