News

ಪ್ಯಾನ್‌ಗೆ ಆಧಾರ್‌ ಜೋಡಣೆ: ಪರಿಶೀಲನೆ ಮಾಡುವುದು ಹೇಗೆ ?

27 March, 2023 4:04 PM IST By: Hitesh
Aadhaar Linking to PAN

ಪ್ಯಾನ್‌ನೊಂದಿಗೆ ಆಧಾರ್‌ ಜೋಡಣೆ ಮಾಡುವುದು ಅತ್ಯಂತ ಸುಲಭ. ಈಗಾಗಲೇ ನಿಮ್ಮ ಪ್ಯಾನ್‌ ಕಾರ್ಡ್‌ನೊಂದಿಗೆ ಆಧಾರ್‌ ಜೋಡಣೆ ಆಗಿರುವ ಸಾಧ್ಯತೆಯೂ ಇದೆ.

ರಾಜ್ಯದ ವಿವಿಧೆಡೆ ಮುಂದುವರಿದ ಧಾರಾಕಾರ ಮಳೆ! 

ಹೌದು ಕೆಲವೊಮ್ಮೆ ಈಗಾಗಲೇ ಆಧಾರ್‌ ಕಾರ್ಡ್‌ನೊಂದಿಗೆ ಪ್ಯಾನ್‌ ಕಾರ್ಡ್‌ ಲಿಂಕ್‌ ಆಗಿರುವ ಸಾಧ್ಯತೆಯೂ ಇದ್ದು, ನೀವು ಅದನ್ನು ಸರಳವಾಗಿ ಪರಿಶೀಲಿಸಬಹುದಾಗಿದೆ.

ಪ್ಯಾನ್‌ನೊಂದಿಗೆ ಆಧಾರ್ ಲಿಂಕ್ ಆಗಿದೆಯೇ ಅಥವಾ ಇನ್ನೂ ಆಗಿಲ್ಲವೇ ಎನ್ನುವುದನ್ನು ನೀವು ಸರಳವಾಗಿ ಪರಿಶೀಲನೆ ಮಾಡಬಹುದಾಗಿದೆ.  

UIDAIಯ ಅಧಿಕೃತ ವೆಬ್‌ಸೈಟ್‌ https://uidai.gov.inಗೆ ಹೋಗಿ

ಆಧಾರ್ ಸೇವೆಗಳ ಪಟ್ಟಿಯಿಂದ ಆಧಾರ್ ಲಿಂಕ್ ಮಾಡುವ ಆಯ್ಕೆಯ ಮೇಲೆ ಕ್ಲಿಕ್‌ ಮಾಡಿ.

5 ದಿನದಲ್ಲಿ ಪ್ಯಾನ್‌- ಆಧಾರ್‌ ಲಿಂಕ್‌ ಮಾಡದಿದ್ದರೆ ಬೀಳಲಿದೆ 10,000 ಸಾವಿರ ದಂಡ!

ಎರಡನೇಯದಾಗಿ  12 ಅಂಕಿಗಳ ಆಧಾರ್ ಸಂಖ್ಯೆಯನ್ನು ಅಲ್ಲಿ ಹಾಕಿ ಮತ್ತು ಗೆಟ್ ಸ್ಟೇಟಸ್ ಬಟನ್ನ ಮೇಲೆ ಕ್ಲಿಕ್ ಮಾಡಿ.

ನಂತರ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಕ್ಯಾಪ್ಚಾ ಕೋಡ್ (ಪರಿಶೀಲನಾ ಅಂಕಿ- ಅಂಶ)ವನ್ನು ನಮೂದಿಸಬೇಕು.

ನಿಮ್ಮ ಪ್ಯಾನ್-ಆಧಾರ್ ಲಿಂಕ್ ಮಾಡುವ  ಅಂಶವನ್ನು ಪರಿಶೀಲಿಸಲು, ಗೇಟ್ ಲಿಂಕ್ ಎಂಬ ಆಯ್ಕೆಯ ಮೇಲೆ ಕ್ಲಿಕ್‌ ಮಾಡಬೇಕು.

ನಿಮ್ಮ ಆಧಾರ್ ಕಾರ್ಡ್‌ ಪ್ಯಾನ್ ಸಂಖ್ಯೆಯೊಂದಿಗೆ ಲಿಂಕ್ ಆಗಿದೆ ಅಥವಾ ಇಲ್ಲ ಎನ್ನುವುದನ್ನು ಕಂಪ್ಯೂಟರ್ ಅಥವಾ  ಲ್ಯಾಪ್‌ಟಾಪ್ ಪರದೆಯ ಮೇಲೆ ಕಾಣಿಸಲಿದೆ.

ಇದನ್ನು ನೀವು ಸುಲಭವಾಗಿ ನಿಮ್ಮ ಮೊಬೈಲ್‌ನಲ್ಲಿಯೂ ಪರಿಶೀಲಿಸಬಹುದು.  

ಪ್ಯಾನ್‌ಗೆ ಆಧಾರ್‌ ಲಿಂಕ್‌ ಮಾಡುವುದು ಕೆಲವೇ ಸೆಕೆಂಡ್‌ ಕೆಲಸ ಇಲ್ಲಿದೆ ವಿವರ! 

ಯಾವ ಕಾರಣಕ್ಕೆ ಈ ಕ್ರಮ

ಇತ್ತೀಚಿನ ವರ್ಷಗಳಲ್ಲಿ ನಕಲಿ ಪ್ಯಾನ್‌ ಕಾರ್ಡ್‌ಗಳನ್ನು ಬಳಸಿ ಆರ್ಥಿಕ ನಷ್ಟ ಉಂಟು ಮಾಡುತ್ತಿರುವುದಕ್ಕೆ ಸಂಬಂಧಿಸಿದ ಪ್ರಕರಣಗಳು ಹೆಚ್ಚಾಗುತ್ತಿರುವ

ಹಿನ್ನೆಲೆಯಲ್ಲಿ ಈ ಕ್ರಮವನ್ನು ಅನುಸರಿಸಲಾಗುತ್ತಿದೆ ಎನ್ನಲಾಗಿದೆ. ಹೀಗಾಗಿ, ಹಣಕಾಸಿನ ವಂಚನೆ ಪ್ರಕರಣಗಳು ಹೆಚ್ಚಾಗಿವೆ.

ಒಬ್ಬನೇ ವ್ಯಕ್ತಿ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ ಹೊಂದಿರುವುದರಿಂದ ತೆರಿಗೆ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇರುವುದು ವರದಿ ಆಗಿದೆ.

ಇದರಿಂದ ಕೇಂದ್ರ ಸರ್ಕಾರ ಅವ್ಯವಹಾರ ತಡೆಯಲು ಈ ಕ್ರಮ ಅನುಸರಿಸಲಾಗಿದೆ ಎಂದು ಹೇಳಲಾಗಿದೆ.    

ಇನ್ನು ಮಾರ್ಚ್ 31ರ ಒಳಗಾಗಿ ನೀವು ಆಧಾರ್‌ ಮತ್ತು ಪ್ಯಾನ್‌ ಕಾರ್ಡ್‌ ಲಿಂಕ್‌ ಮಾಡದೆ ಇದ್ದರೆ, ಅಸ್ತಿತ್ವದಲ್ಲಿರುವ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.

ಮುಂದೆ ಅದನ್ನು ಬಳಸಲು ಮುಂದಾದರೂ ದಂಡ ವಿಧಿಸಲಾಗುತ್ತದೆ.

ಈ ಹಂತದಲ್ಲಿ 1,000 ಸಾವಿರ ರೂಪಾಯಿಯಿಂದ 10,000 ಸಾವಿರ ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ.

ಇದೇ ತಪ್ಪಿನ ಪುನರಾವರ್ತನೆ ಆದರೂ ಕಠಿಣ ಕ್ರಮ ಮತ್ತು ಜೈಲು ಶಿಕ್ಷೆ ಎದುರಾಗುವ ಸಾಧ್ಯತೆಯೂ ಇದೆ.   

Gold Silver price Today: ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆ, ಚಿನ್ನ ಖರೀದಿದಾರರಿಗೆ ಸಿಹಿಸುದ್ದಿ!

ಆಧಾರ್‌ ಕಾರ್ಡ್‌ ಹಾಗೂ ಪ್ಯಾನ್‌ ಕಾರ್ಡ್‌ಅನ್ನು ಮಾರ್ಚ್‌ 31ರ ಒಳಗಾಗಿ ಲಿಂಕ್‌ ಮಾಡದಿದ್ದರೆ, ಬರೋಬ್ಬರಿ 10,000 ಸಾವಿರ ರೂ. ದಂಡ ಪಾವತಿ ಮಾಡಬೇಕಾಗುತ್ತದೆ.

ಅಲ್ಲದೇ ಲಿಂಕ್‌ ಮಾಡದೆ ಇದ್ದರೆ ಏಪ್ರಿಲ್‌ 1ರಿಂದ ಪ್ಯಾನ್‌ ಕಾರ್ಡ್‌ನ ನಂಬರ್‌ ಸಹ ನಿಷ್ಕ್ರೀಯವಾಗಲಿದೆ.

ಹೊಸ ಪ್ಯಾನ್‌ ಕಾರ್ಡ್‌ ಮಾಡಬೇಕಾದರೂ 10,000 ಸಾವಿರ ರೂಪಾಯಿ ಪಾವತಿ ಮಾಡಿಯೇ ಹೊಸ ಅರ್ಜಿ ಸಲ್ಲಿಸಬೇಕಾಗುತ್ತದೆ.

ಪ್ಯಾನ್-ಆಧಾರ್ ಲಿಂಕ್ ಮಾಡಲು ಕೊನೆಯ ದಿನಾಂಕ ಸಮೀಪಿಸುತ್ತಿದೆ.

ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು 1000 ರೂಪಾಯಿ ದಂಡದೊಂದಿಗೆ 31 ಮಾರ್ಚ್ 2023 ರ ಗಡುವನ್ನು ನೀಡಲಾಗಿದೆ.

ಒಂದೊಮ್ಮೆ ನೀವು ಮಾರ್ಚ್ 31, 2023ರ ಒಳಗಾಗಿ ಪ್ಯಾನ್ ಕಾರ್ಡ್-ಆಧಾರ್ ಲಿಂಕ್ ಮಾಡದಿದ್ದರೆ, ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ.  

ಕೇಂದ್ರದಿಂದ ಎಲ್‌ಪಿಜಿ ಗ್ಯಾಸ್‌ ಹೊಂದಿರುವವರಿಗೆ ಸಿಹಿಸುದ್ದಿ: ಬರೋಬ್ಬರಿ 200 ಸಬ್ಸಿಡಿ ನೀಡಲು ಅನುಮೋದನೆ