News

ಕೃಷಿ ಮೇಳದ ಅಂಗವಾಗಿ ಆ.11ರಂದು ಸಿರಿಧಾನ್ಯ ಆಧಾರಿತ ಖಾದ್ಯ ಸ್ಪರ್ಧೆ ಆಯೋಜನೆ

09 August, 2023 10:51 AM IST By: Kalmesh T
Agricultural fair: cooking competition of millets organized on August 11

ಕೃಷಿಮೇಳ-2023 ರ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಸಮಿತಿಯಿಂದ ಮಹಿಳೆಯರಿಗಾಗಿ ಸಿರಿಧಾನ್ಯ ಆಧಾರಿತ (ಸಿಹಿ ಮತ್ತು ಖಾರಾ) ಖಾದ್ಯಗಳ ಸ್ಪರ್ಧೆಯನ್ನು ದಿನಾಂಕ: 11.08,2023 ರಂದು ಬೆಳಿಗ್ಗೆ 10.00 ಗಂಟೆಗೆ ಆಹಾರ ಮತ್ತು ಪೋಷಣಾ ವಿಭಾಗ, ಸಮುದಾಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳ - 2023 ರ ಅಂಗವಾಗಿ ಸಿರಿಧಾನ್ಯ ಆಧಾರಿತ (ಸಿಹಿ ಮತ್ತು ಖಾರಾ) ಖಾದ್ಯಗಳು ತಯಾರಿಸುವ ಸ್ಪರ್ಧೆ ಕುರಿತು ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಧಾರವಾಡ ಕೃಷಿ ವಿಶ್ವವಿದ್ಯಾಲಯವು ಸೆಪ್ಟೆಂಬರ್ 09-12, 2023 ರಲ್ಲಿ ಕೃಷಿಮೇಳವನ್ನು ಹಮ್ಮಿಕೊಂಡಿದೆ.

ಧಾರವಾಡ ಕೃಷಿ ವಿಶ್ವವಿದ್ಯಾಲಯದ, ಸಮುದಾಯ ವಿಜ್ಞಾನ (ಗ್ರಾಮೀಣ ಗೃಹ ವಿಜ್ಞಾನ) ಮಹಾವಿದ್ಯಾಲಯದ ವತಿಯಿಂದ ಕೃಷಿಮೇಳ-2023 ರ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಸಮಿತಿಯಿಂದ ಮಹಿಳೆಯರಿಗಾಗಿ ಸಿರಿಧಾನ್ಯ ಆಧಾರಿತ (ಸಿಹಿ ಮತ್ತು ಖಾರಾ) ಖಾದ್ಯಗಳ ಸ್ಪರ್ಧೆಯನ್ನು ದಿನಾಂಕ: 11.08,2023 ರಂದು ಬೆಳಿಗ್ಗೆ 10.00 ಗಂಟೆಗೆ ಆಹಾರ ಮತ್ತು ಪೋಷಣಾ ವಿಭಾಗ, ಸಮುದಾಯ ವಿಜ್ಞಾನ ಮಹಾವಿದ್ಯಾಲಯದಲ್ಲಿ ಏರ್ಪಡಿಸಲಾಗಿದೆ.

ಭಾಗವಹಿಸಲಿಚ್ಚಿಸುವ ಮಹಿಳೆಯರು ಸಿರಿಧಾನ್ಯ ಆಧಾರಿತ ಸಿಹಿ ಅಥವಾ ಖಾರಾ ತಿಂಡಿ-ತಿನಿಸಿನೊಂದಿಗೆ, ಅದನ್ನು ತಯಾರಿಸುವ ವಿವರವಾದ ವಿಧಾನದೊಂದಿಗೆ ಸರ್ಧೆಯಲ್ಲಿ ಭಾಗವಹಿಸಬೇಕು.

ತಿಂಡಿ-ತಿನಿಸುಗಳ ಪೌಷ್ಠಿಕತೆ, ರುಚಿ ಹಾಗೂ ಮ೦ಡಿಸುವಿಕೆಯ ಆಧಾರದ ಮೇಲೆ ಮೌಲ್ಯಮಾಪನೆ ಮಾಡಲಾಗುವದು. ಸ್ಪರ್ಧೆಗೆ ನೊಂದಾಯಿಸಲಿಚ್ಚಿಸುವವರು ಈ ಮೊಬೈಲ್‌ ಸಂಖ್ಯೆಗಳಿಗೆ (9449062812/ 9945653076/ 8553395310) ದಿನಾಂಕ 11.08.2023 ರೊಳಗಾಗಿ ಸಂಪರ್ಕಿಸಿ ಹೆಸರುಗಳನ್ನು ನೋಂದಾಯಿಸಬಹುದು.

ಸೂಚನೆ: ಮೊದಲು ನೊಂದಾಯಿಸಿದ 25 ಮಹಿಳಾ ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶ.

ಸ್ಪರ್ಧೆಯ ವಿಜೇತರಿಗೆ ಕೃಷಿ ಮೇಳ 2023 ರಲ್ಲಿ ಸ್ಮರಣಿಕೆಯೊಂದಿಗೆ ಪ್ರಶಸ್ತಿ ಪತ್ರವನ್ನು ವಿತರಿಸಲಾಗುವುದು. ಸ್ಪರ್ಧೆಗೆ ತಗಲುವ ಎಲ್ಲ ಖರ್ಚು ವೆಚ್ಚವನ್ನು ಸ್ಪರ್ಧಾಳುಗಳೇ ಭರಿಸಬೇಕು.

Tree Man : 3 ಎಕರೆ ಜಮೀನು ಮಾರಿ, 1 ಕೋಟಿ ಸಸಿ ನೆಟ್ಟ ‘ಟ್ರೀ ಮ್ಯಾನ್ʼ ! ಯಾರಿದು ಗೊತ್ತೆ?

ಕೃಷಿ ವಿಶ್ವವಿದ್ಯಾಲಯದ ಪ್ರಕಟಣೆ