ಆಧಾರ್ ಕಾರ್ಡ್ ಈಗ ಎಲ್ಲರ ಬಳಿಯೂ ಇರಬೇಕಾದ ಅತ್ಯಂತ ಅವಶ್ಯ ದಾಖಲೆ.
ಪಂಜಾಬ್‌ನಲ್ಲಿ 4.1 ತೀವ್ರತೆಯ ಭೂಕಂಪನ!
ಹಲವು ನಿರ್ದಿಷ್ಟ ಸೌಲಭ್ಯಗಳನ್ನು ಪಡೆಯಲು ಸರ್ಕಾರ ಈಗಾಗಲೇ ಆಧಾರ್ ಕಾರ್ಡ್ ಹೊಂದುವುದು ಕಡ್ಡಾಯ ಎಂದು ಘೋಷಣೆ ಮಾಡಲಾಗಿದೆ.
Aadhaar Card Update: ಆಧಾರ್ ಕಾರ್ಡ್ ನವೀಕರಣದ ಕುರಿತು ಕೇಂದ್ರ ಸರ್ಕಾರದ ಮಹತ್ವದ ಮಾಹಿತಿ! ನೀವಿದನ್ನು ತಿಳಿದಿರಲೆಬೇಕು
ಇಲ್ಲೊಂದು ರಾಜ್ಯ ಆಧಾರ್ ಕಾರ್ಡ್ ಅನ್ನು ಮತ್ತಷ್ಟು ಸುಲಭವಾಗಿ ನೀಡುವುದಾಗಿ, ಅದೂ ಸಹ ಮನೆ ಬಾಗಿಲಿಗೆ ತಲುಪಿಸುವುದಾಗಿ ಹೇಳಿದೆ.
ಚತ್ತೀಸಗಢ್ ಸರ್ಕಾರವು ಮಕ್ಕಳಿಗೆ ಆಧಾರ್ ಕಾರ್ಡ್ ಸೇವೆಯನ್ನು ಮನೆ ಬಾಗಿಲಿಗೆ ತಲುಪಿಸುವುದಾಗಿ ತಿಳಿಸಿದ್ದಾರೆ.!
ಚತ್ತೀಸಗಢ್ ಸರ್ಕಾರವು “ಮುಖ್ಯಮಂತ್ರಿ ಮಿತನ್”ಯೋಜನೆಯಡಿಯಲ್ಲಿ ಚತ್ತೀಸಗಢ್‌ನ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಈ ವಿನೂತನ ಯೋಜನೆಯನ್ನು ಪರಿಚಯಿಸಿದ್ದಾರೆ.
ಪಿಎಂ ಕಿಸಾನ್ 12ನೇ ಕಂತಿಗೆ ಕೆಲವೇ ದಿನ ಬಾಕಿ..ಯೋಜನೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ?
ಈ ಯೋಜನೆಯ ಮೂಲಕ 5 ವರ್ಷದವರೆಗಿನ ಮಕ್ಕಳು ಮನೆಯಲ್ಲಿಯೇ ಆಧಾರ್ ಸೇವೆಯನ್ನು ಪಡೆಯಲು ಅನುಕೂಲವಾಗಲಿದೆ.
ಆಧಾರ್ ಕಾರ್ಡ್‌ಗಾಗಿ ಮನೆಯಲ್ಲಿಯೇ ರಿಜಿಸ್ಟ್ರೇಷನ್ ಪ್ರಕ್ರಿಯೆ ನಡೆಸಲಾಗುತ್ತದೆ.
ಇದೀಗ ಚತ್ತೀಸಗಢದ ಪ್ರಮುಖ 14 ಮುನ್ಸಿಪಾಲ್ ಕಾರ್ಪೋರೇಷನ್‌ಗಳಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ.
ಮುಂದಿನ ದಿನಗಳಲ್ಲಿ ಈ ಯೋಜನೆಯನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ.
“ಟೊಮೆಟೊ”ಗೆ ಅಂಗಮಾರಿ ರೋಗ, ತಡೆಯುವುದು ಹೇಗೆ ?
ಮನೆ ಬಾಗಿಲಿಗೆ ಆಧಾರ್ ಸೇವೆ ಸುಲಭ ವಿಧಾನ ಹೇಗೆ?
ಸುಲಭ ವಿಧಾನದಲ್ಲಿ ಈ ರಾಜ್ಯದಲ್ಲಿ ಆಧಾರ್ ಕಾರ್ಡ್ ಸೇವೆ ಲಭ್ಯವಾಗಲಿದೆ.
- ಅಪಾಯಿಂಟ್‌ಮೆಂಟ್‌ಗಾಗಿ 14545 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬೇಕು
- ನಿಮ್ಮ ಮನೆಗೆ ಮಿತನ್ ಯೋಜನೆಯ ಕಾರ್ಯಕರ್ತರು ಭೇಟಿ
- 5 ವರ್ಷಕ್ಕಿಂತ ಕೆಳಗಿನ ಮಗುವಿಗೆ ಮನೆ ಬಾಗಿಲಿಗೆ ಬಂದು ಆಧಾರ್ ರಿಜಿಸ್ಟ್ರೇಷನ್ ಮಾಡುವ ಸಂದರ್ಭದಲ್ಲಿ ಪೋಷಕರ ಮಾಹಿತಿ ಅಗತ್ಯ
- ಆಧಾರ್ ಕೇಂದ್ರದಲ್ಲಿಯಾದರೂ ಪೋಷಕರ ಮಾಹಿತಿ ಅವಶ್ಯ
- ಪೋಷಕರ ಬಯೋಮೆಟ್ರಿಕ್ ಡೇಟಾ ಹಾಗೂ ಆಧಾರ್ ಸಂಖ್ಯೆಯನ್ನು ಮಕ್ಕಳ ಆಧಾರ್‌ಗೆ ನೀಡಲಾಗುತ್ತದೆ.
- ರೇಷನ್ ಕಾರ್ಡ್, ಸಿಜಿಎಸ್‌ಎಸ್/ರಾಜ್ಯ ಸರ್ಕಾರ ಕಾರ್ಡ್/ಇಸಿಎಚ್‌ಎಸ್/ ಇಎಸ್‌ಐಸಿ/ ಆರೋಗ್ಯ ಕಾರ್ಡ್, ಪೋಷಕರು ಯೋಧರಾದರೆ ಇದಕ್ಕೆ ಸಂಬಂಧಿಸಿದ ಕಾರ್ಡ್, ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ ಕಡ್ಡಾಯ
- ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ.
- ಎಲ್ಲ ಪ್ರಕ್ರಿಯೆ ನಡೆದ ಬಳಿಕ ಕೆಲವೇ ದಿನಗಳಲ್ಲಿ ಆಧಾರ್ ಕಾರ್ಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ಬರಲಿದೆ.