News

Sarus Crane ಒಂದು ವರ್ಷ ಅಪರೂಪದ ಸಾರಸ್‌ ಕೊಕ್ಕರೆ ಸಾಕಿದ ರೈತ: ಈಗ ಫಜೀತಿ!

24 March, 2023 11:14 AM IST By: Hitesh
A farmer who reared a rare Sarus stork for a year: Now Fajiti!

ಒಂದು ವರ್ಷ ಅಪರೂಪದ ಸಾರಸ್‌ ಕೊಕ್ಕರೆ ಸಾಕಿದ ರೈತನೊಬ್ಬ ಈಗ ಫಜೀತಿಗೆ ಸಿಲುಕಿದ್ದು, ರಾಜಕೀಯವಾಗಿಯೂ ಈ ವಿಷಯ ಚರ್ಚೆಗೆ ಗ್ರಾಸವಾಗಿದೆ.

ಭಾರತದಲ್ಲಷ್ಟೇ ಅಲ್ಲದೇ ಈ ವಿಷಯ ಇದೀಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. 

ಗಾಯಗೊಂಡ ಅಪರೂಪದ ಸಾರಸ್ ಕೊಕ್ಕರೆ (ಸಾರಸ್‌ ಕ್ರೇನ್)ಯನ್ನು ರಕ್ಷಿಸುವ ಮೂಲಕ ಭಾರತೀಯರೊಬ್ಬರು ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದಾರೆ.

ಉತ್ತರ ಪ್ರದೇಶದ ರೈತ ಸಾರಸ್‌ ಕೊಕ್ಕರೆಯನ್ನು ರಕ್ಷಿಸಿದ್ದರೆ, ಇದು ಹೆಚ್ಚು ಚರ್ಚೆ ಆಗುತ್ತಿರಲಿಲ್ಲ.

ಆದರೆ, ರಕ್ಷಿಸಿದ ಕೊಕ್ಕರೆಯನ್ನು ಬರೋಬ್ಬರಿ ಒಂದು ವರ್ಷದ ಅವಧಿಗೆ ಅವರ ಬಳಿಯೇ ಇರಿಸಿಕೊಂಡಿದ್ದಕ್ಕೆ ಇದೀಗ ವಿರೋಧ ವ್ಯಕ್ತವಾಗಿದೆ.

Rain Fall ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ!

ಅಲ್ಲದೇ ಇವರ ಮೇಲೆ ಕಾನೂನು ಕ್ರಮ ಜರುಗಿಸುವ ಸಾಧ್ಯತೆಯೂ ಇದೆ. ಸಂರಕ್ಷಿತ ಪಕ್ಷಿಯನ್ನು ಉತ್ತರ ಪ್ರದೇಶದ ಅಧಿಕಾರಿಗಳು ವನ್ಯಜೀವಿ ಅಭಯಾರಣ್ಯಕ್ಕೆ ಸ್ಥಳಾಂತರಿಸಿದ್ದಾರೆ.

ಒಂದು ವರ್ಷದ ಹಿಂದೆ ತನ್ನ ಹೊಲದಲ್ಲಿ ಸಾರಸ್ ಕ್ರೇನ್ ಕಾಣಿಸಿಕೊಂಡಿತ್ತು. ಈ ಪಕ್ಷಿ ತಾನಾಗಿಯೇ ಹಾರುತ್ತದೆ ಎಂದು ರೈತ ನಿರೀಕ್ಷೆ ಮಾಡಿದ್ದ ಎನ್ನಲಾಗಿದೆ.

ಆದರೆ, ಇದು ಕಳೆದ ಒಂದು ವರ್ಷದಿಂದಲೂ ಆಗಿಲ್ಲ ಎನ್ನಲಾಗಿದೆ.   

ವಿದ್ಯಾರ್ಥಿಗಳಿಗೆ ಖುಷಿ ಸುದ್ದಿ: ನಿಮ್ಮ ಖಾತೆಗೆ ಇಂದು ಬೀಳಲಿದೆ ವಿದ್ಯಾನಿಧಿ ಹಣ 

ಕ್ರೇನ್ ಸಮಸ್ಪುರ ಪಕ್ಷಿಧಾಮದ ಗಡಿಯಲ್ಲಿ ಇರುವ ಸಾಧ್ಯತೆ ಇದೆ.   

ಉತ್ತರ ಪ್ರದೇಶದಲ್ಲಿ  ಅಂದಾಜು 17,000 ಸಾರಸ್ ಕ್ರೇನ್‌ ಇದೆ ಎಂದು ಹೇಳಲಾಗಿದೆ.  ಅಲ್ಲಿದು ಅಧಿಕೃತ ರಾಜ್ಯ ಪಕ್ಷಿ ಆಗಿದೆ.

ಭಾರತೀಯ ಕಾನೂನಿನ ಪ್ರಕಾರ ಯಾವುದೇ ವ್ಯಕ್ತಿಗಳು ಸರಸ್ ಕ್ರೇನ್‌ಗಳನ್ನು ಇಟ್ಟುಕೊಳ್ಳುವುದು ಅಥವಾ ಅವುಗಳಿಗೆ ಆಹಾರವನ್ನು ನೀಡುವುದು ಕಾನೂನುಬಾಹಿರವಾಗಿದೆ.

ರೈತ ಮೊಹಮ್ಮದ್ ಆರಿಫ್ ಅವರಿಗೆ ಕಳೆದ ವರ್ಷ ಕ್ರೇನ್ ಪತ್ತೆಯಾಗಿದ್ದು, ಅದನ್ನು ಅವರೇ ಸಾಕುತ್ತಿದ್ದರು.

ಆದರೆ, ಈಚೆಗೆ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ,  ಪಕ್ಷಿಯನ್ನು ಈ ರೀತಿಯಲ್ಲಿ ಸಾಕಲು ಸಾಧ್ಯವಿಲ್ಲ.

ಹೀಗಾಗಿ, ಪಕ್ಷಿಯನ್ನು ವನ್ಯಜೀವಿ ಇಲಾಖೆಯಿಂದ ಆದೇಶ ಬಂದಿದೆ ಎಂದು ಹೇಳಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನೂ ಓದಿ -₹2800 ಕೋಟಿ ರೂಪಾಯಿಯ ನೀರಾವರಿ ಯೋಜನೆಗಳ ಪ್ರಾರಂಭ: ಸಿಎಂ ಬೊಮ್ಮಾಯಿ

A farmer who reared a rare Sarus stork for a year: Now Fajiti!

ಕಾನೂನು ತಿಳಿದಿರಲಿಲ್ಲ

ಕಾನೂನಿನ ತಿಳಿವಳಿಕೆ ಕೊರತೆಯಿಂದಾಗಿ ನಾನು ಪಕ್ಷಿಯನ್ನು ಉಳಿಸಿಕೊಂಡಿದ್ದೆ. ನನಗೆ ಇದು ತಿಳಿದಿರಲಿಲ್ಲ ಎಂದು ರೈತ ಮೊಹಮ್ಮದ್ ಆರಿಫ್ ತಿಳಿಸಿದ್ದಾರೆ.

ನನಗೆ ವನ್ಯಜೀವಿ ಕಾನೂನುಗಳ ಬಗ್ಗೆ ತಿಳಿವಳಿಕೆ ಇರಲಿಲ್ಲ. ಆದರೆ, ಅದಕ್ಕೆ ನಾನು ಯಾವುದೇ ರೀತಿಯ ತೊಂದರೆ ನೀಡಿರಲಿಲ್ಲ.

ಅದು ಹೊಲದಲ್ಲಿ ಸ್ವಚ್ಛಂದವಾಗಿ ಹಾರಾಡಿಕೊಂಡು ಇತ್ತು ಎಂದಿದ್ದಾರೆ.    

ಈ ಪಕ್ಷಿಯು ಪ್ರತಿದಿನ ಬೆಳಿಗ್ಗೆ ಹೊರಗೆ ಹೋಗುತ್ತಿತ್ತು. ಪುನಃ ಮರಳಿ ಗೂಡು ಅಂದರೆ ಹೊಲ ಅಥವಾ ಮನೆಗೆ ಬರುತ್ತಿತ್ತು.

ಹೀಗಾಗಿ, ನಾನು ಇದರ ಬಗ್ಗೆ ಹೆಚ್ಚೇನು ಗಮನಹರಿಸಿರಲಿಲ್ಲ. ಅಲ್ಲದೇ ಇದು ನಮ್ಮ ಕುಟುಂಬದ ಭಾಗವಾಗಿಯೇ ಇತ್ತು ಎಂದಿದ್ದಾರೆ.  

MoU sign : ಎಚ್‌ಡಿಎಫ್‌ಸಿ ಬ್ಯಾಂಕ್‌ನೊಂದಿಗೆ MOU ಸಹಿ ಹಾಕಿದ ಕೃಷಿ ಜಾಗರಣ

ಹೃದಯವಿದ್ರಾವಕ ಘಟನೆ

ಆರಿಫ್‌ ಹಾಗೂ ಕ್ರೇನ್‌ ನಡುವಿನ ಸಂಬಂಧ ಜನರನ್ನು ಮೂಕವಿಸ್ಮಿತರನ್ನಾಗಿಸಿದರೆ, ಈಚೆಗೆ ಪಕ್ಷಿಯನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದ ನಂತರದಲ್ಲಿ

ಅವರು ಅದನ್ನು ಹಿಂಬಾಲಿಸಿರುವುದು ಸಹ ನೋಡುಗರನ್ನು ದುಃಖಕ್ಕೆ ದೂಡಿದೆ.

ರೈತ ಆರಿಫ್‌ ಅವರು ಸಮಸ್ಪುರ ಅಭಯಾರಣ್ಯಕ್ಕೆ ಕ್ರೇನ್ ಸಾಗಿಸುವ ವಾಹನವನ್ನು ಹಿಂಬಾಲಿಸಿದರು.

ಆದರೆ, ವನ್ಯಜೀವಾಧಿಕಾರಿಗಳು ಅವರನ್ನು ಹಿಂದಕ್ಕೆ ಕಳುಹಿಸಿದ್ದಾರೆ. ಅವರು ಅದನ್ನು ಯಾವ ಸ್ಥಿತಿಯಲ್ಲಿ ಇರಿಸಿದ್ದಾರೆ ಎನ್ನುವ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ.

ಪಕ್ಷಿಯನ್ನು ಕೂಡಿ ಹಾಕಿರುವ ಬಹಳಷ್ಟು ಸಾಧ್ಯತೆಗಳಿವೆ. ಹೀಗಾಗಿ, ಅದು ಬಂದಿಲ್ಲ. ಇಲ್ಲದಿದ್ದರೆ ಅದು ನನಗೆ ಹಿಂತಿರುಗುತ್ತಿತ್ತು ಎಂದು ತಿಳಿಸಿದ್ದಾರೆ.   

2 ಲಕ್ಷ ಹೊಸ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಸಾಲ ಸಂಘ ಸ್ಥಾಪಿಸಲು ಸರ್ಕಾರದ ಅನುಮೋದನೆ