News

ಕೃಷಿ ವಿಜ್ಞಾನಿ, ಕೃಷಿಕ ಹಾಗೂ ಲೇಖಕರೂ ಹೌದು ಸುಭಾಷ್ ಪಾಲೇಕರ್ ಎಂಬ ರೈತ ಬಂಧು

30 October, 2018 10:05 AM IST By:

ಕೃಷಿ ವಿಜ್ಞಾನಿ, ಕೃಷಿಕ ಹಾಗೂ ಲೇಖಕರೂ ಹೌದು ಸುಭಾಷ್ ಪಾಲೇಕರ್ ಎಂಬ ರೈತ ಬಂಧು

ಭಾರತ ದೇಶದಾದ್ಯಂತ ಕೃಷಿಗೆ ಹೆಚ್ಚು ಪ್ರಾಧಾನತ್ಯೆ. ದೇಶದ ಬೆನ್ನೆಲುಬಾದ ರೈತನ ಸರ್ವತೋಮುಖ ಅಭಿವೃದ್ಧಿಗೆ ಆಳುವ ಸರ್ಕಾರಗಳು, ದೇಶದ ಆಹಾರ ಭದ್ರತೆಗಾಗಿ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆದರೂ ದೇಶದ ರೈತನ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗದೆ ಸಂಕಷ್ಟ ಅನುಭವಿಸುತ್ತಿವೆ. ದೇಶದ ಜನಸಂಖ್ಯೆಗೆ ಅನುಗುಣವಾಗಿ ಆಹಾರವನ್ನು ಉತ್ಪಾಧಿಸುವುದು ಮುಖ್ಯ. ಅಲ್ಲದೆ, ಹೆಚ್ಚುವರಿ ವಿವಿಧ ಆಹಾರ ಪದಾರ್ಥಗಳನ್ನು ರಫ್ತು ಮಾಡಿ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವ ಹೊಣೆ ರೈತರ ಮೇಲಿದೆ. ಆದರೆ, ರೈತ ಕಷ್ಟಪಟ್ಟು ಬೆಳೆಯುವ ಬೆಳೆಗೆ ಸರಿಯಾದ ಬೆಲೆ ಸಿಗದೆ ಆರ್ಥಿಕ ದುಃಸ್ಥಿತಿ ಎದುರಿಸುವುದು ಒಂದಡೆಯಾದರೆ, ಹೆಚ್ಚಾಗುತ್ತಿರುವ ಬೆಳೆಯ ರೋಗಬಾಧೆಗಳು, ಹೈಬ್ರೀಡ್ ಹೆಸರಲ್ಲಿ ಹೊಸ ತಳಿಗಳು ಕೈಕೊಡುವುದು, ಇದ್ಯಾವುದೇ ಸಮಸ್ಯೆಗಳಿಗೆ ಸಿಲುಕದಿದ್ದರೂ ಅತಿವೃಷ್ಠಿ-ಅನಾವೃಷ್ಠಿಗಳಿಗೆ ಬೆಳೆಗಳು ಸಿಲುಕಿ ನಷ್ಟ ಅನುಭವಿಸುವುದು ಇಂದಿನ ರೈತನ ಸ್ಥಿತಿಯಾಗಿದೆ. ದೇಶದ ಒಂದೊಂದು ಭಾಗದಲ್ಲಿ ಒಂದೊಂದು ರೀತಿಯ ಕಷ್ಟ-ನಷ್ಟ-ತೊಂದರೆಗಳನ್ನು ಅನುಭವಿಸುತ್ತಲೇ ಜೀವನ ತೇಯಿತ್ತಿರುವ ರೈತನ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗಿ ದೇಶದಾದ್ಯಂತ ಪ್ರಚಲಿತದಲ್ಲಿರುವವರು ಸುಭಾಷ್‍ಪಾಳೇಕಾರ್ ಎಂಬ ಕೃಷಿಕ, ಕೃಷಿ ವಿಜ್ಞಾನಿ, ಲೇಖಕ ಹಾಗೂ ರೈತಪರ ಚಿಂತಕರೂ ಆಗಿದ್ದಾರೆ.

 ಭಾರತ ದೇಶದ ಜನಸಂಖ್ಯೆ ಏರಿಕೆಯಾಗುತ್ತಿದ್ದು ಜನತೆಯ ಎಲ್ಲಾ ಅಗತ್ಯಗಳನ್ನು ಪೂರೈಸಲು ಆಳುವ ಸರ್ಕಾರಗಳು ಮುಂದಾಗುತ್ತಿದ್ದರೂ ಪ್ರಗತಿ ಮಾತ್ರ ಆಶಾದಾಯಕವಾಗಿಲ್ಲ. ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ರೈತರು ಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ರೈತರ ಸಮಸ್ಯೆಗಳಿಗೆ ಸರ್ಕಾರದ ನೆರವು ಸಾಲದಾಗಿ ರೈತರು ಸಾಲವೆಂಬ ಶೂಲಕ್ಕೆ ಸಿಲುಕಿ ಮಹಾಪಾಪ ಎನ್ನುವ `ಆತ್ಮಹತ್ಯೆ’ಗೆ ಶರಣಾಗುತ್ತಿದ್ದಾರೆ. ಕಳೆದ ಐದಾರು ವರ್ಷದಲ್ಲಿ ಸುಮಾರು 7ಸಾವಿರಕ್ಕೂ ಹೆಚ್ಚು ರೈತರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಆತ್ಮಹತ್ಯೆ ಎಂಬುದು ದೇಶದಾದ್ಯಂತ ವ್ಯಾಪಿಸಿದೆ. ಪ್ರತಿವರ್ಷ ನಮ್ಮ ರೈತರನ್ನು ನಾವೇ ಸಾವಿನಡೆಗೆ ದೂಡುತ್ತಿದ್ದೇವೆಯೇ ಎಂದೆನಿಸುವುದು ಸಾಮಾನ್ಯ. ದೇಶದ ರೈತರ ಇಂದಿನ ಶೋಚನೀಯ ಪರಿಸ್ಥಿತಿಯ ಅಧ್ಯಯನಕ್ಕೆ ಮುಂದಾದವರಲ್ಲಿ ಪ್ರಥಮಿಗರು ಸುಭಾಷ್‍ಪಾಳೆಕರ್. ವೈಯುಕ್ತಿಕವಾಗಿ ಕೃಷಿಕರಾಗಿ, ಕೃಷಿ ವಿಜ್ಞಾನದಲ್ಲಿ ಪದವಿಗಳನ್ನು ಪಡೆದವರಾಗಿ ರೈತರ ಬಾಳನ್ನು ಹಸನಾಗಿಸುವ ಹಲವು ಕಾರ್ಯಕ್ರಮಗಳನ್ನು ರೂಪಸಿದ್ದಾರೆ. ಇವೆಲ್ಲವುಗಳನ್ನು ಪುಸ್ತಕದಲ್ಲಿರಿಸುವುದನ್ನು ಬಿಟ್ಟು ಪ್ರಾಯೋಗಿಕ ಯತ್ನಗಳನ್ನು ನಡೆಸಿ ವೈಯುಕ್ತಿಕ ಯಶ ಸಾಧಿಸಿದ್ದಲ್ಲದೆ, ರೈತರುಗಳಿಗೆ ಈ ಕಾರ್ಯಕ್ರಮಗಳನ್ನು ತಲುಪಿಸುವ ಪ್ರಯತ್ನ ದೇಶದಾದ್ಯಂತ ನಡೆಸಿದ್ದಾರೆ. ಪ್ರಮುಖವಾಗಿ ಸಾವಕೃಷಿ ಅನುಸರಣೆಯಿಂದ ಯಶ ಸಾಧ್ಯ ಎಂಬುದು ಶ್ರೀಯುತರ ಮೂಲ ಮಂತ್ರವಾಗಿದೆ.

 ಸುಭಾಷ್‍ಪಾಳೆಕರ್‍ರವರ ಪರಿಚೆಯ:

 ಮಹಾರಾಷ್ಟ್ರದ ವಿದರ್ಭದ ಸಣ್ಣ ಹಳ್ಳಿಯಲ್ಲಿ 1949ರಂದು ಸುಭಾಷ್‍ಪಾಳೆಕರ್ ಜನಿಸಿದರು. ನಾಗಪುರದಲ್ಲಿ ಕೃಷಿ ಕ್ಷೇತ್ರದಲ್ಲಿ ಪದವಿ ಪಡೆದುಕೊಂಡರು. ಕಾಲೇಜು ಶಿಕ್ಷಣದಲ್ಲಿ ಸ್ಯಾಟುಡಾ ಬುಡಕಟ್ಟು ವಾಸಿಸುವ ಪ್ರದೇಶದಲ್ಲಿ ಅವರೊಂದಿಗೆ ಕೃಷಿ ಕೆಲಸ ಮಾಡಿ ಈ ಜನ ಅನುಭವಿಸುತ್ತಿರುವ ಸಮಸ್ಯೆಗಳನ್ನು ಅನುಭವದೊಂದಿಗೆ ಅರಿತುಕೊಂಡರು. 1972ರಲ್ಲಿ ತಮ್ಮ ತಂದೆಯೊಂದಿಗೆ ಕೃಷಿ ಆರಂಭಿಸಿ ಹಲವು ತಲೆಮಾರುಗಳಿಂದ ಅನುಸರಣೆಯ ಕೃಷಿ ಮಾಡಲಾರಂಭಿಸಿದರು. ತಂದೆ ಅನುಸರಿಸುತ್ತಿದ್ದ ನೈಸರ್ಗಿಕ ಕೃಷಿಗೆ ರಾಸಾಯನಿಕ ಕೃಷಿಯನ್ನು ಆರಂಭಿಸಿದರು. ಪ್ರಾಚೀನ ಹಾಗೂ ಪ್ರಸ್ತುತದ ಕೃಷಿ ಪದ್ದತಿಗಳ ಬಗ್ಗೆ ಅಧ್ಯಯನ ನಡೆಸಿ ಸಾವಯವ ಕೃಷಿ ಅನುಸರಣೆಯಿಂದ ಮಾತ್ರ ಮುಂದಿನ ಪೀಳಿಗೆಗೆ ಉಳಿಸಿಕೊಡಬಹುದಾದ ಕೃಷಿ ಬಗ್ಗೆ ಹೆಚ್ಚಿನ ಚಿಂತನೆ ನಡೆಸಿದರು.

 ಸರಿಸುಮಾರು 20ವರ್ಷಗಳಲ್ಲಿ ಕೃಷಿ ಬಗೆಗಿನ ಹಲವು ಲೇಖನಗಳನ್ನು ಮಾಧ್ಯಮಗಳಿಗೆ ನೀಡಿದರು. ಜತೆಗೆ, ವೇದ, ಉಪನಿಷತ್ತು, ಗ್ರಂಥ, ತತ್ವಶಾಸ್ತ್ರಗಳನ್ನು ಅಭ್ಯಾಸ ಮಾಡಿದರು. ಸಂತ ಧೀನೇಶ್ವರ್, ಸಂತ ತುಕಾರಾಂ, ಸಂತ ಕಬೀರ ಅವರುಗಳ ಅಧ್ಯಾತ್ಮಿಕ ಚಿಂತನೆಗಳ ಆಕರ್ಷಣೆಗೊಳಪಟ್ಟರು. ಈ ನಡುವೆ ಮಹಾತ್ಮಗಾಂಧೀಜಿ, ಕಾರ್ಲಮಾಕ್ರ್ಸ ಬಗ್ಗೆ ಅಧ್ಯಾಯನ ನಡೆಸಿದರು. ಈ ಇಬ್ಬರು ದಾರ್ಶನಿಕರ ನಡುವೆ ಇರುವ ವೆತ್ಯಾಸಗಳನ್ನು ಅಥೈಸಿಕೊಂಡು ಅಂತಿಮವಾಗಿ ಗಾಂಧೀಜಿಯವರ ತತ್ವಶಾಸ್ತ್ರದ ಸತ್ಯಕ್ಕೆ ಹತ್ತಿರವಾದರು. ಕಾರ್ಲ್‍ಮಾಕ್ರ್ಸ್, ರಷ್ಯಾದಲ್ಲಿ ಕಮ್ಯೂನಿಷ್ಟ್‍ರ ಆಂದೋಲನ ಸಂದರ್ಭದಲ್ಲಿ ಸಾವಿರಾರು ರೈತರ ಪ್ರಾಣ ಕಳೆದುಕೊಳ್ಳಲು ಕಾರಣವಾದರು. ಆದರೆ, ಮಹಾತ್ಮಗಾಂಧೀಜಿಯವರು ಸತ್ಯ ಹಾಗೂ ಅಹಿಂಸಾ ಮಾರ್ಗಕ್ಕೆ ಪರ್ಯಾಯವೇ ಇಲ್ಲ ಎಂಬ ನಿರ್ಧಾರಕ್ಕೆ ಬಂದರು. ವಿವೇಕಾನಂದ, ರವೀಂದ್ರನಾಥ ಟ್ಯಾಗೂರ್, ಜ್ಯೋತಿಬಾಪುಲೆ, ಶಿವಾಜಿ ಮಹರಾಜ್ ಅವರಂತಹ ಮಹಾನ್ ವ್ಯಕ್ತಿಗಳ ಚಿಂತನೆಗಳನ್ನು ಅನುಸರಣೆಗೆ ಮುಂದಾದರು. ಮಹಾನ್ ವ್ಯಕ್ತಿಗಳ ಚಿಂತನೆಗಳನ್ನು ಮೈಗೂಡಿಸಿಕೊಂಡ ಪ್ರಭಾವದಿಂದ ರೈತರ ಸರ್ವತೋಮುಖ ಅಭಿವೃದ್ಧಿಯೊಂದಿಗೆ ದೇಶದ ಪ್ರಗತಿ ಸಾಧ್ಯ ಎಂಬ ಅಚಲ ನಿರ್ಧಾರಕ್ಕೆ ಬಂದರು ಮಾನವೀಯ ಮೌಲ್ಯದ ಸುಭಾಷ್‍ಪಾಳೆಕರ್.

 ಸಾವಯವ ಕೃಷಿ ಎಂದರೇನು?

 ಭಾರತದಲ್ಲಿ ಸಾವಯವ ಕೃಷಿ ಎಂಬುದನ್ನು ಹೊಸದಾಗಿ ಕಲಿಸುವ ಅಥವ ಕಲಿಸುವ ಅಗತ್ಯವಿಲ್ಲ. ಈ ಹಿಂದೆ ಅನುಸರಿಸುತ್ತಿದ್ದ ಪ್ರಾಚೀನ ಪದ್ದತಿ. ಆದರೆ, ಕೃಷಿ ಕ್ಷೇತ್ರದ ಅಭಿವೃದ್ಧಿಗಾಗಿ ಸರ್ಕಾರಗಳು ಹಾಗೂ ವಿವಿಧ ಖಾಸಗಿ ಕಂಪನಿಗಳು ಹೊರ ದೇಶದಿಂದ ಆಮದು ಮಾಡಿಕೊಳ್ಳಲಾದ ಬಿತ್ತನೆಬೀಜ ಮತ್ತು ರಸಾಯನಿಕಗಳ ಬಳಕೆ ಹೆಚ್ಚಾಗಿರುವುದರಿಂದ ಇದರ ಪರಿಣಾಮ ಎಲ್ಲಾ ರಂಗಗಳ ಮೇಲೆ ವ್ಯತಿರಿಕ್ತವಾಗಿದೆ. ಮಣ್ಣಿನಲ್ಲಿ ನೈಜ್ಯ ಗುಣಗಳು ಕಳೆದು ರಸಾಯನಿಕಗಳಿಂದ ಮಣ್ಣಿಗೆ ತಾತ್ಕಾಲಿಕ ಜೀವ ತುಂಬುತ್ತಿರುವುದರಿಂದ ಬೆಳೆಯುವ ಬೆಳೆಗಳೂ ತನ್ನ ನೈಜ್ಯತೆಯನ್ನು ಕಳೆದುಕೊಳ್ಳುತ್ತಿವೆ. ಇಂತಹ ಆಧುನಿಕ ಪದ್ದತಿಯನ್ನು ಬದಿಗೊತ್ತಿ, ಬೆಳೆ, ಪ್ರಾಣಿ, ಕೃಷಿ ವ್ಯರ್ಥಗಳು ಮತ್ತು ಜಲಜೀವಿಗಳಂತಹ ನೈಜ್ಯ ಸಾವಯವ ತ್ಯಾಜ್ಯಗಳನ್ನು ಬಳಸಿಕೊಂಡು ಕೃಷಿ ಮಾಡುವುದೇ `ಸಾವಯವ ಕೃಷಿ’ ಆಗಿದೆ. ಇದರಿಂದ ಪರಿಸರ ಸ್ನೇಹಿ, ಮಾಲಿನ್ಯ ರಹಿತ ಪರಿಸರದಲ್ಲಿ ಸುಸ್ಥಿರ ಉತ್ಪಾದನೆಯಾಗುವುದಲ್ಲದೆ, ಬೆಳೆಗಳಿಗೆ ಉತ್ತಮ ಪೋಷಕಾಂಶಗಳು ದೊರೆಯುವುದು.

 ಸಾವಯವ ಕೃಷಿಗಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಗ್ರಿಕಲ್ಚರ್‍ನ ಅಧ್ಯಯನ ತಂಡದ ಪ್ರಕಾರ `ಸಾವಯವ ಬೇಸಾಯವು ಸಿಂಥೆಟಿಕ್ ಇನ್‍ಪುಟ್‍ಗಳಾದ ರಸಗೊಬ್ಬರಗಳು, ಕೀಟನಾಶಕಗಳು, ಹಾರ್ಮೋನ್‍ಗಳು, ಫೀಡ್’ ಸೇರ್ಪಡೆಗಳಿಂದ ಭೂಮಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿ, ಇದು ಹೀಗೆ ಮುಂದುವರೆದರೆ ಮುಂದಿನ ಪೀಳಿಗೆ ಕಷ್ಟದಿಂದ ಪಾರಾಗಲು ಸಾಧ್ಯವೇ ಇಲ್ಲ ಎಂಬ ಆತಂಕ ವ್ಯಕ್ತಪಡಿಸಿದೆ.

 ಸಾವಯವ ಕೃಷಿ ಅಗತ್ಯವೇಕೆ?

 ದೇಶದ ಜನಸಂಖ್ಯೆ ಹೆಚ್ಚಳದಿಂದ ಕೃಷಿ ಉತ್ಪಾದನೆಗೆ ಹೆಚ್ಚಿನ ಆಧ್ಯತೆ ನೀಡಲೇಬೇಕಿದೆ.  ಹೆಚ್ಚಿನ ಇಳುವರಿಗಾಗಿ ಮತ್ತೊಮ್ಮೆ `ಹಸಿರುಕ್ರಾಂತಿ’ ಆಗಬೇಕಾದ ಪರಿಸ್ಥಿತಿ ಬಂದಿದ್ದು, ಉತ್ಪಾದನೆಗೆ ಹೆಚ್ಚಿನ ಹಣ ಖರ್ಚು ಮಾಡಿದರೂ ಲಾಭ ಕಡಿಮೆಯಾಗುತ್ತಿದೆ. ಹೆಚ್ಚಿನ ಹಣ ರಸಾಯನಿಕಗಳು ಹಾಗೂ ಕೀಟನಾಶಕಗಳಿಗೆ ವ್ಯಯವಾಗುತ್ತಿದ್ದು ಲಾಭಾಂಶ ಕಡಿಮೆಯಾಗುತ್ತಿದೆ. ಆದ್ದರಿಂದ ನೈಸರ್ಗಿಕ ಕೃಷಿ ಕಡೆಗೆ ನಮ್ಮ ರೈತರನ್ನು ಕರೆದೊಯ್ಯಬೇಕಿದೆ. ಇದರಿಂದ ದೀರ್ಘಕಾಲಿಕ ಮಣ್ಣಿನ ಫಲವತ್ತತೆಯನ್ನು ಸಾಧಿಸಲು ಸಹಕಾರಿ. ಮಣ್ಣಿನ ಜೈವಿಕ ಚಟುವಟಿಕೆಯನ್ನು ಪ್ರೋತ್ಸಾಹಿಸಲು ಸೂಕ್ತ ಯಾಂತ್ರಕ ಮಧ್ಯಸ್ಥಿಕೆಯೂ ಅಗತ್ಯ. ಮಣ್ಣಿನಲ್ಲಿ ಸೂಕ್ಷ್ಮಾಣುಗಳ ಕ್ರಿಯೆಯಿಂದ ಸಸ್ಯಕ್ಕೆ ಲಭ್ಯವಾಗುವಂತಹ ಹಾಗೂ ಕರಗುವ ಪೌಷ್ಠಿಕ ಮೂಲಗಳನ್ನು ಪರೋಕ್ಷವಾಗಿ ಬಳಸಿ ಬೆಳೆಗಳಿಗೆ ಪೋಷಕಾಂಶ ಒದಗಿಸುವುದು ಸಾಧ್ಯ. ಸಾರಜನಕ ಮತ್ತು ಜೈವಿಕ ಸ್ಥಿರೀಕರಣದ ಬಳಕೆಯ ಮೂಲಕ ಸಾರಜನಕ ಸ್ವಯಂ ಪೂರ್ಣತೆ ಹಾಗೂ ಸಾವಯವ ವಸ್ತುಗಳ ಪರಿಣಾಮಕಾರಿ ಬಳಕೆಯಿಂದ ಬೆಳೆ ಉಳಿಕೆಯಾಗುತ್ತದೆ ಎಂಬ ಅಚಲ ನಿರ್ಧಾರ ಕೃಷಿ ತಜ್ಞ ಸುಭಾಷ್‍ಪಾಳೆಕರ್‍ರವರದು.

 `ಭಾರತ ದೇಶ ಕೃಷಿ ಪ್ರಧಾನ ದೇಶ’ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಅಧಿಕ ಇಳುವರಿಗೆ ಹಾಗೂ ಕೀಟಬಾಧೆಗಳನ್ನು ತಪ್ಪಿಸಲು ಮುಂದಾಗಿರುವ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಖಾಸಗಿ ಕಂಪನಿಗಳ ವಿಜ್ಞಾನಿಗಳು ಅಗತ್ಯ ಅಧ್ಯಯನಗಳನ್ನು ನಡೆಸಿ ಯಶಗಳಿಸುತ್ತಿವೆ. ಆದರೂ ದೇಶದ ಬೆನ್ನೆಲುಬಾದ ರೈತರ ಸರ್ವತೋಮುಖ ಅಭಿವೃದ್ಧಿಯಲ್ಲದೆ ಮಣ್ಣಿನ ಸಹಜಗುಣವನ್ನು ಮುಂದಿನ ಪೀಳಿಗೆ ನೀಡುವಂತಹ ಚಿಂತನೆಗಳನ್ನು ನಡೆಸುತ್ತಿಲ್ಲ. ರಸಾಯನಿಕಗಳನ್ನು ಬಳಸಿ ಉತ್ಪಾಧಿಸುವ ಬೆಳೆಗಳೂ ರೋಗದಿಂದ ಕೂಡಿದ್ದು ಈ ಪದ್ದತಿಯಿಂದ ರೈತರನ್ನು ಹೊರತಂದು ಸ್ಥಳೀಯವಾಗಿ ಪರಿಸರದಿಂದ ದೊರೆಯುವ ತ್ಯಾಜ್ಯಗಳ ಬಳಕೆಯಿಂದ ಆರೋಗ್ಯಪೂರ್ಣ ಬೆಳೆಯನ್ನು ಬೆಳೆಯಬೇಕು ಎಂಬುವ ಉದ್ದೇಶ ಹಾಗೂ ಇಂತಹ ಬೆಳೆಯನ್ನು ಬಳಸುವ ಜನತೆಯ ಉತ್ತಮ ಆರೋಗ್ಯಕ್ಕೆ ದಾರಿಯಾಗಬೇಕು ಎಂಬುದೇ ಕೃಷಿತಜ್ಞ ಸುಬಾಷ್‍ಪಾಳೆಕರ್‍ರವರ ತೀವ್ರತರವಾದ ಪ್ರಯತ್ನ. ರೈತಪರ ಚಿಂತನೆಗಳನ್ನು ಹೊಂದಿರುವ ತಜ್ಞರ ಸಲಹೆ ಸೂಚನೆಗಳನ್ನು ರೈತರು ಪಾಲಿಸಲು ಮುಂದಾಗಿ ದೇಶದ ಸರ್ವತೋಮುಖ ಅಭಿವೃದ್ಧಿ ಹಾಗೂ ಪ್ರಗತಿಗೆ ಸಹಕಾರಿಗಳಾಗ ಬೇಕು ಅಲ್ಲವೆ?