ಪೆಟ್ರೋಲ್ ಮತ್ತು ಡೀಸೆಲ್ ದರಗಳ ನಿರಂತರ ಏರಿಕೆ ಸಾರ್ವಜನಿಕರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿವೆ. ಮಾರ್ಚ್ ಮೊದಲ ದಿನವೇ ಅಡುಗೆ ಅನಿಲದ ಪ್ರತಿ ಸಿಲಿಂಡರ್ ದರ 25 ರೂ.ಗಳಿಗೆ ಹೆಚ್ಚಳವಾಗಿದೆ. ಇದರಿಂದಾಗಿ ಶ್ರೀಸಾಮಾನ್ಯನ ಪಾಲಿಗೆ ತೈಲ ಕಂಪನಿಗಳು ಮಾರ್ಚ್ ತಿಂಗಳ ಮೊದಲ ದಿನವೇ ಶಾಕ್ ನೀಡಿವೆ.
ಒಂದೆಡೆ ಪೆಟ್ರೋಲ್ ಮತ್ತು ಡೀಸೆಲ್ ದರ ದಿನದಿಂದ ದಿನಕ್ಕೆ ದುಬಾರಿಯಾಗಿ ವಾಹನ ಸವಾರರ ಜೀಬಿಗೆ ಕತ್ತರಿ ಬೀಳುತ್ತಿದೆ. ಇನ್ನೊಂದೆಡೆ ಅಡುಗೆ ಅನಿಲ ದರ ಸತತವಾಗಿ ದುಬಾರಿಯಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ..
ಇಂದು ಪ್ರತಿ ಸಿಲಿಂಡರ್ ಪರಿಷ್ಕರಣೆ ಮಾಡುವ ಮೂಲಕ ರಾಜಧಾನಿ ದೆಹಲಿಯಲ್ಲಿ 14.2 ಕೆ.ಜಿ. ಪ್ರತಿ ಸಿಲಿಂಡರ್ ದರ 819 ರೂಪಾಯಿಗೆ ತಲುಪಿದೆ.
ಫೆ.25ರಂದು ಸಿಲಿಂಡರ್ ದರ 26 ರೂಪಾಯಿಗೆ ಏರಿಕೆಯಾಗಿತ್ತು. ಫೆ. 4 ಮತ್ತು ಫೆ. 14 ರಂದು ಅಡುಗೆ ಅನಿಲ ದರ ಹೆಚ್ಚಳವಾಗಿತ್ತು. ಫೆಬ್ರವರಿ ತಿಂಗಳಿನಲ್ಲಿ ಮೂರು ಬಾರಿ ಏರಿಕೆಯಾಗಿತ್ತು..
ಪೆಟ್ರೋಲ್-ಡೀಸೆಲ್, ಎಲ್‌ಪಿಜಿ ದರ ಗಗನಕ್ಕೇರುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ತಲೆಕೆಡಿಸಿಕೊಂಡಿಲ್ಲ. ಇಂಧನ ದರ ಏರಿಕೆಗೆ ಪ್ರತಿಪಕ್ಷಗಳ ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆಗೆತೆಗೆದುಕೊಂಡಿವೆ.
ಎಲ್ ಪಿಜಿ ದರ ಏರಿಕೆ ಯಿಂದ ಸಾರ್ವಜನಿಕರ ಸಂಕಷ್ಟ ಮತ್ತಷ್ಟು ಉಲ್ಬಣಗೊಂಡಿದೆ. ಕಳೆದ ಎರಡು ತಿಂಗಳಲ್ಲಿ 6ನೇ ಬಾರಿಗೆ ಬೆಲೆ ಏರಿಕೆ ಮಾಡಲಾಗಿದ್ದು,2021ರ ಜನವರಿಯಲ್ಲಿ ಎಲ್ ಪಿಜಿ ಸಿಲಿಂಡರ್ ಬೆಲೆ 694 ರೂಪಾಯಿ ಮಾರ್ಚ್ 1ರಂದು ಪ್ರತಿ ಸಿಲಿಂಡರ್ ಗೆ 819 ರೂಪಾಯಿಗೆ ಏರಿಕೆಯಾಗಿದೆ. ಅಂದರೆ, ಈಗ ಪ್ರತಿ ಸಿಲಿಂಡರ್ ಗೆ 125 ರೂಪಾಯಿ ಏರಿಕೆಯಾಗಿದೆ.
ಒಂದೆಡೆ ಕರೋನಾ ಸಾಂಕ್ರಾಮಿಕ ರೋಗವು ಜನರ ಆದಾಯದಲ್ಲಿ ಇಳಿಕೆಯನ್ನು ತೋರಿಸುತ್ತಿದೆ, ಮತ್ತೊಂದೆಡೆ ಹಣದುಬ್ಬರವು ಜನರ ಸವಾಲುಗಳನ್ನು ಮತ್ತಷ್ಟು ಹೆಚ್ಚಿಸಿದೆ.