News

ನ್ಯಾಯಬೆಲೆ ಅಂಗಡಿಯ ಹೊಸ ಡೀಲರ್‌ಶಿಪ್‌ಗಾಗಿ ಅರ್ಜಿ ಆಹ್ವಾನ

14 July, 2021 6:50 PM IST By:

ಕಲಬುರಗಿ ಜಿಲ್ಲೆಯ ಚಿತ್ತಾಪೂರ ತಾಲ್ಲೂಕಿನ ಕೊಡದೂರು ಗ್ರಾಮದಲ್ಲಿನ ನ್ಯಾಯಬೆಲೆ ಅಂಗಡಿ ಸಂಖ್ಯೆ 97ಕ್ಕೆ ಹೊಸ ಡೀಲರ್ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರ ಇಲಾಖೆಗಳ ಉಪನಿರ್ದೇಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕೊಡದೂರು ಗ್ರಾಮದಲ್ಲಿದ್ದ ನ್ಯಾಯಬೆಲೆ ಅಂಗಡಿ ಸಂಖ್ಯೆ 97ರ ವರ್ತಕರಾದ ವೀರಣ್ಣಗೌಡ ತಂದೆ ಸಿದ್ರಾಮಪ್ಪ ಪಾಟೀಲ್ ಅವರು ಅನಾರೋಗ್ಯದ ಕಾರಣ ತಮ್ಮ ಡೀಲರ್‌ಶಿಪ್‌ಗೆ ರಾಜೀನಾಮೆ ನೀಡಿದ್ದಾರೆ. ಚಿತ್ತಾಪುರ ತಹಸೀಲ್ದಾರರ ವರದಿಗಳನ್ನು ಆಧಾರಿಸಿ ಕಾರ್ಯಾಲಯದ ಅಧಿಕೃತ ಆದೇಶದನ್ವಯ ರಾಜೀನಾಮೆ ಅಂಗೀಕರಿಸಿ ಸದರಿಯವರು ಹೊಂದಿದ ನ್ಯಾಯಬೆಲೆ ಅಂಗಡಿ ಸಂಖ್ಯೆ 97 ರ ಪ್ರಾಧಿಕಾರ ಸಂಖ್ಯೆ: 647/95 ಯನ್ನು ರದ್ದುಪಡಿಸಿ ಆದೇಶಿಸಲಾಗಿರುತ್ತದೆ. ಅದರಂತೆ ತಹಸೀಲ್ದಾರÀರು ಸದರಿ ನ್ಯಾಯಬೆಲೆ ಅಂಗಡಿ ಪಡಿತರ ಚೀಟಿದಾರರಿಗೆ ಪಡಿತರ ವಿತರಣೆಯ ಪರ್ಯಾಯ ವ್ಯವಸ್ಥೆಯನ್ನು ಮಾಡಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.

ಚಿತ್ತಾಪುರ ತಹಸೀಲ್ದಾರರ ಶಿಫಾರಸ್ಸಿನನ್ವಯ ಚಿತ್ತಾಪೂರ ತಾಲ್ಲೂಕಿನ ಕೊಡದೂರು ಗ್ರಾಮದ ಪಡಿತರ ಚೀಟಿದಾರರ ಹಿತದೃಷ್ಟಿಯಿಂದ ರದ್ದಾದ ನ್ಯಾಯಬೆಲೆ ಅಂಗಡಿ ಸಂಖ್ಯೆ: 97 ರ ಹೊಸ ಡೀಲರ್ ನೇಮಕಾತಿಗಾಗಿ ಪ್ರಕಟಣೆ ಹೊರಡಿಸಲಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ 54 ಎಎವೈ 424 ಪಿಹೆಚ್‌ಹೆಚ್ ಹಾಗೂ 54 ಎನ್‌ಪಿಹೆಚ್‌ಹೆಚ್ ಸೇರಿ ಒಟ್ಟು 532 ಪಡಿತರ ಚೀಟಿಗಳಿರುತ್ತವೆ. ನ್ಯಾಯಬೆಲೆ ಅಂಗಡಿ ಡೀಲರ್‌ಶಿಪ್ ನೇಮಕಾತಿಗಾಗಿ ದಿನಾಂಕ: 15-7-2021 ರಿಂದ ದಿನಾಂಕ: 14-8-2021 ಸಾಯಂಕಾಲ 5.30 ಗಂಟೆ ಒಳಗಾಗಿ  ಉಪನಿರ್ದೇಶಕರ ಕಚೇರಿ, ಆಹಾರ, ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ, ಕೊಠಡಿ ಸಂಖ್ಯೆ 01. ಮಿನಿ ವಿಧಾನಸೌಧ, ಕಲಬುರಗಿ-585102 ಇಲ್ಲಿ ನಿಗದಿತ ನಮೂನೆ-ಎ ರಲ್ಲಿ ಎಲ್ಲಾ ನಿಗದಿಪಡಿಸಿದ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ ಸ್ವೀಕೃತಿ ಪಡೆಯತಕ್ಕದ್ದು, ಷರತ್ತು, ನಿಯಮ, ಅರ್ಹತೆ ಮುಂತಾದ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಲಬುರಗಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೌಶಲ್ಯ ತರಬೇತಿ ಕಾರ್ಯಕ್ರಮಕ್ಕೆ ಅರ್ಜಿ ಅಹ್ವಾನ

ಆಕಾಂಕ್ಷಾ ಸಿ.ಎಸ್.ಆರ್ ಕಾರ್ಯಕ್ರಮದಡಿಯಲಿ ಅಪೊಲ್ಲಾ ಮೇಡಿಸ್ಕಿಲ್ಸ್ ಸಂಸ್ಥೆಯಿಂದ “ವಿಶ್ವಕೌಶಲ್ಯ ದಿನಾಚರಣೆ” ಪ್ರಯುಕ್ತ ಆನ್ ಲೈನ್ ಕೌಶಲ್ಯ ತರಬೇತಿ ಕಾರ್ಯಕ್ರಮವು ಜುಲೈ 15ರಂದು ಹಮ್ಮಿಕೊಂಡಿದ್ದು ಅರ್ಹ ಅಭರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಅಪೊಲ್ಲಾ ಮೇಡಿಸ್ಕಿಲ್ಸ್ ಸಂಸ್ಥೆಯು 12000 ಅಭ್ಯರ್ಥಿಗಳಿಗೆ ಆರೋಗ್ಯ ವಲಯದಲ್ಲಿ 10 ರಿಂದ 20 ದಿನದ ಆನ್‌ಲೈನ್ ಕೌಶಲ್ಯ ತರಬೇತಿಯನ್ನು ನೀಡಲಿದೆ, 10 ಮತ್ತು 12ನೇ ತರಗತಿಯಲ್ಲಿ ಉತ್ತೀರ್ಣರಾದ ಅಥವಾ ಶಾಲೆ ಬಿಟ್ಟಿರುವ ಮಕ್ಕಳು ಈ ತರಬೇತಿಗೆ ಅರ್ಹರಾಗಿದ್ದು ಈ ಕೌಶಲ್ಯ ತರಬೇತಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಕೋರಲಾಗಿದೆ.

ಅರ್ಹ ಅಭರ್ಥಿಗಳು ಹೆಸರು ನೊಂದÀಣಿಗೆ ನೀಡಿರುವ ಲಿಂಕ್‌ನ್ನು ಕ್ಲಿಕ್ ಮಾಡಿ APPOLLA MEDSKILLS URL:https//forms.gle/6yBMYeamKcRpg4fc6 ಹೆಸರು ನೊಂದಣೆ ಮಾಡಬಹುದಾಗಿದೆ   ಹೆಚ್ಚಿನ ಮಾಹಿತಿಗಾಗಿ ಕಲಬುರಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಚೇರಿಗೆ ಸಂಪರ್ಕಿಸಲು ಕೋರಲಾಗಿದೆ.