News

Agricultural Meeting: ಕೃಷಿ ಪರಿಕರ ಮಾರಾಟಗಾರರ ಸಭೆ

24 May, 2023 7:39 PM IST By: Kalmesh T
Agricultural Implement Dealers' Meeting

Agricultural Implement Dealers' Meeting : ಮುಂಗಾರು ಹಂಗಾಮಿನ ಕೃಷಿ ಪರಿಕರ ಮಾರಾಟಗಾರರ ಸಭೆ ಹಾಗೂ ತರಬೇತಿ ಕಾರ್ಯಕ್ರಮ ಆಯೋಜನೆ.

ರಸಗೊಬ್ಬರ ಮಾರಾಟ ಮಾಡುವಾಗ ಚಾಚು ತಪ್ಪದೇ ರಸಗೊಬ್ಬರ ನಿಯಮದನ್ವಯ ಮಾರಾಟ ಮಾಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಅವರು ಹೇಳಿದರು.

ಅವರು ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಧಾರವಾಡ ತಾಲ್ಲೂಕಿನ ಮುಂಗಾರು ಹಂಗಾಮಿನ ಕೃಷಿ ಪರಿಕರ ಮಾರಾಟಗಾರರ ಸಭೆ ಹಾಗೂ ತರಬೇತಿ ಕಾರ್ಯಕ್ರಮವನ್ನು (ಮೇ.20 ರಂದು) ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ನಿಯಮಗಳನ್ನು ಉಲ್ಲಂಘಿಸಿದರೆ ಮುಲಾಜಿಲ್ಲದೇ ರಸಗೊಬ್ಬರ ಮಾರಾಟ ಪರವಾನಿಗೆ ಪತ್ರವನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು. ರಸಗೊಬ್ಬರವನ್ನು ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಲು ರಸಗೊಬ್ಬರ ದಾಸ್ತಾನು ಅಂಗಡಿ ಮಾಲೀಕರಿಗೆ ಸೂಚಿಸಿದರು.

ಸಹಾಯಕ ಕೃಷಿ ನಿರ್ದೇಶಕರು ಮಾತನಾಡಿ, ರಸಗೊಬ್ಬರ ದಾಸ್ತಾನಿನ ವಿವರಗಳು ಭೌತಿಕವಾಗಿ ಹಾಗೂ ಪಿ.ಓ.ಎಸ್. ನಲ್ಲಿ ಒಂದೇ ತರನಾಗಿರಬೇಕೆಂದು ತಿಳಿಸಿದರು. ಸಹಾಯಕ ಕೃಷಿ ನಿದೇಶಕರು ರಾಘವೇಂದ್ರ ಬಮ್ಮಿಗಟ್ಟಿ ಅವರು ಬೀಜ, ಕೀಟನಾಶಕ ಹಾಗೂ ರಸಗೊಬ್ಬರ ಕಾಯ್ದೆಗಳನ್ನು ರೈತರಿಗೆ ತಿಳಿಸಿ, ಪಾಲಿಸುವಂತೆ ಸೂಚಿಸಿದರು.

ಸಹಾಯಕ ಕೃಷಿ ನಿದೇಶಕರು ವಿ.ವಿ.ವಿಠ್ಠಲರಾವ್ ಅವರು ಮಾತನಾಡಿ, ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಡಿಜಿಟಲ್ ವ್ಯವಸ್ಥೆ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ಸೊಸೈಟಿಗಳ ಕಾರ್ಯದರ್ಶಿಗಳು, ಎಫ್.ಪಿ.ಒ ಗಳು ಸಿ.ಇ.ಓ ಗಳು, ಎಲ್ಲ ಕೃಷಿ ಪರಿಕರ ಮಾರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.