News

ಪಶ್ಚಿಮ ಬಂಗಾಳ ಚುನಾವಣೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಪಿಎಂ ಕಿಸಾನ್ ಯೋಜನೆಯ 6 ಸಾವಿರ ಜೊತೆಗೆ 4 ಸಾವಿರ ಸೇರಿಸಿ ರೈತರಿಗೆ 10000 ರೂಪಾಯಿ ನೀಡುವ ಭರವಸೆ

21 March, 2021 8:55 PM IST By:

ಬಿಜೆಪಿ ನಾಯಕ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಇಂದು (ಮಾರ್ಚ್ 21, 2021) ಮುಂಬರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗಾಗಿ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದಾರೆ.

'ಸಂಕಲ್ಪ ಪತ್ರ' ಹೆಸರಿನ ಪ್ರಣಾಳಿಕೆಯಲ್ಲಿ ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡುವ ಭರವಸೆ ನೀಡಲಾಗಿದೆ. ಇದರ ಜೊತೆಗೆ, ಬಿಜೆಪಿ ಪ್ರಣಾಳಿಕೆಯಲ್ಲಿ ಬಂಗಾಳಿಭಾಷೆಯನ್ನು ವಿಶ್ವಸಂಸ್ಥೆಯಲ್ಲಿ ಅಧಿಕೃತ ಭಾಷೆಯನ್ನಾಗಿ ಮಾಡುವುದು, ಬಂಗಾಳಿ ಸಂಸ್ಕೃತಿಯನ್ನು ಉತ್ತೇಜಿಸಲು ನಿಧಿಯನ್ನು ಸ್ಥಾಪಿಸಲಾಗುವುದ ಮತ್ತು ಭ್ರಷ್ಟಾಚಾರ ವಿರೋಧಿ ಸಹಾಯವಾಣಿಯನ್ನು ಸ್ಥಾಪಿಸುವುದಾಗಿ ಭರವಸೆ ನೀಡಿದರು

ರೈತ ಸಮುದಾಯಕ್ಕೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಕೇಂದ್ರ ಸರಕಾರ ರೈತರಿಗೆ ನೀಡುವ 6000 ರೂಪಾಯಿಗಳೊಂದಿಗೆ ಜತೆಗೆ ಹೆಚ್ಚುವರಿಯಾಗಿ 4000 ರೂ.ಗಳನ್ನು ಸೇರಿಸಿ ವರ್ಷಕ್ಕೆ 10 ಸಾವಿರ ರೂಪಾಯಿ ನೀಡಲಾಗುವುದು.  "ಪ್ರಧಾನಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ, ಮೂರು ವರ್ಷಗಳಿಂದ ಮಮತಾ ದೀದಿ ರೈತರಿಗೆ ನೀಡದ 18 ಸಾವಿರ ರೂ.ಗಳನ್ನು ಯಾವುದೇ ಕಡಿತವಿಲ್ಲದೆ 75 ಲಕ್ಷ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುವುದು,'' ಎಂದು ಹೇಳಿದರು.

ಕೃಷಿ ಸುರಕ್ಷಾ ಯೋಜನೆಯಡಿ ಪ್ರತಿ ಭೂರಹಿತ ರೈತರಿಗೆ ವರ್ಷಕ್ಕೆ 4 ಸಾವಿರ ರೂಪಾಯಿ ಅಷ್ಟೇ ಅಲ್ಲ, ಬಿಜೆಪಿ ಸರ್ಕಾರ ಮೀನುಗಾರರಿಗೆ ವರ್ಷಕ್ಕೆ 6000 ರೂಪಾಯಿ ನೀಡಲಿದೆ.  ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಮತ್ತು ಆಡಳಿತಾರೂಢ ಟಿಎಂಸಿ ನಡುವೆ ಭಾರಿ ಕದನಕ್ಕೆ ಸಾಕ್ಷಿಯಾಗಲಿದೆ ಎಂಬುದನ್ನು ಇಲ್ಲಿ ನಾವು ಮರೆಯಬಾರದು.

294 ಸದಸ್ಯ ರಾಷ್ಟ್ರ ವಿಧಾನಸಭೆಗೆ 2021ರ ಮಾರ್ಚ್ 27ರಿಂದ 8 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಅಂತಿಮ ಸುತ್ತಿನ ಮತದಾನ 2021ರ ಏಪ್ರಿಲ್ 29ರಂದು ನಡೆಯಲಿದೆ. ಮೇ 2ರಂದು ಮತ ಎಣಿಕೆ ನಡೆಯಲಿದೆ.