News

ತಂದೆ ಎದುರೇ 4 ತಿಂಗಳ ಮಗುವನ್ನು ಟೆರೆಸ್‌ ಮೇಲಿಂದ ಎಸೆದು ಸಾಯಿಸಿದ ಕೋತಿ

18 July, 2022 10:48 AM IST By: Maltesh
ಸಾಂದರ್ಭಿಕ ಚಿತ್ರ

ರಾಕ್ಷಸಿ ಕೋತಿಯೊಂದು ಕಟ್ಟಡದ ಮೇಲಿಂದ 4 ತಿಂಗಳ ಹಸುಗೂಸನ್ನು ಮೇಲಿಂದ ಎಸೆದು ಸಾಯಿಸಿದ ಭಯಾನಕ ಘಟನೆ ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ವರದಿಯಾಗಿದೆ.

ಕೋತಿಯೊಂದು 3 ಮಹಲಿನ ಮನೆಯ ಮೇಲಿಂದ ಹಸುಗೂಸನ್ನು ಎಸೆದ ಪರಿಣಾಮ ನಾಲ್ಕು ತಿಂಗಳ ಗಂಡು ಮಗು ಕೆಳಗೆ ಬಿದ್ದು ಸಾವನ್ನಪ್ಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು PTI ವರದಿ ಮಾಡಿದೆ.

ಈ ಕುರಿತು ಮಾಹಿತಿ ನೀಡಿದ ಬರೇಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಲಿತ್ ವರ್ಮಾ ಘಟನೆ ಕುರಿತು ವರದಿಯಾಗಿದ್ದು, ತನಿಖೆ ನಡೆಸಲು ಅರಣ್ಯ ಇಲಾಖೆಯ ತಂಡವನ್ನು ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.

ಅಷ್ಟಕ್ಕೂ ನಡೆದದ್ದೇನು..?

ವರದಿಯ ಪ್ರಕಾರ, ಬರೇಲಿಯ ಡುಂಕಾ ಗ್ರಾಮದ ನಿವಾಸಿ ನಿರ್ದೇಶ್ ಉಪಾಧ್ಯಾಯ (25) ಅವರು ಮೊನ್ನೆ ಸಂಜೆ, ತಮ್ಮ ನಾಲ್ಕು ತಿಂಗಳ ಮಗುವಿನೊಂದಿಗೆ ತಮ್ಮ ಮೂರು ಮಹಲಿನ ಮನೆಯ ಟೆರೇಸ್ ಮೇಲೆ ಪತ್ನಿಯೊಡನೆ ಕೂತಿದ್ದಾರೆ. ಈ ವೇಳೆ ಸ್ಥಳಕ್ಕೆ ಲಗ್ಗೆ ಇಟ್ಟ ಕೋತಿಗಳ ಗುಂಪು ಇಬವರ ಮೇಲೆ ಭಯಾನಕ ದಾಳಿಗೆ ಮುಂದಾಗಿವೆ.

ಅವರು ಎಷ್ಟೇ ಪ್ರಯತ್ನಿಸಿದರು ಕೋತಿಗಳ ಹಿಂಡು ಅಲ್ಲಿಂದ ನಿರ್ಗಮಿಸಿಲ್ಲ. ಈ ವೇಲೆ ಮಗುವನ್ನು ಕಾಪಾಡಲು ದಂಪತಿಗಳಿಬ್ಬರು ಮುಂದಾಗುವ ವೇಳೆಯಲ್ಲಿ ಕೋತಿಯೊಂದು ಮಗುವನ್ನು ಸುತ್ತುವರೆದಿದೆ. ನೋಡು ನೋಡುತ್ತಲೇ ಮಗುವನ್ನು ಟೆರೆಸ್‌ ಮೇಲಿನಿಂದ ಕೆಳಗೆ ಬೀಸಾಕಿದೆ. ಕೆಳಗೆ ಬಿದ್ದದ್ದೆ ತಡ ಮಗುವಿನ ಪ್ರಾಣ ಪಕ್ಷಿ ಕ್ಷಣಾರ್ಧದಲ್ಲಿ ಹಾರಿ ಹೋಗಿದೆ.

ಕಾಶಿಗೆ ಹೋಗುವವರಿಗೆ ಸಿಹಿ ಸುದ್ದಿ

ಕರ್ನಾಟಕ ಸರ್ಕಾರವು ಉತ್ತರ ಪ್ರದೇಶದ ಕಾಶಿ ಅಥವಾ ಆಧುನಿಕ ವಾರಣಾಸಿಯಯ ದರ್ಶನ ಪಡೆಯಲು ಬಯಸುವ ಯಾತ್ರಾರ್ಥಿಗಳಿಗೆ ಎಂದೇ ಹೊಸ ಯೋಜನೆಯನ್ನು ಬಜೆಟ್ನಲ್ಲಿ ಘೋಷಣೆ ಮಾಡಿತ್ತು.

2022-23ನೇ ಸಾಲಿನ ಆಯವ್ಯಯದಲ್ಲಿ ಪ್ರಸ್ತಾಪಿತ ಕಾಶಿಯಾತ್ರೆ ಪ್ರವಾಸ ಯೋಜನೆ, ಪ್ರತಿ ವರ್ಷ ರಾಜ್ಯದ 30 ಸಾವಿರ ಯಾತ್ರಾರ್ಥಿಗಳು ಸರ್ಕಾರದ ಸಹಾಯಧನದ ಮೂಲಕ ಕಾಶಿಗೆ ತೆರಳಲು ಅವಕಾಶವಿದೆ. ಪ್ರತಿಯೊಬ್ಬ ಯಾತ್ರಾರ್ಥಿಗೆ 5 ಸಾವಿರ ರೂ. ಸಹಾಯಧನ ನೀಡಲಾಗುತ್ತಿದ್ದು, ಶೀಘ್ರದಲ್ಲಿಯೇ ಮುಜರಾಯಿ ಇಲಾಖೆಯಿಂದ ಕಾಶಿಯಾತ್ರೆಗೆ ತೆರಳಲು ಆಸಕ್ತಿ ಹೊಂದಿರುವ ಯಾತ್ರಾರ್ಥಿಗಳಿಂದ ಅರ್ಜಿ ಆಹ್ವಾನಿಸಲಿದೆ.

ಇದನ್ನೂ ಓದಿರಿ: ಗುಡ್‌ನ್ಯೂಸ್‌: ರೈತರ ಬೆಳೆಹಾನಿಗೆ ಹೆಚ್ಚುವರಿ ದರ ನೀಡಲು ಬೊಮ್ಮಾಯಿ ಸರ್ಕಾರ ನಿರ್ಧಾರ! ಎಷ್ಟು ಗೊತ್ತೆ?

ಆ ಘೋಷಣೆಯನ್ನು ಅನುಷ್ಠಾನ(Kashi Yatra subsidy) ಕೈಗೊಳ್ಳುವ ಪ್ರತಿಯೊಬ್ಬ ವ್ಯಕ್ತಿಗೆ 5000 ರೂಪಾಯಿ ಸಹಾಯಧನ ನೀಡಲು ತಾತ್ವಿಕ ಅನುಮೋದನೆಯ ಪ್ರಕಾರ ಆದೇಶ ಕೂಡ ಹೊರಡಿಸಿತ್ತು.

ಸದ್ಯ ಈ ಯೋಜನೆಯ ಭಾಗವಾಗಿ ಮುಜರಾಯಿ ಇಲಾಖೆಯ ವತಿಯಿಂದ ರಾಜ್ಯದಿಂದ ಕಾಶಿ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳಿಗೆ ಇಂದು ಸಾಂಕೇತಿಕವಾಗಿ ಸಿಎಂ ಬಸವರಾಜ ಬೊಮ್ಮಾಯಿ ಸಹಾಯಧನ ವಿತರಿಸಿದ್ದಾರೆ.  ಡಿ.ಬಿ.ಟಿ ಮೂಲಕ ಆನ್‌ಲೈನ್‌ ನಲ್ಲಿ ಹಣ ವರ್ಗಾವಣೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದ, ಅವರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವೆಬ್‌ ಪೋರ್ಟಲ್‌ ಅನ್ನು ಕೂಡ ಲೋಕಾರ್ಪಣೆಗೊಳಿಸಿದ್ದಾರೆ.