News

“ತಂತ್ರಜ್ಞಾನ ಎಷ್ಟೇ ಮುಂದುವರೆದರೂ ರೊಟ್ಟಿಯನ್ನು ಗೂಗಲ್‌ನಿಂದ ಡೌನ್ಲೋಡ್ ಮಾಡಿಕೊಳ್ಳಲಾಗುವುದಿಲ್ಲ” ಪ್ರೊ. ಆಂಚಲ್ ಅರೋರಾ

11 June, 2022 7:55 PM IST By: Kalmesh T
Agri Startup, Cooperative & FPO Summit- Krishi jagran Karnataka

“ತಂತ್ರಜ್ಞಾನ ಎಷ್ಟೇ ಮುಂದುವರೆದರೂ ರೊಟ್ಟಿಯನ್ನು ಗೂಗಲ್‌ನಿಂದ ಡೌನ್‌ಲೋಡ್‌ ಮಾಡಿಕೊಳ್ಳಲಾಗುವುದಿಲ್ಲ. ಇಷ್ಟು ದಿನಗಳವರೆಗೂ ಯಾರೇ ಬಂದರೂ, ಯಾರೇ ಹೋದರೂ ದೇಶವನ್ನು ಮುನ್ನಡೆಸುತ್ತಿರುವುದು ಮಾತ್ರ ರೈತರೇ ಹೊರತು ಇನ್ಯಾವ ರಾಜಕಾರಣಿಗಳು ಅಲ್ಲ ಎಂದು ” ಪ್ರೊ. ಆಂಚಲ್‌ ಅರೋರಾ ಹೇಳಿದರು.

ನವದೆಹಲಿಯಲ್ಲಿ ಶನಿವಾರ ಸಂಜೆ ಕೃಷಿ ಜಾಗರನ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೃಷಿ ಜಾಗರಣ ಮಾಧ್ಯಮವು ಮೂರು ದಿನಗಳ ಶೃಂಗಸಭೆಯನ್ನು ಆಯೋಜಿಸಲಿರುವ ಕುರಿತು ಅಧಿಕೃತವಾಗಿ ಜೂನ್ 11 ರಂದು ಘೋಷಣೆ ಮಾಡಲಾಯಿತು.

ಕೃಷಿ ಜಾಗರಣ ಬೆಳೆದುಬಂದ ಹಾದಿ ಮತ್ತು ಅದರ ಯಶಸ್ಸಿನ ಕುರಿತು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

ಶೃಂಗಸಭೆ "ಕೃಷಿ ಸ್ಟಾರ್ಟ್‌ಅಪ್‌ಗಳು, ಸಹಕಾರಿಗಳು ಮತ್ತು ಎಫ್‌ಪಿಒ ಶೃಂಗಸಭೆ" ಫೆಬ್ರವರಿ 24 ರಿಂದ 26 ರವರೆಗೆ ನಡೆಯಲಿದೆ. ಕೃಷಿ ಸ್ಟಾರ್ಟಪ್‌ಗಳು, ಸಹಕಾರಿ ಸಂಸ್ಥೆಗಳು ಮತ್ತು ಎಫ್‌ಪಿಒಗಳು ಈವೆಂಟ್‌ನ ಪ್ರಮುಖ ಕೇಂದ್ರಬಿಂದುವಾಗಿರುತ್ತವೆ.

“ಅಗ್ರಿ ಸ್ಟಾರ್ಟಪ್‌, ಕೋ-ಆಪ್‌ರೇಟಿವ್‌ ಮತ್ತು ಎಫ್‌ಪಿಓ ಸುಮಿಟ್‌‌” ಕೃಷಿ ಪ್ರಾರಂಭ, ಪಾಲುದಾರಿಕೆ ಮತ್ತು ರೈತ-ಉತ್ಪಾದಿಸುವ ಕಂಪನಿ, IGATT ಮತ್ತು ಕೃಷಿ ಜಾಗೃತಿ ಜಂಟಿ ಬೆಂಬಲದೊಂದಿಗೆ ಪ್ರಾರಂಭವಾಗಲಿರುವ ಕಾರ್ಯಕ್ರಮ ಇದಾಗಿತ್ತು.

ಒಟ್ಟಾರೆಯಾಗಿ ಕೃಷಿ ಜಾಗರಣ ಬೆಳೆದುಬಂದ ಹಾದಿ ಮತ್ತು ಅದರ ಯಶಸ್ಸಿನ ಕುರಿತು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

Agri Startup, Cooperative & FPO Summit- Krishi jagran Karnataka

ಕೃಷಿ ಕ್ಷೇತ್ರದಲ್ಲಿ ಕಳೆದ 25 ವರ್ಷಗಳಲ್ಲಿ ಅಗಾಧವಾದ ಕಾರ್ಯವನ್ನು ಮಾಡಲಾಗಿದೆ. ಕೋಟಿಗಟ್ಟಲೇ ರೈತರನ್ನು ತಲುಪುವಲ್ಲಿ ಯಶಸ್ವಿಯಾಗಿದೆ ಎಂದು  ಕೃಷಿ ಜಾಗರಣ ಪತ್ರಿಕೆಯ ಪ್ರಧಾನ ಸಂಪಾದಕ ಎಂ.ಸಿ.ಡೊಮಿನಿಕ್ ಅವರು ಹೇಳಿದರು.

ಉತ್ತುಂಗದಲ್ಲಿದ್ದ ಕೃಷಿ ಕ್ಷೇತ್ರ ಇಂದು ಕೊನೆ ಆಯ್ಕೆ ಎನ್ನುವಂತಾಗಿದೆ . ಉತ್ತಮನಿಗೆ ಕೃಷಿ, ಮಧ್ಯಮನಿಗೆ ವ್ಯಾಪಾರ ಮತ್ತು ಕನಿಷ್ಠನಿಗೆ ನೌಕರಿ ಎನ್ನುವ ಮಾತು ಸುಳ್ಳಾಗಿ ಇಂದು ಈ ಮಾತು ಸಂಪೂರ್ಣ ತಲೆ ಕೆಳಗಾಗುತ್ತಿದೆ ಎಂದು ಕಮಲ್‌  ಸೋಮಾನಿ ಅವರು ಹೇಳಿದರು.

ಎ.ಸಿ ಕೋನೆಯಲ್ಲಿ ಕುಳಿತು ರೈತರು… ರೈತರು ಎನ್ನುವುದಕ್ಕಿಂತ ನಾವು ರೈತರಿದ್ದ ಜಾಗಕ್ಕೆ ತೆರಳಿ ಅವರ ಅಭಿಪ್ರಾಯ, ಕಷ್ಟ ಸುಖ ಕೇಳುವ ಪ್ರವೃತ್ತಿಯನ್ನು ಬೆಲೆಸಿಕೊಳ್ಳಬೇಕು ಎಂದು ಅಮಿತ್‌ ಸಿನ್ಹಾ ಹೇಳಿದರು.

ಇತರೆ ರಾಷ್ಟ್ರಗಳಂತೆ ತಂತ್ರಜ್ಞಾನಗಳನ್ನು ಬಳಸಿಕೊಂಡು ಭಾರತವು ಕೂಡ ಕೃಷಿ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಮಟ್ಟದ ಸಾಧನೆಯನ್ನು ಮಾಡಬೇಕು. ಇದಕ್ಕೆ ನಮ್ಮೆಲ್ಲರ ಸಹಕಾರ ಬಹಳ ಮುಖ್ಯ ಎಂದು ಸಬೀತಾ ಶರ್ಮಾ ಹೇಳಿದರು.

ರೈತರನ್ನು ಸಂಘಟಿಸುವ ಮತ್ತು ಅವರಿಗೆ ಬೇಕಾಗುವ ಆಧುನಿಕ ಸಂಪನ್ಮೂಲಗಳನ್ನು ತಲುಪಿಸುವ ನಿಟ್ಟಿನಲ್ಲಿ ಎಫ್‌ಪಿಓ (PFO) ಗಳು ಬಹುಮುಖ್ಯ ಪಾತ್ರವನ್ನು ವಹಿಸಿವೆ. ಎಫ್‌ಪಿಓಗಳು ರೈತರ ಒಡನಾಡಿಯಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಧ್ರುವ ಶರ್ಮಾ ಹೇಳಿದರು.

Agri Startup, Cooperative & FPO Summit- Krishi jagran Karnataka