News

ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 4 ರವರೆಗೆ ವಾಯುಪಡೆಯ ನೇಮಕಾತಿ ರ್ಯಾಲಿ

04 September, 2020 8:43 PM IST By:

ಪಿಯುಸಿ ಮತ್ತು ಡಿಪ್ಲೊಮಾ ಪಾಸಾದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ. ಇದೇ ತಿಂಗಳ ಸೆಪ್ಟೆಂಬರ್ 23 ರಿಂದ ಅಕ್ಟೋಬರ್ 4 ರವರೆಗೆ ವಾಯುಪಡೆ ಹುದ್ದೆಗಳ ನೇಮಕಾತಿಗೆ ಕರ್ನಾಟಕ ರಾಜ್ಯದ ಅಭ್ಯರ್ಥಿಗಳಿಗಾಗಿ ಪ್ರತ್ಯೇಕವಾಗಿ ನೇಮಕಾತಿ ರ್ಯಾಲಿಯನ್ನು ಹಮ್ಮಿಕೊಂಡಿದೆ.

ಗ್ರೂಪ್ ‘ಎಕ್ಸ್’ (ತಾಂತ್ರಿಕ) ವಹಿವಾಟಿನಲ್ಲಿನ ಹುದ್ದೆಗಳನ್ನು ಆಯ್ಕೆ ಮಾಡಲು ಈ ನೇಮಕಾತಿ ರ‍್ಯಾಲಿಯನ್ನು ನಡೆಸಲಾಗುತ್ತದೆ. ಕರ್ನಾಟಕ ರಾಜ್ಯದ ಅವಿವಾಹಿತ ಪುರುಷ ಭಾರತೀಯ ನಾಗರಿಕರು ಅರ್ಹ ಅಭ್ಯರ್ಥಿಗಳಾಗಿದ್ದು, ಜನವರಿ 17, 2000 ರಿಂದ 2003 ಜನವರಿ 31 ರ ನಡುವೆ ಜನಿಸಿರಬೇಕು.

ಶೈಕ್ಷಣಿಕ ವಿದ್ಯಾರ್ಹತೆ:

ಗಣಿತ, ಭೌತಶಾಸ್ತ್ರ ಮತ್ತು ಇಂಗ್ಲಿಷಿನೊಂದಿಗೆ ಕಡ್ಡಾಯ ವಿಷಯವಾಗಿ, 12 ನೇ ತರಗತಿ (ಪಿಯುಸಿ) ಸಮನಾದ ಪರೀಕ್ಷೆಯಲ್ಲಿ ಕನಿಷ್ಠ ಶೇಕಡ.50 ಅಂಕಗಳು ಮತ್ತು ಇಂಗ್ಲಿಷ್‌ನಲ್ಲಿ ಶೇಕಡ.50 ಅಂಕಗಳನ್ನು ಪಡೆದಿರಬೇಕು. ಅಥವಾ ಮೂರು ವರ್ಷ ಡಿಪ್ಲೊಮ ಕೋರ್ಸ್‌ನಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಕಂಪ್ಯೂಟರ್ ಸೈನ್ಸ್, ಇನ್ಸ್ಟ್ರುಮೆಂಟೇಶನ್ ಟೆಕ್ನಾಲಜಿ, ಇನ್ಫಾರ್ಮೇಷನ್‌ ಸೈನ್ಸ್‌ ಡಿಪ್ಲೊಮವನ್ನು ಸರ್ಕಾರಿ ಮಾನ್ಯತೆ ಪಡೆದ ಪಾಲಿಟೆಕ್ನಿಕ್ ಸಂಸ್ಥೆಗಳಿಂದ ಒಟ್ಟು ಶೇಕಡ.50 ಅಂಕಗಳನ್ನು ಮತ್ತು ಇಂಗ್ಲಿಷ್‌ನಲ್ಲಿ ಶೇಕಡ.50 ಅಂಕಗಳನ್ನು ಪಡೆದು ಪಾಸ್‌ ಆಗಿರಬೇಕು

ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ ವಿಳಾಸ www.airmenselection.cdac.in ಗೆ ಭೇಟಿ ನೀಡಿ ಆನ್‌ಲೈನ್‌ ರಿಜಿಸ್ಟ್ರೇಷನ್‌ ಮಾಡಿಕೊಳ್ಳಬೇಕು. ಈ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ತಮ್ಮ ವಿದ್ಯಾರ್ಹತೆ ಅಂಕಪಟ್ಟಿಗಳು, ಮೂಲ ಅಂಕಪಟ್ಟಿಗಳು, ಇತ್ತೀಚೆಗೆ ತೆಗೆಸಿದ ಕಲರ್‌ ಫೋಟೋಗಳನ್ನು ತೆಗೆದುಕೊಂಡು ಹಾಜರಾಗಬೇಕು.

ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ವೆಬ್‌ಸೈಟ್‌ ವಿಳಾಸ www.airmenselection.cdac.in ಗೆ ಅಥವಾ ಕರ್ನಾಟಕದಲ್ಲಿನ 'ವಾಯುಪಡೆಯ ಹುದ್ದೆಗಳ ಆಯ್ಕೆ ಕೇಂದ್ರ, ನಂ .1, ಕ್ಯೂಬನ್ ರಸ್ತೆ, ಬೆಂಗಳೂರು - 560 001' ಗೆ ಭೇಟಿ ನೀಡಿ ಸಂಪರ್ಕಿಸಬಹುದು.