ರೈತರಿಗೆ ಪ್ರಮುಖ ಸುದ್ದಿಗಳನ್ನು ತಲುಪಿಸುವ ಉದ್ದೇಶದಿಂದ ಕೃಷಿ ಜಾಗರಣ ಕನ್ನಡವು ಕೃಷಿ ಜಾಗರಣ ಅಗ್ರಿನ್ಯೂಸ್ ಪರಿಚಯಿಸಿದೆ.
ಯೂಟ್ಯೂಬ್‌ನ ಮೂಲಕ ನಿತ್ಯದ ಪ್ರಮುಖ ಸುದ್ದಿಗಳನ್ನು ಜನರಿಗೆ ತಲುಪಿಸಲಾಗುತ್ತಿದೆ.
ಇಂದಿನ ಪ್ರಮುಖ ಸುದ್ದಿಗಳನ್ನು ನೋಡುವುದಾದರೆ, ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡುವುದಕ್ಕೆ ಸರ್ಕಾರ ಆದೇಶ ಹೊರಡಿಸಿದೆ.
ಇನ್ನು ಆಲ್ಕೋಹಾಲ್‌ನಿಂದ ಜೆಟ್ ಇಂಧನ ತಯಾರಿಸುವ ವಿನೂತನ ಪ್ರಯೋಗ ನಡೆದಿದೆ
ಈ ಎಲ್ಲ ಸುದ್ದಿಗಳ ಚುಟುಕು ವಿವರ ಈ ಲೇಖನದಲ್ಲಿದೆ ಮೊದಲಿಗೆ ಮುಖ್ಯಾಂಶಗಳು.
1.ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿ ಸರ್ಕಾರ ಆದೇಶ
2. ರೈತರೆಂದರೆ ಬಡವರಷ್ಟೇ ಅಲ್ಲ; ಡಾ. ರಾಜಾರಾಂ ತ್ರಿಪಾಠಿ
3. ಆಲ್ಕೋಹಾಲ್‌ನಿಂದ ಜೆಟ್ ಇಂಧನ: ವಿನೂತನ ಪ್ರಯೋಗ
4. ಉತ್ತರ ಭಾರತದಲ್ಲಿ ಮೈಕೊರೆಯುವ ಚಳಿ; ರೈಲು, ವಿಮಾನ ಸಂಚಾರ ವ್ಯತ್ಯಾಸ
5. ಎಪಿಎಂಸಿಗಳ ಅಭಿವೃದ್ಧಿಗೆ ಭರ್ಜರಿ ಅನುದಾನ
6. ರಾಜ್ಯದಲ್ಲಿ ಮುಂದುವರಿದ ಒಣಹವೆ ವಾತಾವರಣ
7. ಕೊಬ್ಬರಿಗೆ ಕೇಂದ್ರದಿಂದ 12 ಸಾವಿರ ರಾಜ್ಯದಿಂದ 1500 ರೂ ಬೆಂಬಲ ಬೆಲೆ
ಸುದ್ದಿಗಳ ವಿವರ ಈ ರೀತಿ ಇದೆ.
---------------------------
ರೈತರೂ ಕೋಟಿಗಳಲ್ಲಿ ದುಡಿಯಬಹುದು: ಡಾ. ರಾಜಾರಾಂ ತ್ರಿಪಾಠಿ
1. ರಾಜ್ಯ ಸರ್ಕಾರವು ಬರಗಾಲದಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿದ್ದು, ಸಾಲದ ಮೇಲಿನ
ಬಡ್ಡಿ ಮನ್ನಾ ಮಾಡಲು ಮುಂದಾಗಿದೆ.
ಸಹಕಾರ ವಲಯದಲ್ಲಿ ದೀರ್ಘಾವಧಿ ಮತ್ತು ಮಧ್ಯಮಾ ಅವಧಿಗೆ ಸಾಲ ಪಡೆದಿರುವ ರೈತರ
ಬಡ್ಡಿಯನ್ನು ಕೆಲವು ನಿರ್ದಿಷ್ಟ ಷರತ್ತುಗಳ ಆಧಾರದ ಮೇಲೆ ಮನ್ನಾ ಮಾಡಲು ಸರ್ಕಾರ ಆದೇಶ ಹೊರಡಿಸಿದೆ.
ಈ ಆದೇಶ ಅನ್ವಯ ಕೃಷಿ ಪತ್ತಿನ ಸಹಕಾರ ಸಂಘಗಳು, ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ
ಬ್ಯಾಂಕ್, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್ ಗಳಲ್ಲಿ ಸಾಲ ಪಡೆದಿರುವವರಿಗೆ ಇದು ಅನ್ವಯವಾಗಲಿದೆ.
2023ರ ಡಿಸೆಂಬರ್ 31ರ ಒಳಗಾಗಿ ಸುಸ್ತಿದಾರರು ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಆಗಲಿದೆ.
---------------------------
2. ರೈತರೆಂದರೆ ಬಡವರಷ್ಟೇ ಅಲ್ಲ. ರೈತರೂ ಸಹ ಕೋಟಿಗಳಲ್ಲಿ ದುಡಿಯುತ್ತಿದ್ದಾರೆ ಅವರನ್ನು ಜಗತ್ತಿಗೆ
ಪರಿಚಯಿಸಬೇಕು ಎಂದು ಪ್ರಗತಿಪರ ರೈತ ಹಾಗೂ RFOI ಡಾ. ರಾಜಾರಾಂ ತ್ರಿಪಾಠಿ ಹೇಳಿದರು.
ಈಚೆಗೆ ನವದೆಹಲಿಯ ಕೃಷಿ ಜಾಗರಣದ ಚೌಪಾಲ್‌ಗೆ ಭೇಟಿ ನೀಡಿ ಅವರು ಮಾತನಾಡಿದರು.
ಭಾರತದಲ್ಲಿ ಕೃಷಿಯು ಪ್ರಧಾನ ವೃತ್ತಿಯಾಗಿದೆ. ಆದರೆ, ಇದರಲ್ಲಿ ಒಬ್ಬರೂ ರೋಲ್ ಮಾಡಲ್
ಎನ್ನುವವರನ್ನು ನಾವು ಗುರುತಿಸಿಲ್ಲ. ಇದೀಗ ಅದನ್ನು ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯು ಬದಲಾಯಿಸುತ್ತಿದೆ.
MFOI ಯೋಜನೆಯ ಮೂಲಕ ದೇಶದ ರೈತರನ್ನು ಗುರುತಿಸಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ.
ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯು ಇಲ್ಲಿಯವರೆಗೆ ಯಾವುದೇ ಮಾಧ್ಯಮಗಳು ಮಾಡದಂತಹ ಅಮೋಘವಾದ ಕೆಲಸವನ್ನು ಮಾಡಿದೆ.
ಇನ್ನು ಭಾರತವೂ ವಿಶ್ವಕ್ಕೆ ಮಾದರಿಯಾಗಬಲ್ಲದು ಎಂದು ಡಾ. ರಾಜಾರಾಂ ತ್ರಿಪಾಠಿ ಅವರು ಹೇಳಿದರು.
ಉತ್ತರ ಭಾರತದಲ್ಲಿ ಮೈ ಕೊರೆಯುವ ಚಳಿ ವಾತಾವರಣ
ಕೃಷಿ ಜಾಗರಣ ಸಂಸ್ಥೆ ರೈತರನ್ನು ಗೌರವಿಸಿದೆ. ರೈತ, ಅನ್ನದಾತರನ್ನು ಯಾರು ಗೌರವಿಸುವರೋ ಅವರನ್ನು ರೈತರು ಎಂದಿಗೂ ಮರೆಯಲಾಗುವುದಿಲ್ಲ.
ಕೃಷಿ ಜಾಗರಣ ಮಾಧ್ಯಮ ಸಂಸ್ಥೆಯ ಮಿಲಿಯನೇರ್ ಫಾರ್ಮರ್ ಆಫ್ ಇಂಡಿಯಾದೊಂದಿಗೆ ನಾನು ಕೈಜೋಡಿಸುತ್ತೇನೆ ಎಂದಿದ್ದಾರೆ.
---------------------------
3. ಆಲ್ಕೋಹಾಲ್‌ನಿಂದ ಜೆಟ್ ಇಂಧನ ತಯಾರಿಸುವ ವಿನೂತನ ಪ್ರಯತ್ನ ಪ್ರಾರಂಭವಾಗಿದೆ. ಇದರ ಮೊದಲ ಪ್ರಾಯೋಗಿಕ
ತಂತ್ರಜ್ಞಾನ ಯೋಜನೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್
ಸಿಂಗ್ ಪುರಿ ಅವರು ಪುಣೆಯಲ್ಲಿ ಈಚೆಗೆ ಚಾಲನೆ ನೀಡಿದರು.
---------------------------
4. ಉತ್ತರ ಭಾರತದ ವಿವಿಧೆಡೆ ಮೈಕೊರೆಯುವ ಚಳಿ ಮುಂದುವರಿದಿದೆ. ಉತ್ತರ ಭಾರತದಲ್ಲಿ ಚಳಿಗಾಳಿ
ಹಾಗೂ ಮಂಜು ಮುಸುಕಿದ ವಾತಾವರಣ ಮುಂದುವರಿದಿದೆ. ಗೋಚರಿಸುವ ಪ್ರಮಾಣ ಕಡಿಮೆಯಾಗಿರುವುದರಿಂದ
ರೈಲು ಮತ್ತು ವಿಮಾನ ಸಂಚಾರಯಲ್ಲಿ ವ್ಯತ್ಯಾಸವಾಗುತ್ತಿದೆ. ದೆಹಲಿಯಿಂದ ದೇಶದ ವಿವಿಧ ರಾಜ್ಯಗಳಿಗೆ ಸಂಚರಿಸುವ
11 ರೈಲುಗಳ ಸಂಚಾರ ವಿಳಂಬವಾಗಿದೆ ಎಂದು ಭಾರತೀಯ ರೈಲ್ವೆ ಇಲಾಖೆಯ ತಿಳಿಸಿದೆ.
ಇನ್ನು ಪಂಜಾಬ್, ದೆಹಲಿ, ಹರಿಯಾಣ, ರಾಜಸ್ಥಾನ ಸೇರಿದಂತೆ ವಿವಿಧ ಪ್ರದೇಶದಲ್ಲಿ ದಟ್ಟ
ಮಂಜಿನ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
---------------------------
ರಾಜ್ಯದಲ್ಲಿ ಮುಂದುವರಿದ ಒಣಹವೆ
5. ಕರ್ನಾಟಕದ ಎಪಿಎಂಸಿಗಳನ್ನು ಅಭಿವೃದ್ಧಿ ಮಾಡಲು ಅವಶ್ಯವಿರುವ ಆರ್ಥಿಕ ನೆರವನ್ನು ಸರ್ಕಾರ ನೀಡಲಿದೆ
ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ. ಕರ್ನಾಟಕದಲ್ಲಿ ಇದೀಗ 170 ಎಪಿಎಂಸಿಗಳಿವೆ.
ಬೇಗೂರಿನಲ್ಲಿ ನಿರ್ಮಾಣವಾಗಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಅಭಿವೃದ್ದಿಗೆ 6 ಕೋಟಿ ರೂಪಾಯಿ ಅನುದಾನ ನೀಡಲಾಗುವುದು.
ಇಲಾಖೆಗೆ 390 ಕೋಟಿ ಮಂಜೂರಾಗಿದೆ ಎಂದಿದ್ದಾರೆ.
---------------------------
6. ರಾಜ್ಯದಲ್ಲಿ ಒಣಹವೆ ಮುಂದುವರಿದಿದೆ. ಮಳೆಯ ಮುನ್ಸೂಚನೆ ಇಲ್ಲ.
ಇನ್ನು ಭಾನುವಾರ ಬೆಳಗಾವಿಯ ವಿಮಾನ ನಿಲ್ದಾಣದಲ್ಲಿ 14.8 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಇನ್ನು ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ
ಇರಲಿದ್ದು, ಕೆಲವು ಕಡೆ ಬೆಳಗಿನ ಜಾವ ದಟ್ಟ ಮಂಜು ಆವರಿಸಿರಲಿದೆ.
ಗರಿಷ್ಠ ಉಷ್ಣಾಂಶವು 30 ಮತ್ತು ಕನಿಷ್ಠ ಉಷ್ಣಾಂಶವು 17 ಡಿಗ್ರಿ ಸೆಲ್ಸಿಯಸ್ ಇರಲಿದೆ
ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
---------------------------
7. ರಾಜ್ಯ ಸರ್ಕಾರದಿಂದ ಕೊಬ್ಬರಿ ಬೆಳೆಗಾರರಿಗೆ ಕೇಂದ್ರ ಸರ್ಕಾರ ನೀಡುವ ಕನಿಷ್ಠ ಬೆಂಬಲ ಬೆಲೆ 12000 ಸಾವಿರ ರೂಪಾಯಿಗಳೊಂದಿಗೆ
1500 ರೂಪಾಯಿಗಳನ್ನು ಹೆಚ್ಚುವರಿಯಾಗಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಕ್ವಿಂಟಾಲಿಗೆ 1500 ರೂಪಾಯಿ ನೀಡಲಾಗುವುದು. 3000 ಸಾವಿರ ರೂಪಾಯಿ ವರೆಗೆ ಬೇಡಿಕೆ
ಇದ್ದರೂ ಸರ್ಕಾರದ ತನ್ನ ಶಕ್ತಿಗೆಅನುಸಾರವಾಗಿ ಬೆಂಬಲ ಬೆಲೆ ನೀಡುತ್ತಿದೆ. ಎಂ.ಎಸ್.ಪಿ ದರ ನಿಗದಿ ಮಾಡುವುದು ಕೇಂದ್ರ ಸರ್ಕಾರ ಎಂದಿದ್ದಾರೆ.