News

Aadhar Card -Sim Card Link ಸಿಮ್‌ ಕಾರ್ಡ್‌ಗೂ ಆಧಾರ್‌ ಕಾರ್ಡ್‌ ಜೋಡಣೆ: ಕಾರಣ ಏನು ಗೊತ್ತೆ ?

21 February, 2023 11:15 AM IST By: Hitesh
Aadhaar Card to SIM Card Linking : Do you know the reason?

ಆಧಾರ್‌ ಕಾರ್ಡ್‌ಅನ್ನು ಈಗಾಗಲೇ ಬ್ಯಾಂಕ್‌, ಪ್ಯಾನ್‌ ಕಾರ್ಡ್‌ ಹಾಗೂ ಮತದಾರರ ಪಟ್ಟಿ ಸೇರಿದಂತೆ ಎಲ್ಲ ಸರ್ಕಾರಿ ದಾಖಲೆಗಳಲ್ಲೂ ಬಳಸಲಾಗಿದೆ.

ಇದೀಗ ಆಧಾರ್‌ ಕಾರ್ಡ್‌ಅನ್ನು ಸಿಮ್‌ ಕಾರ್ಡ್‌ಗೂ ಜೋಡಣೆ ಮಾಡುವ ಪ್ರಸ್ತಾವನೆಯೊಂದು ಪ್ರಾರಂಭವಾಗಿದೆ.

ಹೌದು ಆಧಾರ್‌ ಕಾರ್ಡ್‌ಅನ್ನು ಪರಿಚಯಿಸಿದ ನಂತರದಲ್ಲಿ ಸರ್ಕಾರದ ಹಲವು ಯೋಜನೆಗಳಲ್ಲಿ ಆಧಾರ್‌ ಕಾರ್ಡ್‌ಅನ್ನು ಕಡ್ಡಾಯ ಮಾಡಲಾಗಿದೆ.

ಆಧಾರ್‌ ಕಾರ್ಡ್‌ ಜೋಡಣೆಯಿಂದಾಗಿ ಹಲವು ಸಮಸ್ಯೆಗಳು ತಾರ್ಕಿಕವಾಗಿಯೂ ಅಂತ್ಯಕಂಡಿದೆ.

ಅಲ್ಲದೇ ನೈಜ ಫಲಾನುಭವಿಗಳೂ ಅದು ತಲುಪುತ್ತಿದೆ. 

Pension ಪಿಂಚಣಿದಾರರಿಗೆ ಈ ರಾಜ್ಯದ ಸರ್ಕಾರದಿಂದ ಅಚ್ಚರಿ!

ಇದೀಗ ಆಧಾರ್‌ ಕಾರ್ಡ್‌ಅನ್ನು ಸಿಮ್‌ ಕಾರ್ಡ್‌ಗೆ ಜೋಡಣೆ ಮಾಡುವ ಮೂಲಕ ಅಪರಾಧ ಪ್ರಕರಣಗಳನ್ನು ತಪ್ಪಿಸಲು ಸರ್ಕಾರ ಮುಂದಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಕೆ ಮಾಡಿದೆ.

ರಾಜ್ಯದಲ್ಲಿ ಸೈಬರ್‌ ಅಪರಾಧಗಳು ಹೆಚ್ಚಾಗುತ್ತಿದ್ದು, ಅದನ್ನು ತಡೆಯಲು ಸರ್ಕಾರ ಮುಂದಾಗಿದೆ.  

ಸಿಮ್‌ ಕಾರ್ಡ್‌ಗಳ ಜತೆ ಆಧಾರ್‌ ಕಾರ್ಡ್‌ ಜೋಡಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

500ರ ನೋಟು ಎಸೆದು ಅಳಿಯನನ್ನು ಸ್ವಾಗತಿಸಿದ ಮಾವ!

ಸೋಮವಾರ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಬಿಜೆಪಿಯ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಸಚಿವರು ವಿಸ್ತೃತವಾದ ವಿವರಣೆಯನ್ನು ನೀಡಿದ್ದಾರೆ.  

ಇತ್ತೀಚಿನ ದಿನಗಳಲ್ಲಿ ಬುದ್ಧಿವಂತರೇ ತಂತ್ರಜ್ಞಾನ ದುರುಪಯೋಗಪಡಿ ಸಿಕೊಂಡು ದರೋಡೆ ಮಾಡುತ್ತಿದ್ದಾರೆ.

ಸೈಬರ್‌ ವಂಚನೆಗೆ ಒಳಗಾದವರು 112 ಸಂಖ್ಯೆಗೆ ಘಟನೆ ನಡೆದ ಎರಡು ಗಂಟೆ ಒಳಗೆ ದೂರವಾಣಿ ಕರೆ ಮಾಡಿದರೆ ಬ್ಯಾಂಕ್‌

ಖಾತೆಯನ್ನು ಸ್ಥಗಿತಗೊಳಿಸಿ ಹಣ ವರ್ಗಾವಣೆಯಾಗದಂತೆ ಯತ್ನಿಸಲಾಗುವುದು ಎಂದಿದ್ದಾರೆ.

ಈಗ ಇರುವ ನಿಯಮದ ಅನುಸಾರ ಒಬ್ಬರಿಗೆ ಗರಿಷ್ಠ ಒಂಬತ್ತು ಸಿಮ್‌ ಕಾರ್ಡ್‌ಗಳನ್ನು ನೀಡಬಹುದಾಗಿದೆ.

ಹಣದುಬ್ಬರ ನಿಯಂತ್ರಣಕ್ಕೆ ಮಾಸ್ಟರ್‌ ಪ್ಲಾನ್‌ ಮಾಡ್ತಿದೆ ಕೇಂದ್ರ; ಪೆಟ್ರೋಲ್‌, ಡಿಸೇಲ್‌ ದರ ಇಳಿಕೆ ?!  

Aadhaar Card to SIM Card Linking : Do you know the reason?

ಕೆಲವರು ಈ ಸಿಮ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ವಿದೇಶ ಗಳಿಂದಲೂ ಕರೆ ಮಾಡಿ ವಂಚಿಸುತ್ತಿದ್ದಾರೆ.

ಇಂತಹ ವಂಚನೆಗಳ ಬಗ್ಗೆ ಎಚ್ಚರವಹಿಸುವಂತೆ ಸಾರ್ವಜನಿಕರಲ್ಲಿ ಪೊಲೀಸ್‌ ಇಲಾಖೆ ಜಾಗೃತಿ ಮೂಡಿ ಸುತ್ತಿದೆ.

ಗ್ರಾಹಕರು ಸಿಮ್‌ ಕಾರ್ಡ್‌ ಅನ್ನು ಇತರರಿಗೆ ಯಾವುದೇ ಕಾರಣಕ್ಕೂ ನೀಡಬಾರದು ಎಂದರು.

ಇನ್ನು ರಾಜ್ಯದಲ್ಲಿ ಸೈಬರ್‌ ವಿಭಾಗವನ್ನು ಬಲಪಡಿಸಲಾಗಿದ್ದು, ಈಗಾಗಲೇ 45 ಠಾಣೆಗಳನ್ನು ಸ್ಥಾಪಿಸಲಾಗಿದೆ.

ಪ್ರತಿ ಜಿಲ್ಲೆಯಲ್ಲೂ ಸೈಬರ್‌ ಠಾಣೆಗಳಿವೆ. ಬೇರೆ ರಾಜ್ಯದವರು ಸಹ ಇಲ್ಲಿನ ವ್ಯವಸ್ಥೆ ಬಗ್ಗೆ ಅಧ್ಯಯನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.   

Gold Rate Today ಚಿನ್ನದ ಬೆಲೆಯಲ್ಲಿ ಮುಂದುವರಿದ ಏರುಪೇರು!   

Aadhaar Card to SIM Card Linking : Do you know the reason?

ರಾಜ್ಯದಲ್ಲಿ ಹೆಚ್ಚುತ್ತಲೇ ಇದೆ ಸೈಬರ್‌ ಪ್ರಕರಣ

ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಸೈಬರ್‌ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಕೋವಿಡ್‌ ನಂತರದಲ್ಲಿ ಇದರ ಪ್ರಮಾಣ ಮತ್ತಷ್ಟು ಹೆಚ್ಚಳವಾಗಿದೆ.

2020ರಲ್ಲಿ 10 ಸಾವಿರದ ಆಸುಪಾಸಿನಲ್ಲಿದ್ದ ಸೈಬರ್‌ ಪ್ರಕರಣಗಳ ಸಂಖ್ಯೆ 2022ರ ವೇಳೆಗೆ 12,551ಕ್ಕೆ ತಲುಪಿದೆ.

ಇನ್ನು ಈ ವರ್ಷದ ಒಂದೇ ತಿಂಗಳ ಅವಧಿಯಲ್ಲಿ ಬರೋಬ್ಬರಿ 1,325 ಸೈಬರ್‌ ಕ್ರೈಮ್‌ ಅಪರಾಧಗಳು ವರದಿ ಆಗಿದೆ ಎಂದು ಸೈಬರ್‌ ಪೊಲೀಸರು ತಿಳಿಸಿದ್ದಾರೆ.

ರಾಜ್ಯದಲ್ಲಿ ವರದಿಯಾಗಿರುವ ಸೈಬರ್‌ ಪ್ರಕರಣಗಳ ವಿವರ

ವರ್ಷ ಸೈಬರ್‌ ಅಪರಾಧಗಳು
2020 10,738
2021 8,132
2022 12,551
2023 1,235 (ಜನವರಿಯಲ್ಲಿ)

weather update ರಾಜ್ಯದಲ್ಲಿ ಇಂದು ಹವಾಮಾನ ಹೇಗಿದ, ಇಲ್ಲಿದೆ ಅಪ್ಡೇಟ್‌