News

ಅನಾಮಧೇಯ ಬಿತ್ತನೆ ಬೀಜ, ರಸಗೊಬ್ಬರ ಖರೀದಿಸದಂತೆ ಕೃಷಿ ಸಚಿವ ಬಿ. ಸಿ.ಪಾಟೀಲ್ ಎಚ್ಚರಿಕೆ

28 August, 2020 9:12 AM IST By:

ನಕಲಿ ಬಿತ್ತನೆ ಬೀಜ ಮನೆಮನೆಗೆ ಪಾರ್ಸಲ್ ಬರಬಹುದು ಹುಷಾರಾಗಿರಿ. ಯಾವುದೇ ಕಾರಣಕ್ಕೂಅಂತಹ ಪಾರ್ಸಲಗಳನ್ನು ತೆಗೆದುಕೊಳ್ಳಬಾರದೆಂದು ಕೃಷಿ ಇಲಾಖೆ ನೀಡಿದ ಎಚ್ಚರಿಕೆಯಿಂದಾಗಿ ರಾಜ್ಯಾದ್ಯಂತ ರೈತರು ಆತಂಕದಲ್ಲಿದ್ದಾರೆ.

ಸಂಕಷ್ಟದಲ್ಲಿರೋ ಅನ್ನದಾತನೀಗ ಮತ್ತೊಂದು ತೊಂದರೆ ಎದುರಾಗಿದೆ. ಮಾರುಕಟ್ಟೆಗೆ ನಕಲಿ ಬಿತ್ತನೆ ಬೀಜ ಲಗ್ಗಯಿಟ್ಟಿದೆ ಎನ್ನೋ ಮಾತುಗಳು ರೈತಾಪಿ ವರ್ಗವನ್ನೀಗ ಕಾಡ್ತಿದೆ. ಚೀನಾದಿಂದ ಅಕ್ರಮವಾಗಿ ನಕಲಿ ಜೈವಿಕ ಬಿತ್ತನೆ ಬೀಜಗಳು ಆಮದಾಗಿದೆ ಎಂಬ ಚರ್ಚೆ ರೈತರ ನಿದ್ದೆಗೆಡಿಸಿದೆ.

 ರಾಜ್ಯದಲ್ಲಿ ಅನಾಮ ಧೇಯ ಕಂಪನಿಗಳ ಹೆಸರಲ್ಲಿ ಬಿತ್ತನೆ ಬೀಜಗಳನ್ನು ರೈತರ ಮನೆ ಬಾಗಿಲಿಗೆ ಸರಬರಾಜು ಆಗುತ್ತಿರುವುದು ದೃಢ ಪಟ್ಟಿದೆ. ಈ ಬಗ್ಗೆ ರೈತರು ಎಚ್ಚರಿಕೆ ವಹಿಸಬೇಕು. ಅನಾಮಧೇಯ ಕಂಪೆನಿ ಹೆಸರಿನಲ್ಲಿ ರಸಗೊಬ್ಬರವಾಗಲೀ ಬಿತ್ತನೆಬೀಜವಾಗಲೀ (fake seed and fertilizer ) ಮನೆಬಾಗಿಲಿಗೆ ಬಂದರೆ ಅಥವಾ ಯಾರಾದರೂ ನೀಡಿದರೆ ರೈತರು ಅದನ್ನು ಖರೀದಿಸಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ (Agriculture minister B.C. Patil) ಸೂಚನೆ ನೀಡಿದ್ದಾರೆ.

ಕೆಲವು ಒಳಸಂಚುಗಳು ಅನಾಮಧೇಯ ಕಂಪನಿ ಹೆಸರಿನಲ್ಲಿರೈತರ ಮನೆಬಾಗಿಲಿಗೆ ಬಿತ್ತನೆ ಬೀಜ ರಸಗೊಬ್ಬರ ಸರಬರಾಜು ಮಾಡುತ್ತಿರುವುದು ತಮ್ಮ ಗಮನಕ್ಕೆ ಬಂದಿದ್ದು, ಇಲಾಖೆ ಈ ಬಗ್ಗೆ ನಿಗಾ ಹಿಸಿದೆ.ರೈತರಿಗೆ ಅನ್ಯಾಯವಾಗುವಂತಹ ಯಾವುದೇ ಮೋಸವನ್ನಾಗಲೀ ನಕಲಿ ಜಾಲವನ್ನಾಗಲೀ ತಾವು ಎಂದಿಗೂ ಸಹಿಸುವುದಿಲ್ಲ ಎಂದಿದ್ದಾರೆ.

ರೈತರು ಆದಷ್ಟು ಅಧಿಕೃತ ಕಂಪನಿಗಳು, ರೈತಸಂಪರ್ಕ ಕೇಂದ್ರ  ಸೂಚಿಸಿದ ಬಿತ್ತನೆ ಬೀಜ ರಾಸಾಯನಿಕ ಗೊಬ್ಬರ ಔಷಧಿಗಳನ್ನೇ ಖರೀದಿಸಿ ಬಳಸಬೇಕು.ಇಂತಹ ಯಾವುದೇ ಅನಾಮಧೇಯ ಪ್ಯಾಕೆಟ್ ಬಂದಲ್ಲಿ ಅಥವಾ ಯಾರಾದರೂ ನೀಡಿದಲ್ಲಿ ಆ ಬಗ್ಗೆ ರೈತರು  ಹಾಗೂ ಜನರು ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಮನವಿ ಮಾಡಿದ್ದಾರೆ.