News

ರಾಜ್ಯದಲ್ಲಿ ಕೃಷಿ ಉತ್ಪಾದನೆ‌ ಹೆಚ್ಚಳಕ್ಕೆ ಚಿಂತನೆ: ಸೌರಶಕ್ತಿ ಬ್ಲಾಕ್‌ಗಳಿಗಾಗಿ ಕೇಂದ್ರ ಸಚಿವರಿಗೆ ಬಿ‌.ಸಿ.ಪಾಟೀಲ್ ಮನವಿ

29 August, 2020 9:15 AM IST By:

ರಾಜ್ಯದಲ್ಲಿ ಕೃಷಿ ಉತ್ಪಾದನೆ ಹೆಚ್ಚಿಸುವುದಕ್ಕಾಗೆ ಕರ್ನಾಟಕ ರಾಜ್ಯಕ್ಕೆ ಸೌರಶಕ್ತಿಗಾಗಿ ಹೆಚ್ಚುವರಿ 10 ಬ್ಲಾಕ್‌ಗಳನ್ನು ನೀಡಬೇಕೆಂದು ಕೇಂದ್ರ ಇಂಧನ ಖಾತೆ ಸಚಿವ ಆರ್.ಕೆ ಸಿಂಗ್ ರವರೊಂದಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಚರ್ಚಿಸಿ ಮನವಿ ಮಾಡಿದ್ದಾರೆ.

ಸೌರಶಕ್ತಿ ಬಳಕೆಗೆ ಹೆಚ್ಚು ಸೂಕ್ತವಾದ ಭೂಪ್ರದೇಶ ಹೊಂದಿರುವುದರಿಂದ ಕೃಷಿಯಲ್ಲಿ ಸೌರಶಕ್ತಿ­ಯನ್ನು ಬಳಸಿ ಉತ್ಪಾದನೆಯನ್ನು ಹೆಚ್ಚಿ­ಸು­ವುದು ಅತ್ಯವಶ್ಯಕವಾಗಿದೆ. ಕರ್ನಾಟಕ ರಾಜ್ಯದಲ್ಲಿ ಕೃಷಿಯಲ್ಲಿ ಸೌರಶಕ್ತಿ ಮೂಲಕ ನೀರಾವರಿ ಬಳಸುವುದರಿಂದ ಹೆಚ್ಚು ಉತ್ಪಾ­ದನೆ ಮಾಡಬಹುದು. ಹೀಗಾಗಿ ಕರ್ನಾಟಕದಲ್ಲಿ ಕೇಂದ್ರ ಸರ್ಕಾರ ಸೌರಶಕ್ತಿ ಯೋಜನೆ ಬಲವರ್ಧನೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.

ಕೇಂದ್ರ ಸಚಿವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿ.ಸಿ.ಪಾಟೀಲ್ ಅವರು, ರಾಜ್ಯದ ರೈತರಿಗೆ ಯೂರಿಯಾ ಗೊಬ್ಬರ ಯಾವುದೇ ರೀತಿಯಲ್ಲಿ ಕೊರತೆಯಾಗದಂತೆ ಕೇಂದ್ರ ರಸಾಯನಿಕ ಗೊಬ್ಬರ ಸಚಿವ ಡಿ.ವಿ ಸದಾನಂದಗೌಡ ಅವರನ್ನು ಭೇಟಿ ಮಾಡಿ ಚರ್ಚಿಸಲಾಗಿದೆ‌ ಎಂದರು.