News

Pension ಪಿಂಚಣಿದಾರರಿಗೆ ಈ ರಾಜ್ಯದ ಸರ್ಕಾರದಿಂದ ಅಚ್ಚರಿ!

21 February, 2023 9:52 AM IST By: Hitesh
A surprise for pensioners from this state government!

ಒಡಿಶಾ ಸರ್ಕಾರವು ಸದಾ ಒಂದಿಲ್ಲೊಂದು ಜನಪರ ಕೆಲಸಗಳನ್ನು ಮಾಡುವ ಮೂಲಕ ಸದಾ ಸುದ್ದಿಯಲ್ಲಿರುತ್ತದೆ.

ಒಡಿಶಾದಲ್ಲಿ ಹಲವು ಜನಪರ ಯೋಜನೆಗಳು ಸದಾ ಚಾಲ್ತಿಯಲ್ಲಿ ಇರುತ್ತಿದೆ. ಆದರೆ, ಇಲ್ಲಿ ನಡೆಯುವ ಕೆಲಸಗಳು ಹೆಚ್ಚು ಜನಪ್ರಿಯತೆ ಪಡೆದುಕೊಳ್ಳುವುದಿಲ್ಲ.

ಈ ಬಾರಿಯೂ ಒಡಿಶಾ ಅಂತಹದ್ದೇ ಒಂದು ವಿಷಯಕ್ಕೆ ಸುದ್ದಿಯಲ್ಲಿದೆ. ಈ ರಾಜ್ಯದಲ್ಲಿ ಪಿಂಚಣಿದಾರರಿಗೆ ಈ ಹಿಂದೆಗಿಂತಲೂ ಅತ್ಯುತ್ತಮವಾದ ಸೇವೆಯನ್ನು ಪರಿಚಯಿಸಲಾಗಿದೆ.   

500ರ ನೋಟು ಎಸೆದು ಅಳಿಯನನ್ನು ಸ್ವಾಗತಿಸಿದ ಮಾವ!

ಒಡಿಶಾದ ದೂರದ ಗ್ರಾಮದಲ್ಲಿನ ಅಂಗವಿಕಲ ಫಲಾನುಭವಿಗೆ ಪಿಂಚಣಿ ವಿತರಣೆ ಮಾಡಲು ಡ್ರೋನ್ ಬಳಕೆ ಮಾಡಲಾಗಿದ್ದು, ಈ ವಿನೂತನ ಕ್ರಮ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.  

ಒಡಿಶಾದ ನುವಾಪಾದ ಜಿಲ್ಲೆಯ ದೂರದ ಹಳ್ಳಿಯೊಂದರ ಅಂಗವಿಕಲ ಹೆತರಾಮ್ ಸತ್ನಾಮಿ ಅವರು ತಮ್ಮ ಸರ್ಕಾರಿ ಪಿಂಚಣಿ ಪಡೆಯಲು ಪ್ರತಿ ತಿಂಗಳು

ದಟ್ಟವಾದ ಕಾಡಿನ ಮೂಲಕ 2 ಕಿ.ಮೀ. ನಡೆದು ಹೋಗಬೇಕಿತ್ತು. ಅನಿವಾರ್ಯ ಹಾಗೂ ಅವರ ಸಂಕಷ್ಟವನ್ನು ನೋಡಿರುವ ಸರ್ಕಾರ ಅವರ ನೆರವಿಗೆ ಧಾವಿಸಿದೆ.  

ಹಣದುಬ್ಬರ ನಿಯಂತ್ರಣಕ್ಕೆ ಮಾಸ್ಟರ್‌ ಪ್ಲಾನ್‌ ಮಾಡ್ತಿದೆ ಕೇಂದ್ರ; ಪೆಟ್ರೋಲ್‌, ಡಿಸೇಲ್‌ ದರ ಇಳಿಕೆ ?! 

ಅವರು ದುರ್ಗಮ ಕಾಡಿನ ಹಾದಿಯಲ್ಲಿ ಈ ಬಾರಿ ಸಾಗಿಲ್ಲ. ಅವರ ಮನೆಯ ಬಾಗಿಲಿಗೇ ಪಿಂಚಣಿ ಹಣವನ್ನು ತಲುಪಿಸಲಾಗಿದೆ.

ಹಣವನ್ನು ಡ್ರೋನ್ ಸತ್ನಾಮಿ ಅವರ ಭಾಲೇಶ್ವರ ಪಂಚಾಯತ್ ವ್ಯಾಪ್ತಿಯ ಭೂತಕಪಾಡಾ ಗ್ರಾಮದ ಅವರ ಮನೆಗೇ ತಲುಪಿಸಲಾಗಿದೆ.   

ಫಲಾನುಭವಿ ಸತ್ನಾಮಿ ಅವರು ಈ ಕ್ರಮಕ್ಕೆ ಸಂತೋಷಗೊಂಡಿದ್ದಾರೆ. ಈ ಕುರಿತು ಮಾತನಾಡಿದ ಅವರು, ಸರಪಂಚ್ ಅವರು ಡ್ರೋನ್ ಸಹಾಯದಿಂದ ಹಣ ಕಳುಹಿಸಿದ್ದಾರೆ.

ದಟ್ಟಾರಣ್ಯದಿಂದ ಕೂಡಿರುವ ಈ ಗ್ರಾಮದಿಂದ ಪಂಚಾಯಿತಿ ಕಚೇರಿ 2 ಕಿ.ಮೀ ದೂರದಲ್ಲಿ ಇರುವುದರಿಂದ ನನಗೆ ಪಿಂಚಣಿ ಪಡೆಯುವುದು ಸವಾಲಿನ ಕೆಲಸವಾಗಿತ್ತು.

ಆದರೆ, ಇದೀಗ ಡ್ರೋನ್ ಮೂಲಕ ಹಣ ಬಂದಿದ್ದು, ಹೇಗೆ ಸಂತೋಷ ಹಂಚಿಕೊಳ್ಳಬೇಕು ಎಂದು ತಿಳಿಯುತ್ತಿಲ್ಲ ಎಂದಿದ್ದಾರೆ.

Gold Rate Today ಚಿನ್ನದ ಬೆಲೆಯಲ್ಲಿ ಮುಂದುವರಿದ ಏರುಪೇರು!  

A surprise for pensioners from this state government!

ಈ ಕ್ರಮದ ಬಗ್ಗೆ ಮಾತನಾಡಿರುವ ಸರಪಂಚ್ ಸರೋಜ್ ಅಗರ್ವಾಲ್ ಅವರು, ಸತ್ನಾಮಿ ಅವರು ಹುಟ್ಟಿನಿಂದಲೂ ಅಂಗವಿಕಲರಾಗಿದ್ದು ಪಿಂಚಣಿಗಾಗಿ ಅವರು ಪಡುತ್ತಿದ್ದ ಕಷ್ಟ ನೋಡಿ ಸಂಕಟವಾಗುತ್ತಿತ್ತು.  

ನಮ್ಮ ಪಂಚಾಯತ್ ವ್ಯಾಪ್ತಿಯಲ್ಲಿ, ಅರಣ್ಯದಲ್ಲಿ ನೆಲೆಗೊಂಡಿರುವ ಗ್ರಾಮ ಇದೆ.

ಅಂಗವಿಕಲರಾದ ಹೇತಾರಾಮ್ ಸತ್ನಾಮಿ ಆ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಅವರು ಹುಟ್ಟಿನಿಂದಲೂ ನಡೆಯಲು ಸಾಧ್ಯವಿಲ್ಲ.  

ನಾನು ಅವರನ್ನು ರಾಜ್ಯ ಯೋಜನೆಯಡಿ ಪಿಂಚಣಿಗಾಗಿ ದಾಖಲಿಸಿದ್ದೇನೆ. ಇತರ ದೇಶಗಳಲ್ಲಿ ಡ್ರೋನ್‌ಗಳ ಮೂಲಕ ವಸ್ತುಗಳನ್ನು ಹೇಗೆ ಕಳುಹಿಸಲಾಗುತ್ತದೆ

ಎಂಬುದನ್ನು ನಾನು ನೋಡಿದ್ದೇನೆ. ಹೀಗಾಗಿ, ಇದನ್ನು ಇಲ್ಲಿಯೂ ಪ್ರಯೋಗಿಸಲು ಮುಂದಾದೆವು.

ಇದು ಯಶಸ್ವಿಯಾಗಿದ್ದು, ಡ್ರೋನ್‌ನ ಮೂಲಕ ಪಿಂಚಣಿ ಹಣವನ್ನು ಕಳುಹಿಸಲಾಗಿದೆ ಎಂದರು.

ನುವಾಪದ ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ (ಬಿಡಿಒ) ಸುಬೇದಾರ್ ಪ್ರಧಾನ್ ಮಾತನಾಡಿ, ಸೇವೆಗಳನ್ನು ತಲುಪಿಸಲು ಅಂತಹ ಸಾಧನಗಳನ್ನು

ಖರೀದಿಸಲು ಸರ್ಕಾರವು ನಿಬಂಧನೆ ವಿಧಿಸದೆ ಇರುವುದು ಹಾಗೂ  ಅಗರ್‌ವಾಲ್ ಅವರು ಸ್ವತಹ ಕಾಳಜಿ ವಹಿಸಿದ್ದರಿಂದಾಗಿ ಇದು ಸಾಧ್ಯವಾಗಿದೆ.  

ಔಷಧಿ, ಪಾರ್ಸೆಲ್‌ಗಳು, ದಿನಸಿ ಮತ್ತು ಆಹಾರ ಸೇರಿದಂತೆ ವಿವಿಧ ಸರಕುಗಳನ್ನು ತಲುಪಿಸಲು ಪ್ರಪಂಚದಾದ್ಯಂತ ಡ್ರೋನ್‌ಗಳನ್ನು ಬಳಸಲಾಗುತ್ತಿದೆ.

ಆದರೆ, ಜನರ ಸೇವೆಗೂ ಈ ರೀತಿಯ ಮಾದರಿಯನ್ನು ಅನುಸರಿಸಿದ್ದು, ಬಹುಶಃ ಇತ್ತೀಚಿನ ದಿನಗಳಲ್ಲಿ ಇದೇ ಮೊದಲು ಎನ್ನಬಹುದು.  

weather update ರಾಜ್ಯದಲ್ಲಿ ಇಂದು ಹವಾಮಾನ ಹೇಗಿದ, ಇಲ್ಲಿದೆ ಅಪ್ಡೇಟ್‌