News

ವಿಸ್ಮಯಕಾರಿ ಘಟನೆ: ಕರುಳಬಳ್ಳಿಯ ಜೊತೆ ಹಂದಿಗೂ ಹಾಲುಣಿಸಿದ ಗೋವು

22 August, 2022 10:24 AM IST By: Maltesh
Amazing Incident: A cow Feeding Milk to pig in Yadagir

ಗೋವನ್ನು ಭಾರತ ದೇಶದಲ್ಲಿ ತಾಯಿಯಾಗಿ  ಹಾಗೂ ದೇವರಾಗಿ ಪೂಜಿಸೂತ್ತಾರೆ. ಹೀಗಾಗಿ ಗೋವಿಗೆ ಈ ಭರತ ಬೂಮಿಯಲ್ಲಿ ತನ್ನದೆಯಾದ ವಿಶಿಷ್ಟ ಸ್ಥಾನಮಾನವಿದೆ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಸಾಕಷ್ಟು ವೈರಲ್‌ ಆಗಿದ್ದು ಅದು ನೆಟಿಜೆನ್ಸ್‌ಗಳ ಮನ ಗೆದ್ದಿದೆ. ಹೌದು ಆ ವಿಡಿಯೋದಲ್ಲಿ ವರಾಹ( ಹಂದಿ)ಗೆ ಗೋಮಾತೆ ಹಾಲುಣಿಸುತ್ತಿದೆ.

ನಿಮ್ಮ ಅಕೌಂಟ್‌ನಲ್ಲಿ ಮಿನಿಮಮ್‌ ಬ್ಯಾಲೆನ್ಸ್ ಎಷ್ಟು ಇರಬೇಕು ತಿಳಿದುಕೊಳ್ಳಿ, ಇಲ್ಲದಿದ್ದರೆ ಬ್ಯಾಂಕ್ ದಂಡ ವಿಧಿಸುತ್ತದೆ

ತನ್ನ ಕರುಳಬಳ್ಳಿಯ ಕರುವಿಗೆ ಗೋಮಾತೆ ಹಾಲುಣಿಸುತ್ತಿರುವಾಗಿ ವರಾಹ ಪದೇ ಪದೇ ಅಡ್ಡ ಬಂದು ನಿಲ್ಲುತ್ತದೆ. ಎಷ್ಟೆ ಕಸರತ್ತು ನಡೆಸಿದರು ಮಾತ್ರ ವರಾಹ ಗೋಮಾತೆ ಬಿಟ್ಟು ಕದಲಿಲ್ಲ. ಆ ಬಳಿಕ ತನ್ನ ಕರುವಿನ ಜೊತೆಗೂ ಗೋಮಾತೆ ವರಾಹಕ್ಕೆ ಹಾಲುಣಿಸಿದೆ. ಈ ದೃಶ್ಯವನ್ನು ವ್ಯಕ್ತಿಯೋರ್ವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್‌ ಮಾಡಿಕೊಂಡಿದ್ದು ಸಾಕಷ್ಟು ವೈರಲ್‌ ಆಗಿದೆ. ಈ ವೇಳೆ ಮಕ್ಕಳು ಸೇರಿದಂತೆ ಕೆಲವರು ಗೋಮಾತೆಯಲ್ಲಿ ವರಾಹ ಹಾಲು ಕುಡಿಯುವ ದೃಶ್ಯ ಸೆರೆ ಹಿಡಿಯುತ್ತಿದ್ದರು.

ಮಾಹಿತಿಯ ಪ್ರಕಾರ ಈ ವಿಸ್ಮಯಕಾರಿ ಘಟನೆ ಯಾದಗಿರಿ ಜಿಲ್ಲೆಯ ಸುರಪುರದಲ್ಲಿ ನಡೆದಿದ್ದು ಐತಿಹಾಸಿಕ ವೇಣುಗೋಪಾಲ ಸ್ವಾಮಿ ಜಾತ್ರೆಯ ಸಂದರ್ಭದಲ್ಲಿ ಈ ಅಪರೂಪದ ಘಟನೆ ದಾಖಲಾಗಿದೆ. ವಿಶೆಷವೆಂದರೆ ಶ್ರೀಕೃಷ್ಣನಿಗೆ ಗೋ ಸೇವೆ ಮಾಡಿದ್ದರಿಂದ ದೈವತ್ವ ಪಟ್ಟ ಸಿಗುತ್ತದೆ. ವಿಷ್ಣುವಿನ 10 ಅವತಾರಗಳಲ್ಲಿ ನರಸಿಂಹ ಹಾಗೂ ವರಾಹದ ಚಿತ್ರಣವು ಒಂದಾಗಿದೆ. ಗೋವು ಸೇವೆ ಮಾಡಿಕೊಂಡು ಬರುವ ಕೃಷ್ಣ 33 ಕೋಟಿ ದೇವತೆಗಳ ಜತೆಯಲ್ಲಿ ಗೋಮಾತೆಯನ್ನು ದೈವ ಸ್ವರೂಪಿದಲ್ಲಿ ನೋಡುತ್ತೇವೆ.

ಪಿಯುಸಿ ಹಾಗೂ ಪದವಿ ಪಾಸ್‌ ಆದವರಿಗೆ ಇಲ್ಲಿದೆ ಟಾಪ್‌ 5 ನೇಮಕಾತಿ ವಿವರಗಳು

ಗುಜರಾತ್‌ನಲ್ಲಿ ಸಾವಿರಾರು ಹಸುಗಳಿಗೆ ಕಾಣಿಸಿಕೊಂಡ ಚರ್ಮ ರೋಗ! ನಿಮ್ಮ ಹಸುಗಳಿಗೆ ಈ ಲಕ್ಷಣಗಳಿವೆಯೆ ಗಮನಿಸಿ

ಸೌರಾಷ್ಟ್ರ ಮತ್ತು ಕಛ್‌ನಲ್ಲಿ ಸಾವಿರಾರು ಹಸುಗಳು ಗಡ್ಡೆಯ ಚರ್ಮ ರೋಗದಿಂದ ಸೋಂಕಿಗೆ ಒಳಗಾಗಿವೆ, ಇದು ಗುಜರಾತಿನಲ್ಲಿ ಮೊದಲ ಬಾರಿಗೆ ವರದಿಯಾಗಿದೆ.

ಜಾಮ್‌ನಗರ ದೇವಭೂಮಿ ದ್ವಾರಕಾ ಮತ್ತು ಪೋರಬಂದರ್ ಜಿಲ್ಲೆಗಳ ನಂತರ ಕಚ್ ಹೆಚ್ಚು ಪರಿಣಾಮ ಬೀರುತ್ತದೆ ಮತ್ತು ಕಳೆದ ಒಂದೂವರೆ ತಿಂಗಳಿನಿಂದ ಕಚ್‌ನಲ್ಲಿಯೇ ಸುಮಾರು 27,000 ಹಸುಗಳು ಸೋಂಕಿಗೆ ಒಳಗಾಗಿವೆ ಎಂದು ಸ್ಥೂಲ ಅಂದಾಜುಗಳು ಸೂಚಿಸುತ್ತವೆ.

ಯಾವುದೇ ಅಧಿಕೃತ ಸಾವಿನ ಅಂಕಿಅಂಶಗಳಿಲ್ಲದಿದ್ದರೂ, ಭುಜ್ ಪುರಸಭೆಯ ಅಧ್ಯಕ್ಷ ಘನಶ್ಯಾಮ್ ಠಕ್ಕರ್ ಅವರು ಪ್ರತಿದಿನ 70-80 ಹಸುಗಳನ್ನು ವಿಲೇವಾರಿ ಮಾಡುತ್ತಿದ್ದಾರೆ ಎಂದು ಹೇಳಿದರು. ಈ ರೋಗವು ಮೊದಲು ಲಖ್ಪತ್ನಲ್ಲಿ ವರದಿಯಾಗಿದ್ದು, ಇತರ ತಾಲೂಕುಗಳಿಗೆ ಹರಡಿತು. ಕಛ್‌ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಭವ್ಯ ವರ್ಮಾ ಅವರನ್ನು ಸಂಪರ್ಕಿಸಿದಾಗ, "ನಾವು ಜಾನುವಾರುಗಳಿಗೆ ಮೂರು ಪಟ್ಟು ಲಸಿಕೆಯನ್ನು ತ್ವರಿತವಾಗಿ ನೀಡಿದ್ದೇವೆ.

ನಾವು 50,000 ಪ್ರಾಣಿಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದ್ದೇವೆ ಮತ್ತು 10 ಲಕ್ಷ ರೂಪಾಯಿ ಮೌಲ್ಯದ ಡೋಸ್ ಅನ್ನು ಖರೀದಿಸಿದ್ದೇವೆ."ಗುಜರಾತ್‌ನಲ್ಲಿ ಈ ರೋಗವು ಮೊದಲ ಬಾರಿಗೆ ವರದಿಯಾಗಿದೆ. ಮರಣ ಪ್ರಮಾಣವು 4% ಕ್ಕಿಂತ ಕಡಿಮೆಯಾಗಿದೆ ಆದರೆ ದುರ್ಬಲ ಪ್ರಾಣಿಗಳಲ್ಲಿ ಸಾವುಗಳು ಹೆಚ್ಚಾಗುತ್ತವೆ ಎಂದಿದ್ದಾರೆ.

ಅಬ್ಬಾ 27 ಸಾವಿರ ಲೀಟರ್‌ ಅಡುಗೆ ಎಣ್ಣೆ ಸೀಜ್‌! ಕಾರಣವೇನು ಗೊತ್ತಾ..?