News

ರೈತರಿಗಾಗಿ ಬಂದಿದೆ 'ಅಗ್ರಿ ಮಾರ್ಕೆಟ್' ಆ್ಯಪ್- ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

18 June, 2020 12:45 PM IST By:

ರೈತರಿಗೆ ಮಾರುಕಟ್ಟೆಯಲ್ಲಿ ಯಾವ ಬೆಳೆಗೆ ಯಾವ ಬೆಲೆಯಿದೆ ಎಂಬುದೇ ಗೊತ್ತಿರುವುದಿಲ್ಲ. ಪರಿಚಯಿಸ್ಥರಿಗೆ ಅಥವಾ ಮಾರುಕಟ್ಟೆಗೆ ಹೋಗಿ ಅಲ್ಲಿ ನಡೆಯುತ್ತಿರುವ ಬೆಲೆ ಕೇಳಿಕೊಂಡು ತಮ್ಮ ಬೆಳೆ ಮಾರಾಟ ಮಾಡುತ್ತಾರೆ. ಕೆಲವು ಸಲ ಮಾರುಕಟ್ಟೆಗೆ ಹೋಗಲು ಒಂದೆರಡು ದಿನ ಹಿಡಿಯಬಹುದು. ಇದರಿಂದಾಗಿ ಕೆಲವು ಸಲ ರೈತರಿಗೆ ಹಾನಿಯೂ ಆಗುವ ಸಾಧ್ಯತೆಯಿದೆ.
ರೈತರ ಸಂಕಷ್ಟ ಅರಿತು ಕೇಂದ್ರ ಸರ್ಕಾರವು ರೈತರು ಮಾರುವ ತನ್ನ ಉತ್ಪನ್ನಗಳ ಧಾರಣೆ ತಿಳಿಯಲು  ರೈತರಿಗಾಗಿ ಅಗ್ರಿ ಮಾರ್ಕೆಟ್ ಆ್ಯಪ್ ಅನ್ನು ಪರಿಚಯಿಸಿದೆ. ಇದು ರೈತರು ಮತ್ತು ವ್ಯಾಪಾರಿಗಳ ನಡುವೆ ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ.

ಈ ಆ್ಯಪ್ ಮೂಲಕ ಭಾರತದಲ್ಲಿ ಬೆಳೆಯುವ ಬಹುತೇಕ ಎಲ್ಲಾ ಬೆಳಗಳ ಧಾರಣೆ ಲಭ್ಯವಿದೆ. ಇದರಲ್ಲಿ ನಿಮಗೆ ಬೇಕಾದ ಬೆಳೆಗಳ ಮಾಹಿತಿಯನ್ನು ತಳಿಗಳ ಪ್ರಕಾರ ನೋಡಬಹುದಾಗಿದೆ. ಅಲ್ಲದೆ ರಾಜ್ಯವಾರು ಬೆಳೆಗಳ ಮಾಹಿತಿಯನ್ನು ಹಾಕಲಾಗಿದೆ. ಹೀಗಾಗಿ ನಿಮಗೆ ಬೇಕಾದ ರಾಜ್ಯದ ಧಾರಣೆಯನ್ನು ಕ್ಷಣ ಮಾತ್ರದಲ್ಲೇ ಪರಿಶೀಲಿಸಬಹದು.
ಈ ಆ್ಯಪ್ನಲ್ಲಿ ಪ್ರತಿದಿನ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗುತ್ತದೆ. ಅಲ್ಲದೆ ಹಿಂದಿನ ದಿನದ ಮಾಹಿತಿಯನ್ನು ಸಹ ನೋಡಬಹುದು. ಗೂಗಲ್ ಪ್ಲೇನಿಂದ ಅಗ್ರಿ ಮಾರ್ಕೆಟ್ ಆ್ಯಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕುಳಿತಲ್ಲಿಯೇ ತಿಳಿಯಬಹುದು ಮಾರುಕಟ್ಟೆ ಬೆಲೆ:

ಇತ್ತೀಚಿನ ವರ್ಷಗಳಲ್ಲಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿಲ್ಲವೆಂದು ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ರೈತರ ಸಾವಿಗೆ ಕಾರಣ ಸಮರ್ಪಕ ಬೆಲೆ ಸಿಗದಿರುವುದು. ದಲ್ಲಾಳಿಗಳು ರೈತರ ಶೋಷಣೆ ಮಾಡಿದ್ದು ಪ್ರಮುಖ ಕಾರಣವಾಗಿತ್ತು.  ಆದರೆ ಈಗ ಒಂದು ಸ್ಮಾರ್ಟ್ ಫೋನ್ ಇದ್ದರೆ ಸಾಕು, ಬೆರಳ ತುದಿಯಲ್ಲೇ ‘ಅಗ್ರಿ ಮಾರ್ಕೆಟ್ ಆ್ಯಪ್’ ಸಹಾಯದಿಂದರೈತ ತನ್ನ ಬೆಳೆಯ ನಿಜವಾದ ಬೆಲೆಯನ್ನು ತಿಳಿಯಲು ಸಾಧ್ಯವಾಗಲಿದೆ. ಈ ಆ್ಯಪ್ ಮೂಲಕ ಭಾರತದಲ್ಲಿ ಬೆಳೆಯುವ ಬಹುತೇಕ ಎಲ್ಲಾ ಬೆಳಗಳ ಧಾರಣೆ ಲಭ್ಯವಿದೆ.

ದೇಶದ ಎಲ್ಲಾ ರಾಜ್ಯಗಳ ಮಾಹಿತಿಯೂ ಸಿಗಲಿದೆ:

ಈ ಆ್ಯಪ್ ವಿಶೇಷತೆಯಂದರೆ ಪ್ರತಿ ರಾಜ್ಯದ ಕೃಷ್ಟಿ ಮಾರುಕಟ್ಟೆಯಲ್ಲಿ ಏನು ಬೆಲೆಯಿದೆ ಎಂಬುದು ಬೆರಳಂಚಿನಲ್ಲೇ ಸಿಗಲಿದೆ. ಗಡಿನಾಡ ರೈತರಿಗಂತೂ ಈ ಆ್ಯಪ್ ಬಂಪರ್ ಲಾಟರಿಯಂತೆ ಕೆಲಸ ಮಾಡಲಿದೆ. ಯಾವ ರಾಜ್ಯದಲ್ಲಿ ಹೆಚ್ಚು ಧಾರಣೆ ಸಿಗುತ್ತದೆಯೋ ಅಲ್ಲಿ ಹೋಗಿ ರೈತ ತನ್ನ ಫಸಲನ್ನು ಮಾರುವಂತೆ ಅವಕಾಶ ನೀಡಲಿದೆ. ಅಗ್ರಿ ಮಾರ್ಕೆಟ್ ಆ್ಯಪ್​ನಲ್ಲಿ ಪ್ರತಿದಿನ ಮಾಹಿತಿಯನ್ನು ಅಪ್‌ಲೋಡ್ ಮಾಡಲಾಗುವುದು.
 ಗೂಗಲ್ ಪ್ಲೇನಿಂದ ಅಗ್ರಿ ಮಾರ್ಕೆಟ್ ಆ್ಯಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಕೇಂದ್ರ ಸರ್ಕಾರ ಪರಿಚಯಿಸಿರುವ ಆ್ಯಪ್​ನಲ್ಲಿ ಇದು ಅತ್ಯಂತ ಉತ್ತಮ ಆ್ಯಪ್ ಆಗಿ ಹೊರಹೊಮ್ಮಿದೆ.