ಇಂದಿನ ಹವಾಮಾನ ಇಲಾಖೆ ಮುಂದಿನ 48 ಘಂಟೆಗಳು ಕರಾವಳಿಯ ಎಲ್ಲ ಜಿಲ್ಲೆಗಳ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ರಾಮನಗರ, ಶಿವಮೊಗ ಜಿಲ್ಲೆಗಳು ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಮಳೆ ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ. ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ.
ಗುಡುಗು ಮುನ್ನೆಚರಿಕೆಯನ್ನು ನೋಡುವುದಾದರೆ ದಿನ 24 ಘಂಟೆಗಳು ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಗುಡುಗು ಮಿಂಚಿನ ಸಾಧ್ಯತೆ ಇದೆ. ಎಂದು ಹವಾಮಾನ ಇಲಾಖೆ ಅಂದಾಜಿಸಿದೆ.. ಗರಿಷ್ಠ ಉಷಾಂಶದ ಮುನ್ನೋಟ ಮುಂದಿನ 48 ಘಂಟೆಗಳು: ಗರಿಷ್ಠ ಉಷ್ಣಾಂಶವು ಕರಾವಳಿಯ ಮತ್ತು ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಯಾಗುವ ಸಾಧ್ಯತೆ ಇದೆ.
2023-24 ನೇ ಸಾಲಿನ ವಿದ್ಯತ್ ದರವನ್ನು ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಪರಿಷ್ಕರಿಸಿ ಆದೇಶ ಹೊರಡಿಸಿದೆ. ಗ್ರಾಹಕರಿಗೆ ಪ್ರತಿ ಯೂನಿಟ್‌ಗೆ 70 ಪೈಸೆ ದರ ಹೆಚ್ಚಳವಾದರೆ, ಇವಿ ಚಾರ್ಜಿಂಗ್ ಘಟಕಗಳಿಗೆ 70 ಪೈಸೆ ಇಳಿಕೆ ಮಾಡಲಾಗಿದೆ. ದರ ಹೆಚ್ಚಳದಿಂದ ಗ್ರಾಹಕರ ಬಿಲ್‌ಗಳಲ್ಲಿ ಒಟ್ಟು ಶೇಕಡ 8.31 ರಷ್ಟು ಹೆಚ್ಚಾಗಲಿದೆ. ಎಲೆಕ್ಟ್ರಿಕ್ ವಾಹನ ಬಳಕೆ ಉತ್ತೇಜಿಸಲು, ಇವಿ ಚಾರ್ಜಿಂಗ್ ಸ್ಟೇಷನ್‌ಗಳ ವಿದ್ಯುತ್ ಬಿಲ್‌ಅನ್ನು ಪ್ರತಿ ಯೂನಿಟ್‌ಗೆ 5 ರೂಪಾಯಿಯಿಂದ 4.30 ಪೈಸೆಗೆ ಇಳಿಸಲಾಗಿದೆ.
2023-24 ನೇ ಸಾಲಿನಲ್ಲಿ ಶಿರಾಳಕೊಪ್ಪದ ಶಿವಶರಣೆ ಅಕ್ಕಮಹಾದೇವಿ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಸಂಸ್ಥೆಯಲ್ಲಿರುವ ಪ್ರಥಮ ಡಿಪ್ಲೋಮೊ ಕೋರ್ಸ್‍ಗಳಿಗೆ ಮೇರೆಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ ಎಸ್‍ಎಸ್‍ಎಲ್‍ಸಿ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳೊಂದಿಗೆ ಮೀಸಲಾತಿ ಬಯಸುವ ಅಭ್ಯರ್ಥಿಗಳು ತಮ್ಮ ಮೀಸಲಾತಿಯ ಪೂರಕ ದಾಖಲಾತಿಗಳೊಂದಿಗೆ ಮೇ -31 ರೊಳಗಾಗಿ ಸಂಸ್ಥೆಗೆ ನೇರವಾಗಿ ಸಲ್ಲಿಸಿ ಪ್ರವೇಶವನ್ನು ಪಡೆಯುವಂತೆ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‍ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9480057999 ಸಂಪರ್ಕಿಸಬೇಕೆಂದು ತಿಳಿಸಿಲಾಗಿದೆ.