ಹಲವು ಗದ್ದಲಗಳ ನಡುವೆಯೂ ಅನ್ನಭಾಗ್ಯ ಯೋಜನೆ ಜಾರಿಯಾಗಿದೆ. ಆದರೆ, ಅನ್ನಭಾಗ್ಯ ಯೋಜನೆಗೆ ಬದಲಿಗೆ ಇದೀಗ ರಾಜ್ಯ ಸರ್ಕಾರ ಹಣ ನೀಡುತ್ತಿದ್ದು, ಅದರ ವಿವರ ಇಲ್ಲಿದೆ.
ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು, ಅಕ್ಕಿ ಸಿಗದೆ ಇರುವುದರಿಂದ ಇದಕ್ಕೆ ಪರ್ಯಾಯವಾಗಿ ಹಣವನ್ನು ಖಾತೆಗೆ ಜಮೆ ಮಾಡುತ್ತಿದೆ.
ಆಗಿದ್ದರೆ, ನಿಮ್ಮ ಖಾತೆಗೆ ಹಣ ಜಮೆಯಾಗಿದೆಯೇ ಇಲ್ಲವೇ ಎನ್ನುವುದನ್ನು ನೀವು ಸುಲಭವಾಗಿ ಪರಿಶೀಲಿಸಬಹುದಾಗಿದೆ.
ಅಲ್ಲದೇ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ಅಂಚೆ ಇಲಾಖೆಯಲ್ಲಿ ಉಳಿತಾಯ ಖಾತೆಯನ್ನು ತೆರೆಯಬಹುದಾಗಿದೆ.
ಇನ್ನು ನೀವು ಫೋಸ್ಟ್‌ಮನ್‌ಗೆ ಖಾತೆ ತೆರೆಯಲು ಅವಶ್ಯವಿರುವ ಅಗತ್ಯ ದಾಖಲೆಯನ್ನು ನೀಡಿದರೆ, ಮನೆ ಬಾಗಿಲಿಗೇ ಸೇವೆ ಸಿಗಲಿದೆ.
ಈ ಸೇವೆಗಾಗಿ ಅಂಚೆ ಇಲಾಖೆಯು ಡಿ ಕ್ಯೂಬ್ ಎನ್ನುವ ವಿನೂತನವಾದ ಆ್ಯಪ್ ಅನ್ನು ಸಹ ಪರಿಚಯಿಸಿದೆ.
ಡಿ ಕ್ಯೂಬ್ ಆ್ಯಪ್ ಯಾವೆಲ್ಲ ದಾಖಲೆ ಬೇಕು ?
ಡಿ ಕ್ಯೂಬ್ ಆ್ಯಪ್ ಅನ್ನು ಬಳಸುವುದು ಅತ್ಯಂತ ಸುಲಭವಾಗಿದೆ.
ಇದಕ್ಕೆ ಬೇಕಾದ ದಾಖಲೆಗಳನ್ನು ಸಲ್ಲಿಸುವುದರೊಂದಿಗೆ ಈ ಪ್ರಕ್ರಿಯೆಗಳು ಪೂರ್ಣವಾಗಲಿವೆ.
ಮೊದಲನೆಯದಾಗಿ ಆಧಾರ್ ಕಾರ್ಡ್, ಪಾನ್ ಕಾರ್ಡ್ ಹಾಗೂ ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಬೇಕಾಗುತ್ತದೆ.
ಇದರೊಂದಿಗೆ 500 ರೂಪಾಯಿ ಮೊತ್ತವನ್ನು ಪಾವತಿಸುವುದರೊಂದಿಗೆ ಅಲ್ಪ ಕಾಲವಧಿಯಲ್ಲೇ ಖಾತೆಯನ್ನು ತೆಗೆಯಬಹುದಾಗಿದೆ.
ಸರ್ಕಾರದ ಯೋಜನೆಯ ನೇರನಗದು ವರ್ಗವಣೆ ಮಾಡುವ ಉದ್ದೇಶಕ್ಕಾಗಿಯೇ ಅಂಚೆ
ಎಸ್.ಬಿ. ಖಾತೆಗೆ ಆಧಾರ್ ಸೀಡಿಂಗ್ ಮಾಡಲಿದ್ದೇವೆ ಎಂದು ಅಂಚೆ ಇಲಾಖೆಯು ಮಾಹಿತಿ ನೀಡಿದೆ.
ಇನ್ನು ಸರಳವಾದ ಹಂತಗಳು ಇಲ್ಲಿವೆ
ಮೊದಲನೆಯದಾಗಿ: ಆಹಾರ ಇಲಾಖೆಯ ವೆಬ್‌ಸೈಟ್‌ಗೆ ಲಾಗಿನ್ ಮಾಡಿಕೊಳ್ಳಿ
ಎರಡನೇ ಹಂತ: ಇ- ಸರ್ವಿಸ್ ಪೋರ್ಟಲ್‌ನಲ್ಲಿ ಡಿಬಿಟಿ ಎಂದ ಆಯ್ಕೆ ಕಾಣಿಸಿಕೊಳ್ಳಲಿದ್ದು, ಆ ನಿರ್ದಿಷ್ಟ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಮೂರನೇ ಹಂತ: ಸ್ಟೇಟಸ್ OF ಡಿಬಿಟಿ ಎಂಬ ಅಂಶವನ್ನು ಆಯ್ಕೆ ಮಾಡಿ
ನಾಲ್ಕನೇ ಹಂತ: ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರದಲ್ಲಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ (ಆರ್‌ಸಿ ನಂಬರ್) ಅನ್ನು ಆ ಜಾಗದಲ್ಲಿ ಭರ್ತಿ ಮಾಡಿ.
ಐದನೇಯ ಹಂತ: ನಾಲ್ಕನೇಯ ಹಂತವನ್ನು ನೀವು ಪೂರ್ಣಗೊಳಿಸಿದ ನಂತರದಲ್ಲಿ ಮುಂದುವರಿಯಿರಿ ಎಂಬ ಆಯ್ಕೆ ಕಾಣಿಸಿಕೊಳ್ಳಲಿದ್ದು,
ನೀವು ಅದರ ಮೇಲೆ ಕ್ಲಿಕ್ ಮಾಡಬೇಕು.
ಆರು ಮತ್ತು ಕೊನೆಯ ಹಂತ ಈ ರೀತಿ ಇದೆ: ಆರನೇಯ ಹಾಗೂ ಕೊನೆಯ ಹಂತವು ಸಹ ಸರಳವಾಗಿದೆ.
ಮುಂದಿನ ಪುಟದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಆಗಲಿದೆಯೇ, ಕ್ರೆಡಿಟ್ ಆಗಿಲ್ಲವೇ ಎಂಬ ಮಾಹಿತಿ ಲಭ್ಯವಾಗಲಿದೆ.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಅನ್ನಭಾಗ್ಯ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಚೆಗೆ ಚಾಲನೆ ನೀಡಿದ್ದಾರೆ.
ಇನ್ನು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹೆಚ್ಚುವರಿಯಾಗಿ ತಲಾ 5 ಕೆ.ಜಿ.
ಅಕ್ಕಿಯನ್ನು ನೀಡುವ ಬದಲು ಪ್ರತಿ ಕೆ.ಜಿ.ಗೆ 34 ರೂಪಾಯಿಯಂತೆ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ಹಣ ವರ್ಗಾವಣೆ ಮಾಡಲಾಗುತ್ತಿದೆ.
ಐದು ಕೆ.ಜಿ. ಅಕ್ಕಿಯನ್ನು ಕೇಂದ್ರ ಸರ್ಕಾರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಮತ್ತು
ಇನ್ನೈದು ಕೆ.ಜಿ. ಅಕ್ಕಿಯನ್ನು ರಾಜ್ಯ ಸರ್ಕಾರ ವಿತರಿಸಲಿದೆ. ಆದರೆ, ಈ ಯೋಜನೆಯನ್ನು ಅನುಷ್ಠಾನ ಮಾಡುವುದಕ್ಕೆ
ಸಕಾಲದಲ್ಲಿ ಅಕ್ಕಿ ಹೊಂದಿಸಲು ಸಾಧ್ಯವಾಗದೆ ಇರುವುದರಿಂದ ಫಲಾನುಭವಿಗಳ ಖಾತೆಗೆ
ತಾತ್ಕಾಲಿಕವಾಗಿ ಹಣ ವರ್ಗಾಯಿಸಲು ಸರ್ಕಾರ ತೀರ್ಮಾನವನ್ನು ತೆಗೆದುಕೊಂಡಿದೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, 5 ಕೆ.ಜೆ ಹೆಚ್ಚುವರಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಹೇಳಿತ್ತು. ಇದೀಗ ಜುಲೈ ತಿಂಗಳಿನಿಂದಲೇ ಮನೆಯ
ಯಜಮಾನ ಅಥವಾ ಯಜಮಾನಿಗೆ ಪ್ರತಿ ಫಲಾನುಭವಿಗೆ 170ರೂಪಾಯಿ ಮೊತ್ತದಂತೆ ಮನೆಯ ಯಜಮಾನ ಅಥವಾ ಯಜಮಾನಿಯ ಖಾತೆಗೆ ಹಣ ಸಂದಾಯವಾಗಲಿದೆ.
ನೋಂದಾಯಿತ ಮಹಿಳಾ ಫಲಾನುಭವಿಯು ತನ್ನ ಮೊದಲ ಎರಡು ಹೆರಿಗೆಗೆ ಮಂಡಳಿಯಿಂದ ₹50,000 ಸಹಾಯಧನ ಪಡೆಯಬಹುದು.
ಅಗತ್ಯ ದಾಖಲೆಗಳನ್ನು ಸಲ್ಲಿಸಿ ಈ ಸೌಲಭ್ಯ ಪಡೆದುಕೊಳ್ಳಬಹುದು.