ಹಳ್ಳಿಯಲ್ಲಿರುವವರಿಗೆ ಉತ್ತರಾಣಿ ಗಿಡ ಯಾರಿಗೆ ಗೊತ್ತಿಲ್ಲ ಹೇಳಿ. ಈ ಗಿಡದ ಮಹತ್ವ ಬಹಳಷ್ಟು ಜನರಿಗೆ ಇನ್ನೂ ಗೊತ್ತಿರಲಿಕ್ಕಿಲ್ಲ. ಹೌದು ಅದರಲ್ಲಿ ಅಗಾಧವಾದ ಶಕ್ತಿ ಅಡಗಿದೆ. ಚೇಳು ಕಡಿದರೆ ಈ ಉತ್ತರಾಣಿ ಗಿಡ ದಿವ್ಯೌಷಧಿಯಾಗಿ ಕೆಲಸ ಮಾಡುತ್ತದೆ. ಅದು ಹೇಗೆಎಂಬುದನ್ನು ಇಲ್ಲಿ ತಿಳಿಸಿಕೊಡುತ್ತೇನೆ.
ಚೇಳು ಕಡಿದಾಗ ವಿಪರೀತ ನೋವು, ಯಾತನೆ ಉಂಟಾಗುತ್ತದೆ. ಇದರ ವಿಷ ಮೇಯಲ್ಲಾ ಹರಡುತ್ತಿದ್ದಂತೆ ಉರಿಯೂ ಹೆಚ್ಚಾಗುತ್ತದೆ. ಹಳೆ ಕಾಲದಲ್ಲಿ ಚೇಳು ಕಡಿದರೆ ಯಾರೂ ಆಸ್ಪತ್ರೆಗೆ ಹೋಗುತ್ತಿರಲಿಲ್ಲ. ಮನೆಯಲ್ಲಿಯೇ ಮದ್ದು ಮಾಡಿ ಗುಣಪಡಿಸುತ್ತಿದ್ದರು. ಆಡು ಭಾಷೆಯಲ್ಲಿ ಹೇಳುವುದಾದರೆ ಚೇಳು ಕಡಿದರೆ ಏರುತ್ತದೆ, ಇನ್ನು ಕೆಲವರಿಗೆ ಚೇಳು ಕಡಿದರೆ ಏರುವುದಿಲ್ಲ.
ಚೇಳು ಕಡಿದಾಗ ಏನು ಮಾಡಬೇಕು
ಚೇಳು ಕಚ್ಚಿದ ಸ್ಥಳವನ್ನು ಚೆನ್ನಾಗಿ ನೊರೆ ಇರುವ ಸಾಬೂನಿನಿಂದ ತೊಳೆಯಬೇಕು. ಉತ್ತರಾಣಿ ಗಿಡದ ತಪ್ಪಲು ಗಳು ಅಂದರೆ ಎಲೆಗಳು ಮತ್ತು ಅರಶಿನದೊಂದಿಗೆ ಚೇಳು ಕಚ್ಚಿರುವ ಸ್ಥಳದಲ್ಲಿ ಹಚ್ಚಬೇಕು. ನಂತರ ಅದನ್ನು ಬಟ್ಟೆಯಿಂದ ಕಟ್ಟಬೇಕು. ಮತ್ತು ಇದರ ಸ್ವಲ್ಪ ಎಲೆಗಳನ್ನು ಚೇಳು ಕಚ್ಚಿದ ವ್ಯಕ್ತಿಗೆ ತಿನ್ನಲು ಕೊಡಬೇಕು. ನಂತರ ನಿಧಾನವಾಗಿ ಉರಿ ಕಡಿಮೆಯಾಗುತ್ತದೆ.
ಲೇಖನ: ಮುತ್ತಣ್ಣ ಬ್ಯಾಗೆಳ್ಳಿ