News

ರಾಜ್ಯ ಸರ್ಕಾರದಿಂದ ರೈತರಿಗೆ “ಕೃಷಿ- ಖುಷಿ” ಗುಡ್‌ನ್ಯೂಸ್‌!

26 December, 2023 11:03 AM IST By: Hitesh
ರೈತರಿಗೆ ಖುಷಿ ನ್ಯೂಸ್‌

ರೈತರಿಗೆ ರಾಜ್ಯ ಸರ್ಕಾರವು ಹಲವು ಸ್ಕೀಂಗಳನ್ನು ಪರಿಚಯಿಸಿದೆ.

ಈಗಾಗಲೇ 5 ಗ್ಯಾರಂಟಿ  (5 Guarantees scheme)

ಯೋಜನೆಗಳಿಂದ ರಾಜ್ಯದಲ್ಲಿ ಕಾಂಗ್ರೆಸ್‌ ಸದ್ದು ಮಾಡುತ್ತಿದೆ.

ಇದೀಗ ರೈತರಿಗೆ ಖುಷಿ ಕೊಡುವ ಯೋಜನೆಗಳನ್ನು ಘೋಷಿಸಿದೆ.  

ಅಕ್ರಮ ವಿದ್ಯುತ್‌ ಸಂಪರ್ಕ ಸಕ್ರಮ

ಅಕ್ರಮ ವಿದ್ಯುತ್ ಸಂಪರ್ಕ ಹೊಂದಿರುವ ಕರ್ನಾಟಕದ ರೈತರ 4 ಲಕ್ಷ ಕೃಷಿ

ಪಂಪ್‌ಸೆಟ್‌ಗಳನ್ನು (Regulation of Agricultural Pumpsets) ಸಕ್ರಮವಾಗಲಿದೆ.

ಈ ಸಂಬಂಧ ಸರ್ಕಾರ ತೀಮಾನ ಮಾಡಿದೆ. ಈ ಮೂಲಕ  ಮೂಲಸೌಕರ್ಯಗಳನ್ನು ಒದಗಿಸಲಿದೆ.  

ಕೃಷಿಯನ್ನು ಲಾಭದಾಯಕ ಉದ್ಯೋಗವಾಗಿಸುವ (Agriculture is a profitable occupation)

ನಿಟ್ಟಿನಲ್ಲಿ  ಸರ್ಕಾರದ ಪ್ರಯತ್ನ ಎಂದಿದ್ದಾರೆ ಸಿ.ಎಂ.

ಸಿ.ಎಂ ಸಿದ್ದರಾಮಯ್ಯ (CM Siddaramaiah) ಅವರು ಈ ವಾಗ್ದಾನವನ್ನು  ನೀಡಿದ್ದಾರೆ.  

ಬರ ಮೊದಲ ಕಂತಿನಲ್ಲಿ 2000 ಸಾವಿರ ರೂಪಾಯಿ

ಭೀಕರ ಬರ (A terrible drought) ದಿಂದ ಈ ಬಾರಿ ಕರ್ನಾಟಕದ ರೈತರು ಸಂಕಷ್ಟದಲ್ಲಿದ್ದಾರೆ.

ಮೊದಲ ಕಂತಿನ ಬರಪರಿಹಾರವಾಗಿ ರೂ. 2,000 ಸಿಗಲಿದೆ.

ಕೇಂದ್ರ ಸರ್ಕಾರದ ಎನ್.ಡಿ.ಆರ್.ಎಫ್ (NDRF) ಅನುದಾನಕ್ಕೆ ಕಾಯದೆ ಈ ಕ್ರಮ.

ರೈತರ ಹಿತಕಾಪಾಡುವ ಏಕೈಕ ಉದ್ದೇಶದಿಂದ ತಕ್ಷಣದ ನೆರವನ್ನು ಘೋಷಿಸಲಾಗಿದೆ

ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ. 

ಬಗರ್‌ ಹುಕುಂದಾರರಿಗೆ ಗುಡ್‌ನ್ಯೂಸ್‌

ಬಗರ್‌ ಹುಕುಂ (Bagar Hukum) ಭೂಮಿಯನ್ನು ಬಳಸುತ್ತಿದ್ದವರಿಗೂ ಸರ್ಕಾರ ಗುಡ್‌ನ್ಯೂಸ್‌ ನೀಡಿದೆ.

ಒಂದೂವರೆ ದಶಕಕ್ಕಿಂತ ಹೆಚ್ಚು ಕಾಲ ಸಾಗುವಳಿ ಮಾಡಿದ್ದರೆ, ಅಂದರೆ 15 ವರ್ಷ ಬಗರ್ ಹುಕುಂ ಬಳಸಿದವರಿಗೆ ಈ ಲಾಭ ಸಿಗಲಿದೆ.

ಈ ರೀತಿ ಬಳಸಿದವರಿಗೆ ಭೂಮಿಯನ್ನು ಸಕ್ರಮಗೊಳಿಸಿ, ಭೂಒಡೆತನದ ಹಕ್ಕನ್ನು ರೈತರಿಗೆ ನೀಡಲಾಗುವುದು.

ಪ್ರತಿಯೊಬ್ಬ ರೈತನು ಸ್ವಂತ ಭೂಮಿಯಲ್ಲಿ ಶ್ರಮದ ಮೂಲಕ ನೆಮ್ಮದಿಯ ಬದುಕು ಕಟ್ಟಿಕೊಳ್ಳಲಿದ್ದಾರೆ.   

ಕೃಷಿಗೆ ಆಧುನಿಕ ಸ್ಪರ್ಶ

ಕೃಷಿ ಚಟುವಟಿಕೆಗಳಿಗೆ ಆಧುನಿಕತೆಯ ಸ್ಪರ್ಶ (Bagar Hukum) ನೀಡಿಲಾಗುತ್ತಿದೆ. ಬಂಡವಾಳ ವೆಚ್ಚವನ್ನು ತಗ್ಗಿಸುವ ಹಾಗೂ ಅಧಿಕ ಇಳುವರಿ

ರೈತರ ಕೈಸೇರುವಂತೆ ಮಾಡಲಾಗುವುದು. ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ  100 ಕೋಟಿ ರೂಪಾಯಿ ವೆಚ್ಚದಲ್ಲಿ 100

ಹೈ-ಟೆಕ್ ಹಾರ್ವೆಸ್ಟರ್ (Hi-tech harvester )ಹಬ್‌ಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.  

ಕೃಷಿಭಾಗ್ಯ ಯೋಜನೆ

ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಮಳೆ ಕೊರತೆ (Krishibhagya Yojana)ಯಾದರೂ, ರೈತರ ಬೆಳೆಗಳಿಗೆ ನೀರಿನ ಅಭಾವ ಎದುರಾಗದು.

ಈ ಸದಾಶಯದೊಂದಿಗೆ 100 ಕೋಟಿ ವೆಚ್ಚದಲ್ಲಿ ರಾಜ್ಯದ 106 ತಾಲ್ಲೂಕುಗಳಲ್ಲಿ ಕೃಷಿಭಾಗ್ಯ ಯೋಜನೆಯನ್ನು

ಮರುಜಾರಿ ಮಾಡಲಾಗುತ್ತಿದೆ. ಇದಕ್ಕೆ ಕ್ರಮ ವಹಿಸಿದ್ದೇವೆ ಎಂದಿದೆ ಸರ್ಕಾರ.  

ಬರದ ಸಂಕಷ್ಟದ ನಡುವೆ ವಿದ್ಯುತ್‌

ಬರದ ಸಂಕಷ್ಟದ ನಡುವೆಯೂ ರೈತರ ಕೃಷಿ ಪಂಪ್‌ಸೆಟ್‌(Farmers Agricultural Pumpset)ಗಳಿಗೆ 7 ಗಂಟೆಗಳ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ.

ಈ ಮೂಲಕ ರೈತರಿಗೆ ನೆರವು ನೀಡಲಾಗುತ್ತಿದೆ ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು.