News

ಅಂಜನಾದ್ರಿ ಐತಿಹಾಸಿಕ, ಧಾರ್ಮಿಕ ಪ್ರವಾಸೀ ತಾಣವಾಗುವ ಪರಿಕಲ್ಪನೆ: ಸಿಎಂ ಬೊಮ್ಮಾಯಿ

14 March, 2023 3:50 PM IST By: Kalmesh T
Anjanadri is a historical, religious tourist destination Concept: CM Bommai

ಅಂಜನಾದ್ರಿ ಐತಿಹಾಸಿಕ, ಧಾರ್ಮಿಕ ಪ್ರವಾಸೀ ತಾಣವಾಗಬೇಕೆನ್ನುವುದು ನಮ್ಮ ಪರಿಕಲ್ಪನೆ.ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.  

ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ಸಿಹಿಸುದ್ದಿ! ಈ ಮಹತ್ವದ ಸುದ್ದಿಯನ್ನು ತಪ್ಪದೇ ಓದಿ

ಕಾಮಗಾರಿಗೆ  ಒಟ್ಟು 125 ಕೋಟಿ ರೂ.ಗಳ ಅನುಮೋದನೆ ದೊರೆತಿದೆ. ಮೊದಲನೇ ಹಂತದ ಯೋಜನೆ ಹಾಗೂ ಜಮೀನು ದೊರೆತಿರುವಲ್ಲಿ ಕೆಲಸ ಪ್ರಾರಂಭಸಲಾಗಿದೆ.

ಭಕ್ತರು ಉಳಿದುಕೊಳ್ಳಲು ಡಾರ್ಮಿಟರಿ , ಪ್ರದಕ್ಷಿಣಾ ಪಥ, ಶಾಪಿಂಗ್ ಕಾಂಪ್ಲೆಕ್ಸ್ ಶೌಚಾಲಯ ನಿರ್ಮಾಣ ಮಾಡಲಾಗುವುದು . ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.

ಇದಾದ ಕೂಡಲೇ ರೋಪ್ ವೇ ಮತ್ತಿತರ ಕಾಮಗಾರಿಗಳನ್ನು ಕೈಗೆಟ್ಟಿಕೊಳ್ಳಲಾಗುವುದು ಎಂದರು.

Rain : ರಾಜ್ಯದಲ್ಲಿ 3 ದಿನ ಹಗುರ ಮಳೆ ಸಾಧ್ಯತೆ-ಹವಾಮಾನ ಇಲಾಖೆ ಅಂದಾಜು

ಸೌಭಾಗ್ಯ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹಾಗೂ ಇಲ್ಲಿ ಆಂಜನೇಯನ ಜನ್ಮಸ್ಥಳದ ಅಭಿವೃದ್ಧಿ ಮಾಡುವ ಸೌಭಾಗ್ಯ ಬಿಜೆಪಿ ಸರ್ಕಾರಕ್ಕೆ ದೊರೆತಿರುವುದು ಸಂತಸ ತಂದಿದೆ ಎಂದರು.

ಅಂಜನಾದ್ರಿಯ ಆಂಜನೇಯ ಇಡೀ ಮನುಕುಲಕ್ಕೆ ಆಶೀರ್ವಾದ ಮಾಡಲಿ. ಭಾರತ ಹಾಗೂ ಕನ್ನಡ ನಾಡಿನ ಸಮಸ್ತ ಜನಕ್ಕೆ ಆಶೀರ್ವಾದ ಮತ್ತು ರಕ್ಷಣೆ ಮಾಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.

e-SHRAM portal : ಅಸಂಘಟಿತ ಕಾರ್ಮಿಕರ ಸಮಗ್ರ ಡೇಟಾಬೇಸ್ ರಚಿಸಲು ನೋಂದಣಿ ಕಲ್ಪಿಸುತ್ತದೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ

ಬೆಂಗಳೂರು- ಮೈಸೂರು ಎಕ್ಸ್ ಪ್ರೆಸ್ ವೇ ಬಳಸಲು ಟೋಲ್ ರದ್ದುಪಡಿಸಲು  ಪ್ರತಿಭಟನೆ ಆಗುತ್ತಿರುವ ಬಗ್ಗೆ ಮಾತನಾಡಿ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಯವರೊಂದಿಗೆ ಮಾತನಾಡಿದ್ದು, ವಿವರಗಳನ್ನು ಕೇಳಿದ್ದಾರೆ.

ಪ್ರತಿ ಬಾರಿ ಟೋಲ್ ಪ್ರಾರಂಭವಾದಾಗ ಈ ವಿಚಾರ ಇದ್ದೇ ಇರುತ್ತದೆ. ವಿಚಾರಗಳನ್ನು ಜನರಿಗೆ ಹೇಳಿ ಸಮಾಧಾನ ಮಾಡಿ ಕ್ರಮ ವಹಿಸಲು   ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೂಚನೆ ನೀಡಲಾಗಿದೆ ಎಂದರು.