News

150 ರೈತರ ಕೋಟ್ಯಾಂತರ ರೂ. ಕೃಷಿ ಸಾಲ ತೀರಿಸಿದ ಯುವ ಉದ್ಯಮಿ!

29 November, 2023 10:52 AM IST By: Hitesh
ಕೋಟ್ಯಾಂತರ ರೂಪಾಯಿ ಸಾಲ ಮನ್ನಾ ಮಾಡಿದ ಉದ್ಯಮಿ

ಇಲ್ಲೊಬ್ಬ ಉದ್ಯಮಿ ಬರೋಬ್ಬರಿ 150 ಜನ ರೈತರ ಸಾಲವನ್ನು ಮನ್ನಾ ಮಾಡಿದ್ದಾರೆ. ಏಕೆ, ಯಾರು ಎನ್ನುವ ವಿವರ ಇಲ್ಲಿದೆ.

ಸರ್ಕಾರಗಳು ರೈತರ ಸಾಲವನ್ನು ಮನ್ನಾ ಮಾಡುವುದು ಅಥವಾ ಸಾಲ ವಸೂಲಿ ಮಾಡದಂತೆ ಎಚ್ಚರಿಕೆಯನ್ನು ನೀಡುವುದು ಸಾಮಾನ್ಯ.

ಆದರೆ, ಇಲ್ಲೊಬ್ಬ ಯುವ ಉದ್ಯಮಿ ಇಡೀ ದೇಶವೇ ಅವರನ್ನು ಹಿಂದಿರುಗಿ ನೋಡುವಂತಹ ಹೊಸದೊಂದು ಸಾಹವನ್ನು  ಮಾಡಿದ್ದಾರೆ.   

ವಿಎಸ್ ಟ್ರಸ್ಟ್ ಇತ್ತೀಚೆಗೆ ಭಾರತದ ವಿವಿಧ ಭಾಗಗಳಿಂದ 150 ರೈತರ 5 ಕೋಟಿ ರೂಪಾಯಿ ಮೌಲ್ಯದ ಕೃಷಿ ಸಾಲವನ್ನು ವಿತರಿಸುವ

ಮೂಲಕ 150 ರೈತರು ಹಾಗೂ ಅವರ ಕುಟುಂಬದವರನ್ನು ಸಂಕಷ್ಟದಿಂದ ರಕ್ಷಿಸಿದೆ. 

ಕೃಷಿ ಯಾವಾಗಲೂ ಭಾರತದ ಆರ್ಥಿಕತೆಯ ಬೆನ್ನೆಲುಬು ಎಂದು ಹೇಳುತ್ತಲ್ಲೇ ಇರುತ್ತೇವೆ.

ಆದರೆ, ರೈತರಿಗೆ ಬೇಕಾಗುವ ಅಥವಾ ಅವಶ್ಯವಿರುವ ನೆರವು ಅವರಿಗೆ ಸಿಗುವುದು ತೀರ ವಿರಳ.

ಆದಾಗ್ಯೂ, ಅನಿರೀಕ್ಷಿತ ಹವಾಮಾನ ಬದಲಾವಣೆ, ನೈಸರ್ಗಿಕ ವಿಕೋಪಗಳು,  ಇಳುವರಿ ಕುಂಠಿತ ಸೇರಿದಂತೆ ಇನ್ನೂ

ಹಲವು ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಇದು ರೈತರನ್ನು ಬಾಧಿಸುತ್ತಿದೆ.

ರೈತರು ಸಾಲವನ್ನು ಮುಖ್ಯವಾಗಿ ಬೀಜಗಳ ಖರೀದಿ, ರಸಗೊಬ್ಬರಗಳು, ಯಂತ್ರೋಪಕರಣಗಳ ಖರೀದಿಗಾಗಿ ಅಥವಾ ವೈಯಕ್ತಿಕ ವೆಚ್ಚಗಳಿಗಾಗಿ ತೆಗೆದುಕೊಳ್ಳುತ್ತಿದ್ದಾರೆ.

ಆದರೆ, ನಾನಾ ಅಪಾಯಗಳಿಂದಾಗಿ ನಿಗದಿತ ಅವಧಿಯೊಳಗೆ ಸಾಲ ಮರುಪಾವತಿಸಲು ಸಾಧ್ಯವಾಗದೆ ಸಾಲದ ಹೊರೆಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.

ಭಾರತದಲ್ಲಿ ಅದರಲ್ಲೂ ಮಹಾರಾಷ್ಟ್ರ ರಾಜ್ಯದಲ್ಲಿ ಕಳೆದ ಕೆಲವು ವರ್ಷಗಳಿಂದ ಸಾಲದ ಹೊರೆಯಿಂದ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ.

ಕರ್ನಾಟಕದಲ್ಲಿಯೂ ರೈತ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಈ ಸಂದರ್ಭದಲ್ಲಿ ಉದ್ಯಮಿ ವಿಕಾಸ್‌ ಸೊರೌತ್ ಅವರು ತಮ್ಮ ವಿಎಸ್ ಫೌಂಡೇಶನ್ ಅನ್ನು ಭಾರತದಲ್ಲಿ ರೈತರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ

ಒಂದಾದ ಕೃಷಿ ಸಾಲವನ್ನು ನಿಭಾಯಿಸಲು ಪ್ರಾರಂಭಿಸಿದ್ದಾರೆ.

ಇದಕ್ಕಾಗಿ ಮೊದಲ ಹಂತದಲ್ಲಿ ಬಡತನದಿಂದ ನಲುಗುತ್ತಿರುವ ಹಾಗೂ ಭಾರೀ ಸಾಲದ ಹೊರೆಯಲ್ಲಿ ಸಿಲುಕಿರುವ 150 ರೈತರ 5 ಕೋಟಿ ರೂಪಾಯಿ ಕೃಷಿ ಸಾಲವನ್ನು ಪಾವತಿಸಿದ್ದಾರೆ.

ಇದರಿಂದ ರೈತರು ಸಾಲದ ಹೊರೆಯಿಂದ ಚೇತರಿಸಿಕೊಂಡಿದ್ದು, ಇದೀಗ ಮತ್ತೆ ಉತ್ಸಾಹದಿಂದ ಕೃಷಿ ಕಾರ್ಯಕ್ಕೆ ಮುಂದಾಗುವಂತೆ ಪ್ರೇರೇಪಿಸಿದ್ದಾರೆ.

50 ರೈತರಿಗೆ ಕೃಷಿ ಸಾಲವನ್ನು ತೆರವುಗೊಳಿಸುವಂತಹ ಕಲ್ಯಾಣ ಯೋಜನೆಗಳಲ್ಲಿ, ವಿಎಸ್ ಫೌಂಡೇಶನ್ ಗ್ರಾಮೀಣ

ಸಮುದಾಯಗಳನ್ನು ಉನ್ನತೀಕರಿಸುವ ಮತ್ತು ಅಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ತರುವ ಉದ್ದೇಶದಿಂದ ಹಲವಾರು ಉಪಕ್ರಮಗಳನ್ನು ಕೈಗೊಂಡಿದೆ.  

ಅವುಗಳಲ್ಲಿ ಒಂದು ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರಿಗೆ ಕೌಶಲ್ಯ ತರಬೇತಿಯನ್ನೂ ಸಹ ನೀಡಲಾಗುತ್ತಿದೆ.

ವಿಕಾಸ್‌ ಸೊರೌಡ್ ಮತ್ತು ಅವರ ತಂಡವು ಸ್ಥಳೀಯ ಸಂಸ್ಥೆಗಳೊಂದಿಗೆ ಕೃಷಿ, ಪಶುಸಂಗೋಪನೆ ಮತ್ತು ಕರಕುಶಲ ಮುಂತಾದ

ವಿವಿಧ ಕ್ಷೇತ್ರಗಳಲ್ಲಿ ಯುವಕರಿಗೆ ತರಬೇತಿ ಕೋರ್ಸ್‌ಗಳನ್ನು ನೀಡಲು ಕೆಲಸ ಮಾಡುತ್ತದೆ.  

ಅಲ್ಲದೆ, ಪರಿಸರ ಸಂರಕ್ಷಣೆಯ ಮಹತ್ವವನ್ನು ಅರಿತು, ವಿಕಾಸ್‌ ಸೊರೌತ್ ಅವರ ಪ್ರತಿಷ್ಠಾನವು ಮರ ನೆಡುವ ಉಪಕ್ರಮಗಳನ್ನು ಸಕ್ರಿಯವಾಗಿ ಉತ್ತೇಜಿಸುತ್ತದೆ.

ಜಾಗೃತಿ ಅಭಿಯಾನಗಳು ಮತ್ತು ಪ್ರೋತ್ಸಾಹದ ಮೂಲಕ ಸ್ಥಳೀಯ ರೈತರು ತಮ್ಮ ಜಮೀನುಗಳಲ್ಲಿ ಮರಗಳನ್ನು ನೆಡಲು ಪ್ರೋತ್ಸಾಹಿಸುವ

ಮೂಲಕ, ಅವರು ಈ ರೈತರಿಗೆ ಹೆಚ್ಚುವರಿ ಆದಾಯವನ್ನು ಗಳಿಸುವ ಮೂಲಕ ಅರಣ್ಯನಾಶವನ್ನು ಎದುರಿಸುವ ಗುರಿಯನ್ನು ಹೊಂದಿದ್ದಾರೆ.

ರೈತರ ಸಾವಿರಾರು ಕೋಟಿ ರೂಪಾಯಿ ಮನ್ನಾ

ವಿಕಾಶ್ ಸೋರೌತ್ ಅವರು ಕೃಷಿ ಕುಂಟುಂಬದ ಹಿನ್ನೆಲೆಯಿಂದ ಬಂದವರಾಗಿದ್ದು, ರೈತನ ಮಗ. ಅಲ್ಲದೇ ಯಶಸ್ವಿ ಉದ್ಯಮಿಯಾಗಿದ್ದಾರೆ. 

ರೈತರ ಸಾಲದ ಹೊರೆಯ ಬಗ್ಗೆ ವಿಕಾಸ್‌ ಅವರು ಅಭಿಪ್ರಾಯ ಹಂಚಿಕೊಳ್ಳುವುದು ಹೀಗೆ, “ನಾನು ಭಾರತದ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿ ಬೆಳೆದೆ. 

ರೈತರ ದಿನನಿತ್ಯದ ಹೋರಾಟಗಳನ್ನು ಕಣ್ಣಾರೆ ಕಂಡಿದ್ದೇನೆ. ಅದಕ್ಕಾಗಿಯೇ ಅವರ ಸಮಸ್ಯೆಗಳನ್ನು ಪರಿಹರಿಸಲು ನಾನು ನನ್ನ ಕೈಲಾದಷ್ಟು ಮಾಡುತ್ತಿದ್ದೇನೆ.

ರೈತರ ಸಾಲದ ಹೊರೆ ಇಳಿಸಲು ವಿಕಾಸ್‌ನ ಅವರು ಮಾಡಿರುವ ಸಹಾಯಕ್ಕೆ ರೈತರು ಸೇರಿದಂತೆ ಹಲವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.