News

ಸಹಕಾರಿ ಒಕ್ಕೂಟಗಳೊಂದಿಗೆ Amul ವಿಲೀನ ಪ್ರಕ್ರಿಯೆ ಶುರು- ಅಮಿತ್ ಷಾ

11 October, 2022 11:53 AM IST By: Kalmesh T
Amul merger process with co-operatives begins - Amit Shah

ಹೈನುಗಾರಿಕೆ ಕ್ಷೇತ್ರದಲ್ಲಿ ಕ್ರಾಂತಿಗೆ ಕಾರಣವಾದ ಗುಜರಾತ್ ಸಹಕಾರಿ ಹಾಲು ಒಕ್ಕೂಟ ಅಮೂಲ್ ಹಾಲು ಒಕ್ಕೂಟವನ್ನು ರಾಜ್ಯದ ಇತರ 5 ಹಾಲು ಒಕ್ಕೂಟದೊಂದಿಗೆ ವಿಲೀನಗೊಳಿಸಲಾಗುವುದು ಎಂದು ಕೇಂದ್ರ ಗೃಹ ಹಾಗೂ ಸಹಕಾರಿ ಸಚಿವ ಅಮಿತ್ ಷಾ ಹೇಳಿದ್ದಾರೆ.

ಇದನ್ನೂ ಓದಿರಿ: ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ; ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು ಗೊತ್ತೆ?

ಗುವಾಹಟಿಯಲ್ಲಿ ನಡೆದ ಈಶಾನ್ಯ ಸಹಕಾರ ಪರಿಷತ್ತಿನ (ಎನ್‌ಇಸಿ) 70 ನೇ ಸಭೆಯಲ್ಲಿ ಸರ್ವಸದಸ್ಯರನ್ನು ಉದ್ದೇಶಿಸಿ ಮಾತನಾಡಿದರು. 

ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು ನೈಸರ್ಗಿಕ ಉತ್ಪನ್ನಗಳ ಪ್ರಮಾಣೀಕರಣಕ್ಕಾಗಿ ನೈಸರ್ಗಿಕ ಮತ್ತು ಡಿಜಿಟಲ್ ಕೃಷಿಗೆ ಆದ್ಯತೆ ನೀಡುತ್ತಿದೆ.

ನೈಸರ್ಗಿಕ ಉತ್ಪನ್ನಗಳ ಪ್ರಮಾಣೀಕರಣಕ್ಕಾಗಿ ಅಮುಲ್ ಮತ್ತು ಇತರ ಐದು ಸಹಕಾರ ಸಂಘಗಳನ್ನು ವಿಲೀನಗೊಳಿಸಿ ಬಹು-ರಾಜ್ಯ ಸಹಕಾರಿ ಸಂಘವನ್ನು ರಚಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಅಮಿತ್ ಷಾ  ಹೇಳಿದರು.

ಜಾನುವಾರು ಮಾಲೀಕರಿಗೆ ಸಿಹಿಸುದ್ದಿ; ದೇಶದ ಎಲ್ಲಾ ಪಂಚಾಯತ್‌ಗಳಲ್ಲಿ ಸರ್ಕಾರ ಡೈರಿ ತೆರೆಯಲು ನಿರ್ಧಾರ!

ಎಂಎಸ್‌ಸಿಎಸ್ (MSCS) ತನ್ನ ಪ್ರಮಾಣೀಕರಣದ ನಂತರ ಉತ್ಪನ್ನಗಳ ರಫ್ತು ಮಾಡುವುದನ್ನು ಖಚಿತಪಡಿಸುತ್ತದೆ ಇದರಿಂದ ಲಾಭವು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹೋಗುತ್ತದೆ ಎಂದು ಅವರು ಹೇಳಿದರು.

Gujarat Cooperative Milk Marketing Federation ltd ತನ್ನ ಉತ್ಪನ್ನಗಳನ್ನು ಅಮುಲ್ ಬ್ರಾಂಡ್‌ನಲ್ಲಿ ಮಾರಾಟ ಮಾಡುತ್ತದೆ.

ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಹಾಲಿನ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಅಗತ್ಯವನ್ನು ಹೇಳಿದರು. 

ನಿಯಮಗಳ ಉಲ್ಲಂಘನೆ; ಕರ್ನಾಟಕದಲ್ಲಿ Ola, Uber, Rapido ಆಟೋ ಸೇವೆ ಸ್ಥಗಿತಗೊಳಿಸುವಂತೆ ಸರ್ಕಾರಿ ಆದೇಶ!

ಕೇವಲ ದೇಶೀಯ ಮಾರುಕಟ್ಟೆಯಲ್ಲಿನ ಬೇಡಿಕೆಯನ್ನು ಪೂರೈಸಲು ಮಾತ್ರವಲ್ಲದೆ ನೆರೆಹೊರೆಯ ದೇಶಗಳ ಬೇಡಿಕೆಯನ್ನು ಪೂರೈಸುವ ಗುರಿ ತಲುಪಬೇಕು ಎಂದು ಅವರು ಹೇಳಿದ್ದಾರೆ.

ಈಶಾನ್ಯ ರಾಜ್ಯಗಳ ಮುಖ್ಯಮಂತ್ರಿಗಳು ಪ್ರವಾಹ ನಿಯಂತ್ರಣ, ನೀರಾವರಿ (irrigation), ಪ್ರವಾಸೋದ್ಯಮ (tourism) ಹಾಗೂ ರಾಜ್ಯದಲ್ಲಿ ಅರಣ್ಯೀಕರಣ ಮತ್ತು ಕೃಷಿಗಾಗಿ (agriculture) NESAC ಅನ್ನು ಸಂಪೂರ್ಣವಾಗಿ ಬಳಸಿಕೊಳ್ಳುವಂತೆ ಮತ್ತು ಅದರ ಗರಿಷ್ಠ ಮತ್ತು ಉತ್ತಮ ಬಳಕೆಗಾಗಿ ತಮ್ಮ ರಾಜ್ಯಗಳಲ್ಲಿ NESAC ಗೆ ನೋಡಲ್ ಅಧಿಕಾರಿಯನ್ನು ನೇಮಿಸುವಂತೆ ಅಮಿತ್ ಷಾ ಒತ್ತಾಯಿಸಿದ್ದಾರೆ.