News

ಕೃಷಿ ಪತ್ರಿಕೋದ್ಯಮದಲ್ಲಿ AJAI ಒಂದು ಐತಿಹಾಸಿಕ ಹೆಜ್ಜೆ: ಕೇಂದ್ರ ಸಚಿವ ಪರ್ಷೋತ್ತಮ ರೂಪಾಲಾ!

21 July, 2022 6:04 PM IST By: Kalmesh T
“ಅಗ್ರಿಕಲ್ಚರ್ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಇಂಡಿಯಾ”ದ ಲಾಂಛನ ಬಿಡುಗಡೆ ಮತ್ತು ವೆಬ್‌ಸೈಟ್ ಅನಾವರಣ ಕಾರ್ಯಕ್ರಮ

ಜಗತ್ತಿನಲ್ಲೇ ಅತಿ ದೊಡ್ಡ ಕಲ್ಚರ್‌ ಎಂದರೆ ಅದು “ಅಗ್ರಿಕಲ್ಚರ್‌.  ಈ ಅಗ್ರಿಕಲ್ಚರ್‌ನ ಮುಖ್ಯ ಸಂಚಾಲಕರು ರೈತರು. ಆದ್ದರಿಂದ ಕೃಷಿ ಮತ್ತು ರೈತರು ಸದಾ ನೆಮ್ಮದಿಯಿಂದ ಇರುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ.

ಈ ನಿಟ್ಟಿನಲ್ಲಿ ಕೃಷಿ ಪತ್ರಿಕೋದ್ಯಮದಲ್ಲಿ AJAI ಒಂದು ಐತಿಹಾಸಿಕ ಹೆಜ್ಜೆಯಾಗಲಿದೆ ಎಂದು ಪಶುಸಂಗೋಪನೆ, ಮೀನುಗಾರಿಕೆ ಮತ್ತು ಹೈನುಗಾರಿಕೆ ಕೇಂದ್ರ ಸಚಿವ ಪರ್ಷೋತ್ತಮ ರೂಪಾಲಾ ಹೇಳಿದರು.

ಗುರುವಾರ ದೆಹಲಿಯ ಕೃಷಿ ಜಾಗರಣ ಮಾಧ್ಯಮದ ಕೇಂದ್ರ ಕಚೇರಿಯಲ್ಲಿ ಜೋಮ್‌ ವೆಬಿನಾರ್‌ ಮೂಲಕ ಆಯೋಜಿಸಿದ್ದ “ಅಗ್ರಿಕಲ್ಚರ್ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಇಂಡಿಯಾದ ಲಾಂಛನ ಬಿಡುಗಡೆ ಮತ್ತು ವೆಬ್‌ಸೈಟ್ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

AJAI ಬಿಡುಗಡೆ ಕಾರ್ಯಕ್ರಮ

ಭಾರತ ದೇಶವು ಪರಂಪರಾಗತವಾಗಿ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಕೃಷಿಯನ್ನು ಪೂಜ್ಯಭಾವನೆಯಿಂದ ಕಾಣುತ್ತ ಬಂದ ಇತಿಹಾಸ ನಮ್ಮದು. ಇಂತಹ ಕ್ಷೇತ್ರವನ್ನು ತಂತ್ರಜ್ಞಾನದೊಂದಿಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಮೂಲಕ ರೈತರ ಅಭಿವೃದ್ದಿಯಾಗುವಂತೆ ಸಹಾಯ ಮಾಡಬೇಕು ಎಂದರು.

ರೈತರ ಹಿತಾಸಕ್ತಿ ಸಲುವಾಗಿ ಪ್ರಸ್ತುತ ಸರ್ಕಾರ ಸಾಕಷ್ಟು ಕಾರ್ಯಗಳನ್ನು ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಮ್ಮ ಸರ್ಕಾರ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು, ನೂತನ ತಂತ್ರಜ್ಞಾನಗಳನ್ನು ತರುತ್ತಿದೆ ಎಂದು ಅವರು ಹೇಳಿದರು.

ಇವತ್ತಿನ ಕಾರ್ಯಕ್ರಮ ಇದೊಂದು ಐತಿಹಾಸಿಕವಾದಂತ ಹೆಜ್ಜೆಯಾಗಿದೆ ಎಂದು ಕೇಂದ್ರ ಕೃಷಿ ಸಚಿವ ರೂಪಾಲಾ ಪರ್ಶೋತ್ತಮ ಹೇಳಿದರು.  ಅಷ್ಟೇ ಅಲ್ಲದೇ ಪತ್ರಿಕೋದ್ಯಮದ ಇತಿಹಾಸದಲ್ಲೂ ಇದೊಂದು ವಿಭಿನ್ನ ಮತ್ತು ವಿಶೀಷ್ಠ ಪ್ರಯತ್ನವಾಗಿದೆ. ಇದಕ್ಕೆ ಶ್ರಮಿಸಿದವರೆಲ್ಲರಿಗೂ ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ಪ್ರಶಂಶಿಸಿದರು.

ದೇಶದ ಕಲ್ಚರ್‌ ಎಂದರೆ ಅದು ಅಗ್ರಿಕಲ್ಚರ್‌ ಆಗಿದೆ. ಅಗ್ರಿಕಲ್ಚರ್‌ ಇಲ್ಲದ ಕಲ್ಚರ್‌ ಹೆಚ್ಚು ಮೌಲ್ಯಯುತ ಎನಿಸುವುದಿಲ್ಲ.  ಆದರೆ ನಾವೆಲ್ಲ ಗಮನಿಸಬೇಕದ ಸಂಗತಿಯೆಂದರೆ ಈ ಕಾರ್ಯಕ್ರಮ ಈಗಾಗಲೇ ಆಗಬೇಕಿತ್ತು. ತಡವಾಗಿಯಾದರೂ ಪರವಾಗಿಲ್ಲ ಈಗಲಾದರೂ ನಡೆಯುತ್ತಿದೆಯಲ್ಲ ಇದು ನಿಜಕ್ಕೂ ಖುಷಿಯ ವಿಚಾರವೇ ಆಗಿದೆ.

ಈ ಅಗ್ರಿಕಲ್ಚರ್‌ ಜರ್ನಲಿಸ್ಟ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಒಕ್ಕೂಟವೂ ಕೋಟ್ಯಾಂತರ  ರೈತರಿಗೆ ಅನುಕೂಲವಾಗಲಿ. ಈ ಮೂಲಕ ನಾವೂ ಕೂಡ ಕೃಷಿಪರ ಚಟುವಟಿಕೆಗಳಲ್ಲಿ ಅಥವಾ ಅದಕ್ಕೆ ಪೂರಕವಾಗಿ ರೈತನಿಗೆ ನೆರವಾಗುವ ನಿಟ್ಟಿನಲ್ಲಿ ಕೆಲಸವನ್ನು ಮಾಡಲು ಇದು ಸ್ಪೂರ್ತಿಯಾಗಲಿ.

“ಅಗ್ರಿಕಲ್ಚರ್ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಇಂಡಿಯಾ”ದ ಲಾಂಛನ ಬಿಡುಗಡೆ ಮತ್ತು ವೆಬ್‌ಸೈಟ್ ಅನಾವರಣ ಕಾರ್ಯಕ್ರಮ

ಕೃಷಿ ಮತ್ತು ಪತ್ರಿಕೋದ್ಯಮ ಒಂದೇ ನಾಣ್ಯದ ಎರಡು ಮುಖಗಳಾಗಿ ಬದಲಾಗುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದು ಅವರು ಮೆಚ್ಚುಗೆ ವ್ಯಕ್ತಪಡಸಿದರು.

ರೈತರ ಪರವಾಗಿ ಕೆಲಸ ಮಾಡುವ ಯಾವ ಅವಕಾಶವನ್ನು ನಾವು ತಪ್ಪಿಸಿಕೊಳ್ಳಬಾರದು. ರೈತರು ಕೂಡ ಸಾಂಪ್ರದಾಯಿಕ ಕೃಷಿಯೊಂದಿಗೆ ನೂತನ ಅವಿಷ್ಕಾರಗಳತ್ತಲೂ ಮುಖ ಮಾಡಬೇಕು.

ಕೃಷಿಗೆ ಮುನ್ನ ಮಣ್ಣನ ಫಲವತ್ತತೆ, ಸಾವಯವ ಗೊಬ್ಬರಗಳತ್ತ ಗಮನ, ಉತ್ತಮ ಗುಣಮಟ್ಟದ ಬೀಜಗಳ ಆಯ್ಕೆಯತ್ತ ಹೆಚ್ಚಿನ ಒತ್ತು ನೀಡಬೇಕು ಎಂದರು.

ಪ್ರಸ್ತುತ ಸನ್ನಿವೇಶದಲ್ಲಿ ಕೃಷಿ-ಪತ್ರಿಕೋದ್ಯಮದ ಪ್ರಾಮುಖ್ಯತೆಕುರಿತು ಪ್ಯಾನೆಲ್ ಚರ್ಚೆ  ಹಮ್ಮಿಕೊಳ್ಳಲಾಗಿತ್ತು. ಚರ್ಚೆಯಲ್ಲಿ ಡಾ. ಎ.ಕೆ ಸಿಂಗ್, ಡಿಡಿಜಿ ವಿಸ್ತರಣೆ, ಐಸಿಎಆರ್, ಅಡಾಲ್ಬರ್ಟೊ ರೊಸ್ಸಿ, ಪ್ರಧಾನ ಕಾರ್ಯದರ್ಶಿ (IFAJ), ಡಾ. ಎಸ್.ಕೆ.ಮಲ್ಹೋತ್ರಾ, ಯೋಜನಾ ನಿರ್ದೇಶಕ – DKMA (ICAR), ಡಾ. ಜೆ.ಪಿ ಮಿಶ್ರಾ OSD (ನೀತಿ ಯೋಜನೆ ಮತ್ತು ಪಾಲುದಾರಿಕೆ) & ADG (IR), ICAR ಶ್ರೀ. ಆಡ್ರಿಯನ್ ಬೆಲ್, ಖಜಾಂಚಿ, IFAJ, ಡಾ. ಬಿ.ಆರ್. ಕಾಂಬೋಜ್, VC, CCS ಹರಿಯಾಣ ಕೃಷಿ ವಿಶ್ವವಿದ್ಯಾಲಯ,

ಹಿಸಾರ್, ಡಾ. ಕೃಷ್ಣ ಕುಮಾರ್, VC, RPCAU, ಪುಸಾ, ಸಮಸ್ತಿಪುರ್, ಬಿಹಾರ, ಡಾ. ವಿ. ಪ್ರವೀಣ್ ರಾವ್, VC, PJ ತೆಲಂಗಾಣ ರಾಜ್ಯ ಕೃಷಿ ವಿಶ್ವವಿದ್ಯಾಲಯ, ಹೈದರಾಬಾದ್ , ಡಾ.ಎ.ಕೆ ಕರ್ನಾಟಕ, ವಿಸಿ, ಉತ್ತರಾಖಂಡ ಕೃಷಿ ವಿಶ್ವವಿದ್ಯಾಲಯ, ಡಾ. ಆರ್‌ಎಸ್ ಕುರೀಲ್, ವಿಸಿ, ಎಂಜಿಯುಹೆಚ್‌ಎಫ್, ಛತ್ತೀಸ್‌ಗಢ ಪ್ರೊ. ಪ್ರಭಾ ಶಂಕರ್ ಶುಕ್ಲಾ, ವಿಸಿ, ಈಶಾನ್ಯ ಹಿಲ್ ವಿಶ್ವವಿದ್ಯಾಲಯ, ಶಿಲ್ಲಾಂಗ್,  ಹಗ್ ಮೇನಾರ್ಡ್, ಗ್ಲೋಬಲ್ ಮ್ಯಾನೇಜರ್, IFAJ ಚೌರ್ಧರಿ ಮೊಹಮ್ಮದ್ ಇಕುಬಾಲ್, ಕೃಷಿ ನಿರ್ದೇಶಕ, ಶ್ರೀ ನಗರ ಕಾಶ್ಮೀರ,

“ಅಗ್ರಿಕಲ್ಚರ್ ಜರ್ನಲಿಸ್ಟ್ ಅಸೋಸಿಯೇಷನ್ ಆಫ್ ಇಂಡಿಯಾ”ದ ಲಾಂಛನ ಬಿಡುಗಡೆ ಮತ್ತು ವೆಬ್‌ಸೈಟ್ ಅನಾವರಣ ಕಾರ್ಯಕ್ರಮ

ಅವಧೇಶ್ ಕುನ್ವರ್, ಎಡಿಎ ಪ್ರಶಾರ್, ಕೃಷಿ ನಿರ್ದೇಶಕ, ಉತ್ತರ ಪ್ರದೇಶ, ಸೋರಜ್ ಸಿಂಗ್, ಮಾಜಿ ಕೃಷಿ ನಿರ್ದೇಶಕರು, ಉತ್ತರ ಪ್ರದೇಶ, ಡಾ. ಎಸ್ ಭಟ್ಟಾಚಾರ್ಜಿ, ಮಾಜಿ ಮ್ಯಾನೇಜಿಂಗ್ ಡೈರೆಕ್ಟರ್, NERAMAC Ltd. Govt. ಭಾರತದ ಇಸ್ಮಾಯಿಲ್ ಉಗುರಲ್, ಅಧ್ಯಕ್ಷರು, TGAI, ಕನ್ವಾಲ್ ಸಿಂಗ್ ಚೌಹಾಣ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಪ್ರಗತಿಪರ ರೈತ, ಆನಂದ ತ್ರಿಪಾಠಿ, ಮಾಜಿ JDA ಬ್ಯೂರೋ,

ಕೃಷಿ ಇಲಾಖೆ,  ಉತ್ತರ ಪ್ರದೇಶ, ಡಾ. ವಿ.ವಿ.ಸದಮತೆ, ಕೃಷಿ ಯೋಜನೆ ಮಾಜಿ ಸಲಹೆಗಾರ ಡಾ. ಕಲ್ಯಾಣ್ ಗೋಸ್ವಾಮಿ, ಡಿಜಿ, ಎಸಿಎಫ್‌ಐ ಆಯೋಗ, ಸಂಜೀಬ್ ಮುಖರ್ಜಿ, ವ್ಯಾಪಾರ ಗುಣಮಟ್ಟ ಭಾಗವಹಿಸಿದ್ದರು.

AJAI A Historic Moment
AJAI A Historic Moment
ಪಶುಸಂಗೋಪನೆ, ಮೀನುಗಾರಿಕೆ ಮತ್ತು ಹೈನುಗಾರಿಕೆ ಕೇಂದ್ರ ಸಚಿವ ಪರ್ಷೋತ್ತಮ ರೂಪಾಲಾ ಅವರು ಕೃಷಿ ಜಾಗರಣ ಆಯೋಜಿಸಿದ್ದ AJAI ಲೋಗೊ ಮತ್ತು ವೆಬ್‌ಸೈಟ್ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು