ಕಂಪನಿಯಲ್ಲಿ ಕೆಲಸದ ನಡುವೆಯೇ ಪದೇ ಪದೇ ಸಿಗರೇಟ್ ಸೇದಲು ಹೋಗುತ್ತಿದ್ದ ಎಂಪ್ಲಾಯಿಯೊಬ್ಬರಿಗೆ ಬರೋಬ್ಬರಿ 9 ಲಕ್ಷ ರೂಪಾಯಿ ದಂಡ ವಿಧಿಸಿದ ಕಂಪನಿ.
ಕಾರ್ಪೋರೇಟ್ ವಲಯದ ಕಂಪನಿಗಳಲ್ಲಿ ಸಿಗರೇಟ್ ಸೇದುವುದಕ್ಕಾಗಿ ಬ್ರೇಕ್ ತೆಗೆದುಕೊಳ್ಳವುದು ಸರ್ವೇ ಸಾಮಾನ್ಯ. ದಿನದಲ್ಲಿ ಒಂದೋ ಅಥವಾ ಎರಡು ಬಾರಿ ಸಿಗರೇಟ್ ಬ್ರೇಕ್ ಸಾಮಾನ್ಯವಾಗಿ ತೆಗೆದುಕೊಳ್ಳುತ್ತಾರೆ.
ಆದರೆ, ಇಲ್ಲೊಬ್ಬ ಎಂಪ್ಲಾಯಿ ನೆಟ್ಟಗೆ ಕೆಲಸವನ್ನು ಮಾಡದೇ ಪದೇ ಪದೇ ಸಿಗರೇಟ್ ಸೇದುವುದಕ್ಕೆ ಹೋಗುತ್ತಿದ್ದ ಕಾರಣದಿಂದಾಗಿ ಬರೋಬ್ಬರಿ 9 ಲಕ್ಷ ರೂಪಾಯಿ ದಂಡವನ್ನು ಕಂಪನಿಯಿಂದ ವಿಧಿಸಲಾಗಿದೆ.
ಕೆಲಸದ ಒತ್ತಡದಿಂದ ಕಂಪನಿಗಳಲ್ಲಿ ಕಾರ್ಯ ನಿರ್ವಹಿಸುವ ಕೆಲಸಗಾರರು ನಡುವೆ ಒಂದೆರಡು ಸಿಗರೇಟ್ ಸೇದವುದು ಸಹಜ. ಇದು ಕೆಲವರಿಗೆ ಅಡಿಕ್ಟ್ ಕೂಡ ಆಗಿರುತ್ತದೆ.
ಆದರೆ, ತೀರ ಇವುಗಳ ದಾಸರಾಗುವುದರಿಂದ ಇಂಥ ಸಮಸ್ಯೆಯನ್ನು ಕೂಡ ಅನುಭವಿಸಬೇಕಾಗುತ್ತದೆ ನೋಡಿ.
ಜಪಾನ್‌ನ ಐಟಿ ಕಂಪನಿಯ ಉದ್ಯೋಗಿಯೊಬ್ಬ ಕೆಲಸದ ನಡುವೆ ಪದೇ ಪದೇ ಬ್ರೇಕ್ ತೆಗೆದುಕೊಂಡು ಸಿಗರೇಟ್ ಸೇದುತ್ತಿದ್ದ.
ಆದರೆ ವರ್ಷಾಂತ್ಯದಲ್ಲಿ ಉದ್ಯೋಗಿಗೆ ವೇತನ ಹೆಚ್ಚಳ ಮಾಡುವ ಸಮಯದಲ್ಲಿ ಆಘಾತ ಉಂಟಾಗಿದೆ.
ಕಾರಣ ಏನೆಂದು ನೋಡಿದಾಗ ಈ ವಿಷಯ ಬೆಳಕಿಗೆ ಬಂದಿದೆ.
ಕೆಲಸದ ವೇಳೆಯಲ್ಲಿ ಪದೇ ಪದೇ ಸಿಗರೇಟ್ ಸೇದಲು ಬ್ರೇಕ್ ತೆಗೆದುಕೊಂಡ ಕಾರಣ ಈ ಉದ್ಯೋಗಿಗೆ 9 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.