News

IIT kharagpur ದಿಂದ ಕೃಷಿ ಮತ್ತು ಆಹಾರ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆ ಕುರಿತು ಆನ್ಲೈನ್ ತರಬೇತಿ, ಇಂದೇ ಅರ್ಜಿ ಸಲ್ಲಿಸಿ

29 November, 2020 9:23 AM IST By:

ಐಐಟಿ ಖರಗ್‌ಪುರ ಕೃಷಿ ಮತ್ತು ಆಹಾರ ತಂತ್ರಜ್ಞಾನ ಆಧಾರಿತ ಉದ್ಯಮಶೀಲತೆ ಕುರಿತು ಆನ್‌ಲೈನ್ ತರಬೇತಿ ಕಾರ್ಯಕ್ರಮಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಿದೆ, ಹಾಗಾಗಿ ಆಸಕ್ತರು ಅರ್ಜಿಯನ್ನು ಸಲ್ಲಿಸಬೇಕಾಗಿ ವಿನಂತಿ. ಖರಗ್‌ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿನ ಅಗ್ರಿ ಬಿಸಿನೆಸ್ ಇನ್ಕ್ಯುಬೇಷನ್ ಸೆಂಟರ್ ಈ ತರಬೇತಿಯನ್ನು ನೀಡುತ್ತಿದೆ.

ತರಬೇತಿಯಲ್ಲಿ ನೀಡುವ ಮಾಹಿತಿ :

-ಜೈವಿಕ ಇಂಧನಗಳು ಮತ್ತು ಗ್ರಾಮೀಣ ವಿದ್ಯುದೀಕರಣಕ್ಕಾಗಿ ಜೈವಿಕ ಅನಿಲ

-ಬೆಳೆ ಉತ್ಪಾದನೆಗೆ ಮಣ್ಣಿನ ಪರೀಕ್ಷೆಯ ಮಹತ್ವ

- ಸಾವಯವ ಕೃಷಿ ಮತ್ತು ವರ್ಮಿಕಂಪೋಸ್ಟಿಂಗ್

- ಕೃಷಿ ಉಪಕರಣಗಳು ಮತ್ತು ಸಲಕರಣೆಗಳ ಕಾರ್ಯಾಚರಣೆ

- ಸೂಕ್ಷ್ಮ ನೀರಾವರಿ ಮತ್ತು ಸಂರಕ್ಷಿತ ಕೃಷಿ

-ಹಣ್ಣುಗಳು ಮತ್ತು ತರಕಾರಿಗಳ ಸಣ್ಣ ಪ್ರಮಾಣದ ಸಂಸ್ಕರಣೆ

- ಬೇಕರಿ, ಮಿಠಾಯಿ ಮತ್ತು ಸಿದ್ಧ ಆಹಾರಗಳನ್ನು ಸೇವಿಸಿ, ಹಾಗೂ ಇನ್ನಿತರ ವಿಷಯಗಳು

ಆನ್‌ಲೈನ್ ತರಬೇತಿ ಕಾರ್ಯಕ್ರಮವನ್ನು 2020 ರ ಡಿಸೆಂಬರ್ 7 ರಿಂದ 17 ರವರೆಗೆ ಸೋಮವಾರದಿಂದ ಶನಿವಾರದವರೆಗೆ ಸಂಜೆ 4 ರಿಂದ 6 ರವರೆಗೆ ನಡೆಸಲಾಗುವುದು.

ಆಸಕ್ತರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಡಿಸೆಂಬರ್  5  ಕೊನೆಯ ದಿನಾಂಕ. ಆಯ್ಕೆಯಾದ ಅಭ್ಯರ್ಥಿಗಳಿಗೆ ಮುಂದಿನ ವಿವರಗಳನ್ನು ಕಳಸಲಾಗುವುದು.