News

ಪ್ರತಿ ತಿಂಗಳ ಒಂದು ದಿನದ ವೇತನವನ್ನು ಸರ್ಕಾರಕ್ಕೆ ನೀಡುವ ಮೂಲಕ ಮಾದರಿಯಾದ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ

12 December, 2020 8:33 PM IST By:

 ಭಾರತ ದೇಶವು ಆರ್ಥಿಕ ಹಿನ್ನೆಲೆಯನ್ನು ಅನುಭವಿಸುತ್ತಿರುವ ಸಮಯದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಪ್ರಾಧ್ಯಾಪಕರೊಬ್ಬರು ತಮ್ಮ ತಿಂಗಳ ಒಂದು ದಿನದ ವೇತನವನ್ನು ಪಿಎಂ ಕೇರ್ ಫಂಡ್ ಗೆ ನೀಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರು ತಮ್ಮ ಜೀವಿತ ಇರುವವರೆಗೂ ಅಂದರೆ ಅವರ ನಿವೃತ್ತಿ ಹೊಂದಿದ ನಂತರವೂ ತಮ್ಮ ಪಿಂಚಣಿ ಹಣದ ಒಂದು ದಿನದ ವೇತನವನ್ನು ಸರಕಾರಕ್ಕೆ ನೀಡಲು ನಿರ್ಧರಿಸಿದ್ದಾರೆ.

 ಡಾ. ಚಿದಾನಂದ ಮನ್ಸೂರ್ ಕೃಷಿ ವಿಶ್ವವಿದ್ಯಾಲಯ ಧಾರವಾಡ ದಲ್ಲಿ ಬೇಸಾಯ ಶಾಸ್ತ್ರ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ, ಇವರು ಬಿಎಸ್ಸಿ ಅಗ್ರಿ, ಎಂಎಸ್ಸಿ ಅಗ್ರಿ, ಪಿ ಎಚ್ ಡಿ ಮುಗಿಸಿ ತಮ್ಮ ಪೋಸ್ಟ್ ಡಾಕ್ಟರೇಟ್ ಪದವಿಯನ್ನು ಕೆನಡಾದಿಂದ ಪಡೆದರು. ಇವರು ಪ್ರಾಧ್ಯಾಪಕರಾಗಿ ಸೇವೆಯನ್ನು ಸಲ್ಲಿಸಿ ಹಾಗೂ ಕೃಷಿ ಮಹಾವಿದ್ಯಾಲಯ ಹನುಮನಮಟ್ಟಿ ಡೀನ್ ಆಗಿ  ಕೂಡ ಕಾರ್ಯವನ್ನು ನಿರ್ವಹಿಸಿದ್ದಾರೆ.

 ಇವರು ಈಗ ತಮಗೆ ಬರುವಂತಹ ವೇತನದಲ್ಲಿ ತಿಂಗಳಲ್ಲಿ ಒಂದು ದಿನದ ವೇತನವನ್ನು ಸರ್ಕಾರದ ಪಿಎಂ ಕೇರ್ ಫಂಡಿಗೆ ನೀಡಲು ನಿರ್ಧರಿಸಿದ್ದಾರೆ. ಇವರ ಒಂದು ದಿನದ ವೇತನ 7, 470 ರೂಪಾಯಿ, ಇವರು ಒಂದು ತಿಂಗಳಿಗೆ ಇಷ್ಟು ಹಣವನ್ನು ನೀಡಿದರೆ ಒಂದು ವರ್ಷಕ್ಕೆ ಒಟ್ಟು ಮತ್ತು 89, 640 ರೂಪಾಯಿ ಆಗುತ್ತದೆ. ಇವರು ತಾವು ನಿವೃತ್ತಿಯಾಗುವ ವರೆಗೆ  ಹಣವನ್ನು ನೀಡಿದರೆ ತಮ್ಮ ನಿವೃತ್ತಿಯ ನಂತರವೂ ಪಿಂಚಣಿಯ ಹಣದ ಒಂದು ದಿನದ ವೇತನ ನೀಡುತ್ತೇನೆ ಎಂದು ಹೇಳಿದ್ದಾರೆ, ಇವರ ಪಿಂಚಣಿ ಹಣದ ಒಂದ ದಿನದ ವೇತನವಾದ 2, 513 ರೂಪಾಯಿಗಳನ್ನು ನೀಡುತ್ತಾರೆ.

ಈಗಾಗಲೇ ಇವರ ರಾಣೆಬೆನ್ನೂರಿನ ಸ್ಟೇಟ್ ಬ್ಯಾಂಕ್ ಒಫ್ ಇಂಡಿಯಾದಲ್ಲಿ ಒಂದು ದಿನದ ವೇತನ ಕಡಿತವಾಗಿದೆ. ಈ ರೀತಿ ಕೊರೋನಾದಂತ ಸಂಕಷ್ಟದಲ್ಲಿ ಭಾರತ ಆರ್ಥಿಕ ಸಂಕಷ್ಟದಲ್ಲಿದೆ, ನಮ್ಮ ದೇಶದ ಜಿಡಿಪಿ ಯು ಕೂಡ ತುಂಬಾ ಕುಸಿದಿದ್ದು ಆತಂಕವಾಗಿದೆ, ಹಾಗಾಗಿ ಇಂತಹ ಸಮಯದಲ್ಲಿ ಡಾ. ಚಿದಾನಂದ ಮನ್ಸೂರ್ ಅವರು ಮಾಡಿದಂತಹ ಕಾರ್ಯ ಎಲ್ಲರಿಗೂ ಮಾದರಿಯಾಗುವಂತದ್ದು, ಹಾಗಾಗಿ ಇದೇ ರೀತಿ ಉಳ್ಳವರು ಸಹಾಯ ಮಾಡಿದರೆ ನಮ್ಮ ದೇಶಕ್ಕೆ ಬಹುದೊಡ್ಡ ಕಾಣಿಕೆಯನ್ನು ನೀಡಿದಂತಾಗುತ್ತದೆ.

 ಕೃಷಿ ವಿಶ್ವವಿದ್ಯಾಲಯ ಪ್ರಾಧ್ಯಾಪಕರ ಈ ಈ ಒಂದು ಸೇವೆಯನ್ನು ನಾವು ಮಾದರಿಯನ್ನಾಗಿ ತೆಗೆದುಕೊಂಡು ಉಳ್ಳವರು ಹೆಚ್ಚೆಚ್ಚು ಸಹಾಯ ಮಾಡಿದರೆ ನಮ್ಮ ದೇಶದ ಆರ್ಥಿಕ ಪರಿಸ್ಥಿತಿ ಗೆ, ಹಾಗೂ ದೇಶದ ಬೆನ್ನೆಲುಬಾದ ರೈತರಿಗೆ, ಹಾಗೂ ಸಂಕಷ್ಟದಲ್ಲಿರುವ ಅಂತಹ ನಮ್ಮ ದೇಶದ ಸಾರ್ವಜನಿಕರಿಗೆ ಸಹಾಯವಾಗುತ್ತದೆ.