News

ಭದ್ರಾನಾಲೆಯಿಂದ ಅನಧಿಕೃತವಾಗಿ ನೀರೆತ್ತುವರ ವಿರುದ್ಧ ಕ್ರಮ: ಅಧಿಕಾರಿಗಳ ಎಚ್ಚರಿಕೆ

19 June, 2021 9:00 PM IST By:
ಪ್ರಾತಿನಿಧಿಕ ಚಿತ್ರ

ಭದ್ರಾ ಬಲದಂಡೆ ನಾಲೆ ಹಾಗೂ ಅದಕ್ಕೆ ಸಂಬAಧಿಸಿದ ಇತರೆ ನಾಲೆಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಪಂಪ್‌ಸೆಟ್, ಡಿಸೇಲ್ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡು ನೀರೆತ್ತುವವರ ವಿರುದ್ಧ ನಿಗಮದ ವತಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ನೀರಾವರಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ಆರ್. ಪ್ರಾಜೆಕ್ಟ್ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಎಚ್ಚರಿಕೆ ನೀಡಿದ್ದಾರೆ.

ಭsÀದ್ರಾ ಯೋಜನೆಯ ಭದ್ರಾ ಬಲದಂಡೆ ನಾಲೆ, ಎಡದಂಡೆ ನಾಲೆ, ಆನವೇರಿ ಶಾಖಾ ನಾಲೆ, ಮಲೆಬೆನ್ನೂರು ಶಾಖಾ ನಾಲೆ, ದಾವಣಗೆರೆ ಶಾಖಾ ನಾಲೆ ಮತ್ತು ಹರಿಹರ ಶಾಖಾ ನಾಲೆಗಳಿಗೆ ಜಲಾಶಯದಿಂದ ನೀರನ್ನು ಹರಿಸಲಾಗುತಿದ್ದು, ಭದ್ರಾ ಜಲಾಶಯದ ಅಚ್ಚುಕಟ್ಟುದಾರರಲ್ಲದ ರೈತರು ನಾಲೆಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಪಂಪಸೆಟ್, ಡಿಸೇಲ್ ಪಂಪಸೆಟ್, ಹಾಗೂ ಇತರೆ ನೀರೆತ್ತುವ ಉಪಕರಣಗಳನ್ನು ಅಳವಡಿಸಿಕೊಂಡು ನೀರೆತ್ತುತ್ತಿರುವುದರಿಂದ ಅಚ್ಚುಕಟ್ಟು ಕೊನೆಯ ಭಾಗದ ರೈತರುಗಳಿಗೆ ಸಮರ್ಪಕವಾಗಿ ನೀರನ್ನು ಹರಿಸಲು ಸಾಧ್ಯವಾಗಿರುವುದಿಲ್ಲ ಎಂದು ಅಚ್ಚುಕಟ್ಟು ರೈತರು ದೂರು ನೀಡಿದ್ದಾರೆ. ಅದರಂತೆ ಉಚ್ಛ ನ್ಯಾಯಲಯದ ರಿಟ್ ಅರ್ಜಿ ಸಂಖ್ಯೆ: 15744/2019 ಪಿಐಎಲ್ ಪ್ರಕಾರ ಪ್ರಕರಣ ದಾಖಲಾಗಿರುತ್ತದೆ. ಉಚ್ಛ ನ್ಯಾಯಾಲಯವು 2019ರ ನವೆಂಬರ್ 4ರಂದು, ಭದ್ರಾ ಕಾಲುವೆಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿರುವ ವಿದ್ಯುತ್ ಪಂಪ್‌ಸೆಟ್, ಡಿಸೇಲ್ ಪಂಪ್‌ಸೆಟ್ ಹಾಗೂ ಇತರೆ ನೀರೆತ್ತುವ ಸಲಕರಣೆ, ಯಂತ್ರಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

ನ್ಯಾಯಲಯದ ಆದೇಶದ ಹೊರತಾಗಿಯೂ ಭದ್ರಾ ನಾಲೆಗಳಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಪಂಪ್‌ಸೆಟ್‌ಗಳನ್ನು ತೆರವುಗೊಳಿಸದೇ ಇರುವುದರಿಂದ ನ್ಯಾಯಾಲಯವು 2021ರ ಮೇ 5ರಂದು ನ್ಯಾಯಾಂಗ ನಿಂದನೆ ಆರೋಪದ ಆದೇಶವನ್ನು ಹೊರಡಿಸಿರುತ್ತದೆ. ಹೀಗಾಗಿ 2021ರ ಮೇ 05ರವರೆಗೆ ಇದ್ದಂತಹ ಅನಧಿಕೃತ ಪಂಪ್‌ಸೆಟ್‌ಗಳನ್ನು ಭದ್ರಾ ಯೋಜನಾ ವೃತ್ತದ ಅಧಿಕಾರಿಗಳು ತೆರವುಗೊಳಿಸಿ, ಆ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ  ಭದ್ರಾ ಬಲದಂಡೆ ನಾಲೆ ಹಾಗೂ ಅದಕ್ಕೆ ಸಂಬAಧಿಸಿದ ಇತರೆ ನಾಲೆಗಳಲ್ಲಿ ಅನಧಿಕೃತವಾಗಿ ವಿದ್ಯುತ್ ಪಂಪ್‌ಸೆಟ್, ಡಿಸೇಲ್ ಪಂಪ್‌ಸೆಟ್‌ಗಳನ್ನು ಅಳವಡಿಸಿಕೊಂಡು ನೀರೆತ್ತುವವರ ವಿರುದ್ಧ ನಿಗಮದ ವತಿಯಿಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ನೀರಾವರಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಬಿ.ಆರ್. ಪ್ರಾಜೆಕ್ಟ್ನ ಭದ್ರಾ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೃಷಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಪ್ರಸ್ತುತ ಸಾಲಿನ ಕೃಷಿ ಪ್ರಶಸ್ತಿಗಳಿಗಾಗಿ ಶಿವಮೊಗ್ಗ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಶಸ್ತಿ ಪಡೆಯಲು ಆಸಕ್ತರಾಗಿರುವ ಹಾಗೂ ಸೂಕ್ತ ಅರ್ಹತೆಗಳನ್ನು ಹೊಂದಿರುವ ರೈತರು ಅರ್ಜಿ ಸಲ್ಲಿಸಬಹುದು. ಭತ್ತದ ಬೆಳೆಯಲ್ಲಿ ಎಲ್ಲಾ ಮಟ್ಟಗಳಿಗೂ ಅನ್ವಯವಾಗುವಂತೆ ಏಕ ರೂಪದ ಅರ್ಜಿಯನ್ನು ಸಂಬಂಧಪಟ್ಟ ತಾಲೂಕು ಸಹಾಯಕ ಕೃಷಿ ನಿರ್ದೇಶಕರುಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರದ ಮುಖ್ಯಸ್ಥರಿಗೆ ಆಗಸ್ಟ್ 31ರೊಳಗೆ ನಿಗದಿತ ಶುಲ್ಕ ಪಾವತಿಸಿ ಸಲ್ಲಿಸಬೇಕು. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ 25 ರೂ. ಹಾಗೂ ಸಾಮಾನ್ಯ ಅಭ್ಯರ್ಥಿಗೆ 100 ರೂ. ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸುವ ರೈತರು ಕನಿಷ್ಠ ಒಂದು ಎಕರೆ ಪ್ರದೇಶದಲ್ಲಿ ಭತ್ತ ಬೆಳೆದಿರಬೇಕು. ಹಾಗೂ ಸ್ವಯಂ ಕ್ರಿಯಾಶೀಲ ಕೃಷಿಕನಾಗಿರಬೇಕು. ಹೆಚ್ಚಿನ ಮಾಹಿತಿ ಹಾಗೂ ವಿವರಗಳನ್ನು ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರದಲ್ಲಿ ಅಥವಾ ತಾಲೂಕು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಪಡೆಯುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಕಿರಣ್ ಕುಮಾರ್ ತಿಳಿಸಿದ್ದಾರೆ.