News

ಏಳು ತಿಂಗಳು ಕೋಮಾದಲಿದ್ದ ಮಹಿಳೆ; ಹೆಣ್ಣು ಮಗುವಿಗೆ ಜನ್ಮ!

29 October, 2022 11:59 AM IST By: Hitesh
Birth of a baby girl

ನಿರಂತರವಾಗಿ ಏಳು ತಿಂಗಳ ಕಾಲ ಮಹಿಳೆಯೊಬ್ಬರು ಕೋಮಾದಲ್ಲಿದ್ದರೂ ಅವರ ಗರ್ಭದಲ್ಲಿದ್ದ ಭ್ರೂಣದ ಹೃದಯ ಮಿಡಿಯುತ್ತಲೇ ಇತ್ತು..

ಇದನ್ನೂ ಓದಿರಿ: 10ನೇ ತರಗತಿ ಪಾಸಾಗಿದ್ದರೇ ಸಾಕು KMF ನಲ್ಲಿವೆ ಉದ್ಯೋಗಾವಕಾಶ; ರೂ.97100 ಸಂಬಳ!  

ಇಂತಹದೊಂದು ಮನಕಲಕುವ ಘಟನೆಗೆ ದೆಹಲಿ ಸಾಕ್ಷಿಯಾಗಿದೆ. ಗರ್ಭಿಣಿಯೊಬ್ಬರು ಏಳು ತಿಂಗಳ ಹಿಂದೆ ರಸ್ತೆ ಅಪಘಾತದಿಂದಾಗಿ ಕೋಮಾಕ್ಕೆ ಜಾರಿದ್ದರು.

ನಿರಂತರವಾಗಿ ಏಳು ತಿಂಗಳಾದರೂ ಅವರಿಗೆ ಪ್ರಜ್ಞೆ ಬಂದಿರಲಿಲ್ಲ.  

ಮಹಿಳೆ ಪ್ರಜ್ಞಾಹೀನ ಸ್ಥಿತಿ ತಲುಪಿದ್ದರೂ ಅವರ ಗರ್ಭದಲ್ಲಿದ್ದ ಮಗುವಿನ ಬೆಳವಣಿಗೆಯಲ್ಲಿ ಯಾವುದೇ ಸಮಸ್ಯೆ ಆಗಿರಲಿಲ್ಲ.

ಇದೇ ವರ್ಷ ಮಾ. 31ರಂದು ಬುಲಂದ್‌ಶಹರ್‌ (Bulandshahr)ಮೂಲದ ಗರ್ಭಿಣಿ (pregnant) ಮಹಿಳೆ ಹೆಲ್ಮೆಟ್‌ ಧರಿಸದೇ  

ಪತಿಯೊಂದಿಗೆ ದ್ವಿಚಕ್ರ (Two wheeler) ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ರಸ್ತೆ ಅಪಘಾತ ಸಂಭವಿಸಿತ್ತು.

'Water Heroes: Share Your Stories’ ಸ್ಪರ್ಧೆಗೆ ಅರ್ಜಿ ಆಹ್ವಾನ; ನೀವೂ ನಿಮ್ಮ ಕಥೆ ಹಂಚಿಕೊಂಡು ರೂ.10,000 ಗೆಲ್ಲಬಹುದು! 

ರಸ್ತೆ ಅಪಘಾತದಲ್ಲಿ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದರು. ತಲೆಗೆ ತೀವ್ರವಾದ ಪೆಟ್ಟಾದ ಕಾರಣ ಇನ್ನೂ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು.

ಬಳಿಕ ಆಕೆಯನ್ನು ಏಮ್ಸ್‌ಗೆ (AIIMS) ಚಿಕಿತ್ಸೆಗೆದು ದಾಖಲಿಸಲಾಗಿತ್ತು.

ಅದೃಷ್ಟವಶಾತ್‌ ಗರ್ಭದಲ್ಲಿದ್ದ ಮಗುವಿಗೆ (unborn child) ಯಾವುದೇ ಹಾನಿಯಾಗಿರಲಿಲ್ಲ.

ಹೀಗಾಗಿ ಗರ್ಭಪಾತ ಮಾಡಿಸುವ ಬದಲು ಆಕೆಯ ಮನೆಯವರು ಮಗುವನ್ನು ಉಳಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡರು.

ಪಡಿತರ ಚೀಟಿದಾರರಿಗೆ ಇಲ್ಲಿದೆ ಸಿಹಿ ಸುದ್ದಿ, ಇನ್ಮುಂದೆ ನೀವು ಎಲ್ಲೆ ಇದ್ದರೂ ಈ ಸೌಲಭ್ಯ ಪಡೆಯಬಹುದು! ಏನದು ಗೊತ್ತೆ? 

ಮಹಿಳೆಯನ್ನು 3 ತಿಂಗಳು ವೆಂಟಿಲೇಟರ್‌ನಲ್ಲಿಟ್ಟು ಬಳಿಕ ಆಕೆಗೆ ಹಲವಾರು ಶಸ್ತ್ರಚಿಕಿತ್ಸೆ ಮಾಡಲಾಯಿತು. ಹಾನಿಗೊಳಗಾದ ಮೆದುಳಿನ ಭಾಗವನ್ನೂ ತೆಗೆಯಲಾಯಿತು.

ಇದರೊಂದಿಗೆ 5 ನರಸಂಬಂಧಿ ಶಸ್ತ್ರಚಿಕಿತ್ಸೆಯನ್ನೂ ನಡೆಸಲಾಯಿತು.

ನಿರಂತರ ಶಸ್ತ್ರಚಿಕಿತ್ಸೆ ಸಮಸ್ಯೆಗಳ ಹೊರತಾಗಿಯೂ ಮಹಿಳೆ ಕೋಮಾವಸ್ಥೆಯಲ್ಲಿದ್ದ 7 ತಿಂಗಳ ಬಳಿಕವೂ ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮವಾಗಿದೆ.

ಮಹಿಳೆಗೆ ಎದೆಹಾಲು ಕುಡಿಸುವ ಸಾಮರ್ಥ್ಯ ಇಲ್ಲದ ಕಾರಣ ಮಗುವಿಗೆ ಬಾಟಲಿಯಲ್ಲಿ ಹಾಲು ನೀಡಲಾಗುತ್ತಿದೆ.

ಮಗು ಆರೋಗ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.   

ರಾಜ್ಯದಲ್ಲಿ ನೈರುತ್ಯ ಮುಂಗಾರಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ!