News

ಕೃಷಿ ಉತ್ಪನ್ನಗಳ ಮುಕ್ತ ಮಾರಾಟಕ್ಕೆ (agriculture free farm trade ordinance) ಸರ್ಕಾರದಿಂದ ಅಧಿಸೂಚನೆ

22 July, 2020 6:12 PM IST By:

ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ರೈತರು ನಿಗದಿತ ಮಾರುಕಟ್ಟೆ ಹೊರತಾಗಿ ತಮಗೆ ಬೇಕಾದ ಕಡೆ ಕೃಷಿ ಉತ್ಪನ್ನ ಮಾರಾಟ ಮಾಡಬಹುದು ಎಂಬ ಆದೇಶ  ಹೊರಡಿಸಿದ ಬೆನ್ನಲ್ಲೆ ಕೇಂದ್ರ ಸರ್ಕಾರವು ಕೂಡ ರೈತರು ತಮ್ಮ ಕೃಷಿ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ (agriculture free farm trade ordinance)  ಮಾಡಲು ಅನುವು ಮಾಡಿಕೊಡುವ ಎರಡು ಸುಗ್ರೀವಾಜ್ಞೆಗಳ ಅಧಿಸೂಚನೆಯನ್ನು ಹೊರಡಿಸಿದೆ.

ನೋಂದಾಯಿತ ಮಾರುಕಟ್ಟೆ (APMC) ಹೊರತಾಗಿ ರೈತರು ತಮ್ಮ ಇಷ್ಟಕ್ಕೆ ಅನುಗುಣವಾಗಿ ರಾಜ್ಯದ ಗಡಿ ದಾಟಿಯೂ ಕೃಷಿ ಉತ್ಪನ್ನಗಳನ್ನು ಮಾರಲು ಅವಕಾಶ ಸಿಗಲಿದೆ. ರೈತರು ಮಂಡಿಯಿಂದ ಆಚೆಗೆ ಉತ್ಪನ್ನವನ್ನು ಮಾರಲು ಮತ್ತು ಬೆಳೆ ಬೆಳೆಯುವುದಕ್ಕೂ ಮುನ್ನ ಖಾಸಗಿಯವರ ಜೊತೆ ಕೃಷಿ ಉತ್ಪನ್ನ ಮಾರಾಟ–ಖರೀದಿ ಒಡಂಬಡಿಕೆ ಮಾಡಿಕೊಳ್ಳಲು ಈ ಸುಗ್ರೀವಾಜ್ಞೆಗಳು ನೆರವಾಗುತ್ತವೆ.  

ರೈತ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಮತ್ತು ನೆರವು), ಹಾಗೂ ಬೆಲೆ ಖಾತರಿ ಮತ್ತು ಬೇಸಾಯ ಸೇವೆಗಳ ಒಪ್ಪಂದ (ಸಬಲೀಕರಣ ಮತ್ತು ಸಂರಕ್ಷಣೆ) ಸುಗ್ರೀವಾಜ್ಞೆಗಳನ್ನು(ordinance)  2020ರ ಜೂನ್ 5ರಂದು ಹೊರಡಿಸಲಾಗಿತ್ತು. ಜುಲೈ
20ರಂದು ಈ ಬಗೆಗಿನ ಅಧಿಸೂಚನೆಯನ್ನು ಈಗ ಕೃಷಿ ಸಚಿವಾಲಯ ( Union Agriculture Ministry)ಪ್ರಕಟಿಸಿದೆ.  

ಸರ್ಕಾರದ ಅನುಸೂಚಿಯಲ್ಲಿರುವ ಕೃಷಿ ಮಂಡಿಗಳಷ್ಟೇ ಅಲ್ಲದೆ, ರಾಜ್ಯದೊಳಗೆ ಹಾಗೂ ಹೊರಗೆ ರೈತರು ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಬಹುದು. ರೈತರು ಉತ್ಪನ್ನಗಳನ್ನು ಗೋದಾಮು, ಕೋಲ್ಡ್ ಸ್ಟೋರೇಜ್, ಕಾರ್ಖಾನೆ  ಆವರಣ ಹೀಗೆ ಎಲ್ಲಾ ಕಡ ಮಾರಾಟ ಮಾಡಬಹುದು. ಇ-ಟ್ರೇಡಿಂಗ್  ಮೂಲಕ ಕಂಪನಿಗಳು, ಕೃಷಿ ಸೊಸೈಟಿಗಳು, ಕೃಷಿ ಉತ್ಪನ್ನ  ಸಂಸ್ಥೆಗಳು ಉತ್ಪನ್ನ ಖರೀದಿಸಬಹುದು. ಖಾಸಗಿಯವರು, ಕೃಷಿ ಉತ್ಪನ್ನ ಸಂಘಟನೆಗಳು ಹಾಗೂ ಕೃಷಿ ಸಹಕಾರ ಸಂಸ್ಥೆಗಳು ಇದಕ್ಕೆ ಅಗತ್ಯವಾದ ವ್ಯವಸ್ಥೆ ಕಲ್ಪಿಸಿಕೊಳ್ಳಬಹುದು. .ಇ-ಟ್ರೇಡಿಂಗ್ ನಿಯಮ ಉಲ್ಲಂಘಿಸಿದರೆ 50 ಸಾವಿರ ರೂಪಾಯಿಯಿಂದ 10 ಲಕ್ಷ ರೂಪಾಯಿಯವರೆಗ ದಂಡ ವಿಧಿಸಲು ಅವಕಾಶವಿದೆ. ಕೃಷಿ ಉತ್ಪನ್ನ ಖರೀದಿಸುವವರು ರೈತರಿಗೆ ಅದೇ ದಿನ ಹಣ ಪಾವತಿಸಬೇಕು. ಅಥವಾ ಕೆಲವು ಸಂದರ್ಭಗಳಲ್ಲಿ ಮೂರು ಕೆಲಸದ ದಿನಗಳ ಒಳಗೆ ಹಣ ನೀಡಬೇಕು ಎಂದು ಸುಗ್ರೀವಾಜ್ಞೆ ಸ್ಪಷ್ಟವಾಗಿ ತಿಳಿಸಿದೆ.