ರೈತನೊಬ್ಬ ಮಳೆ ಬಾರದೆ ಇದ್ದುದ್ದಕ್ಕೆ ಬೇಸರವಾಗಿ ಇಂದ್ರ ದೇವನ ವಿರುದ್ಧ ದೂರು ನೀಡಿದ್ದಾನೆ. ಏನಿದು ಅಂತೀರಾ? ಇಲ್ಲಿದೆ ನೋಡಿ ಇಂಟರೆಸ್ಟಿಂಗ್ ಕಹಾನಿ
ಇದನ್ನೂ ಓದಿರಿ: ಜುಲೈ 20ರಂದು 2022ರ ಅತಿ ದೊಡ್ಡ “ವರ್ಷದ ಭಾರತೀಯ ಟ್ರ್ಯಾಕ್ಟರ್” ಪ್ರಶಸ್ತಿ ಪ್ರಧಾನ ಸಮಾರಂಭ! ಯಾರಾಗಲಿದ್ದಾರೆ ವಿನ್ನರ್?
ನಾವು ನೀವೆಲ್ಲ ದಿನನಿತ್ಯ ಸಾಕಷ್ಟು ಸುದ್ದಿಗಳನ್ನು ಕೇಳುತ್ತೇವೆ, ಓದುತ್ತೇವೆ. ಆದರೆ ಇಲ್ಲೊಂದು ಕೊಂಚ ವಿಚಿತ್ರ ಘಟನೆ ನಡೆದಿದೆ.
ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ರೈತರೊಬ್ಬರು ಮಳೆ ಬಾರದ ಕಾರಣ ಮನನೊಂದು ಇಂದ್ರ ದೇವನ ವಿರುದ್ಧ ದೂರು ನೀಡಿದ್ದಾರೆ.
ಮಳೆ ಕೊರತೆಯಿಂದಾಗಿ ತುಂಬಾ ಸಮಸ್ಯೆಯಾಗುತ್ತಿದೆ, ರೈತಾಪಿ ಕೆಲಸ ನಿರ್ವಹಿಸುವುದಾದರೂ ಹೇಗೆ? ಇದಕ್ಕೆ ಕಾರಣನಾದ ಇಂದ್ರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಹೀಗೆ ಇಂದ್ರನ ವಿರುದ್ಧ ದೂರು ನೀಡಿ ಸದ್ಯ ಸುದ್ದಿಯಲ್ಲಿರುವ ವ್ಯಕ್ತಿ ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯ ಝಾಲಾ ಗ್ರಾಮದ ನಿವಾಸಿ ಸುಮಿತ್‌ಕುಮಾರ ಯಾದವ್ ಎಂದು ಗುರುತಿಸಲಾಗಿದೆ
ಗ್ರಾಮದಲ್ಲಿ ಹಮ್ಮಿಕೊಂಡಿದ್ದ “ದೂರು ಪರಿಹಾರ ದಿನ”ದ ಸಂದರ್ಭದಲ್ಲಿ ಹೀಗೆ ದೂರನ್ನು ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಕಡಿಮೆ ಮಳೆಯಾಗಿರುವುದು ಜನಜೀವನದ ಮೇಲೆ ದುಷ್ಪರಿಣಾಮ ಬೀರಿದೆ. ಈ ಪ್ರದೇಶದಲ್ಲಿ ವಿರಳ ಮಳೆ ಮತ್ತು ಅನಾವೃಷ್ಟಿಯ ಬಗ್ಗೆ ಭಗವಾನ್ ಇಂದ್ರನನ್ನು ದೂಷಿಸುತ್ತಾ, ಸುಮಿತ್‌ಕುಮಾರ್ ಯಾದವ್ ಅವರು ದೂರು ನೀಡಿದ್ದಾರೆ.
ಬರಗಾಲದಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಪರಿಸ್ಥಿತಿಯು ಪ್ರಾಣಿಗಳು ಮತ್ತು ಕೃಷಿಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಉಂಟುಮಾಡಿದೆ.
Weather Update: ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಎಚ್ಚರಿಕೆ! ಎಲ್ಲೆಲ್ಲಿ ಗೊತ್ತೆ?
ಇದರಿಂದ ಕುಟುಂಬದ ಮಹಿಳೆಯರು ಮತ್ತು ಮಕ್ಕಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಈ ಪ್ರಕರಣದಲ್ಲಿ ಸೂಕ್ತ ಕ್ರಮಕೈಗೊಳ್ಳಲು ಕೋರುತ್ತೇನೆ ಎಂದು ಬರೆದಿದ್ದಾರೆ.
ಆದರೆ, ಅಲ್ಲಿನ ಕಂದಾಯ ಅಧಿಕಾರಿ ದೂರು ಪತ್ರದ ಮೇಲೆ “ಮಳೆ ದೇವರು” ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ ಎಂದು ಬರೆದಿದ್ದನ್ನು ಗಮನಿಸದೆಯೇ ಮುಂದಿನ ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ರವಾನಿಸಿದ್ದಾರೆ ಎನ್ನಲಾಗಿದೆ.
ಪತ್ರ ವೈರಲ್ ಆದಾಗ ಅಧಿಕಾರಿ ಅದನ್ನು ಫಾರ್ವರ್ಡ್ ಮಾಡಿಲ್ಲ ಎಂದು ನಿರಾಕರಿಸಿದ್ದರು.
“ಅಂತಹ ವಿಷಯ ನನ ಗಮನಕ್ಕೆ ಬಂದಿಲ್ಲ. ಆ ದೂರು ಪತ್ರದಲ್ಲಿ ಕಾಣುವ ಮುದ್ರೆಯು ನಕಲಿ ಮುದ್ರೆಯಾಗಿದೆ. ಸಂಪೂರ್ಣ ಸಮಾಧಾನ್ ದಿವಸ್‌ನಲ್ಲಿ ಸ್ವೀಕರಿಸಿದ ದೂರುಗಳನ್ನು ಆಯಾ ಇಲಾಖೆಗಳಿಗೆ ನಾಮನಿರ್ದೇಶನ ಮಾಡಲಾಗುತ್ತದೆ.
ಈ ದೂರುಗಳನ್ನು ಬೇರೆ ಯಾವುದೇ ಕಚೇರಿಗಳಿಗೆ ರವಾನಿಸುವುದಿಲ್ಲ. ಆದ್ದರಿಂದ ಈ ಸಂಪೂರ್ಣ ವಿಷಯವು ಸಂಯೋಜಿತವಾಗಿ ಕಾಣುತ್ತದೆ.
ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ತನಿಖೆ ನಡೆಸಲಾಗುವುದು ಎಂದು ಅಧಿಕಾರಿ ವರ್ಮಾ ಹೇಳಿದ್ದಾರೆ.