News

ರಾಜ್ಯ ರೈತ ಮುಖಂಡರ ನಿಯೋಗದಿಂದ ಮುಖ್ಯಮಂತ್ರಿ ಸಿದ್ರಾಮಯ್ಯನವರ ಭೇಟಿ

24 May, 2023 8:14 PM IST By: Kalmesh T
A delegation of state farmer leaders visited the Chief Minister

ರಾಜ್ಯದ ರೈತ ಮುಖಂಡರ ನಿಯೋಗ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ವಿಧಾನಸೌಧದ ಕಚೇರಿಯಲ್ಲಿ ಭೇಟಿ ಮಾಡಿ, ರಾಜ್ಯದ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವುದಕ್ಕಾಗಿ ರೈತರ ಪರವಾಗಿ ಅಭಿನಂದನೆಗಳನ್ನು ತಿಳಿಸಿದರು.

ಇದೇ ಸಂದರ್ಭದಲ್ಲಿ ರಾಜ್ಯದ ರೈತರ  ಪ್ರಮುಖ ಸಮಸ್ಯೆಗಳ ಬಗೆ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಲಾಯಿತು

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಡಾ.ಸ್ವಾಮಿನಾಥನ್ ವರದಿಯಂತೆ ನಿಗದಿ ಮಾಡಿ ಶಾಸನಾತ್ಮಕ ಕಾನೂನು ಜಾರಿ ಮಾಡಬೇಕು ಬೆಲೆ ಕುಷಿತವಾದಾಗ ಕೃಷಿ ಉತ್ಪನ್ನಗಳ ಖರೀದಿ ಖಾತರಿ ನೀಡಬೇಕು.

ಕೃಷಿ ಉತ್ಪನ್ನಗಳನ್ನು ಸರ್ಕಾರದ ಅಂಗ ಸಂಸ್ಥೆಗಳಿಗೆ ಆಸ್ಪತ್ರೆ ವಿದ್ಯಾರ್ಥಿ ನಿಲಯ ಜೈಲು ಅಂಗನವಾಡಿಗಳು ಖರೀದಿಸುವಾಗ ಸ್ಥಳೀಯ ರೈತ ಉತ್ಪಾದಕ ಸಂಸ್ಥೆಗಳ ಮೂಲಕವೇ ಖರೀದಿ ಮಾಡಬೇಕೆಂಬ ನಿಯಮ ಜಾರಿಗೆ ತರಬೇಕು.

ಇದರಿಂದ ಸರ್ಕಾರಕ್ಕೆಹೆಚ್ಚುವರಿ ಬೆಲೆಯಲ್ಲಿ ಖರೀದಿ ಮಾಡಿವಂಚನೆ ಮಾಡುವುದು ತಪ್ಪುತ್ತದೆ.ರೈತ ಉತ್ಪಾದಕ ಸಂಸ್ಥೆಗಳು ಬಲವರ್ಧನೆ ಆಗುತ್ತವೆ ಎಂದರು.

2022 -23ರಲ್ಲಿ ಸಾಲಿನಲ್ಲಿ ರಾಜ್ಯ ಕಬ್ಬು ಬೆಳೆಗಾರ ಸಂಘದಿಂದ 39 ದಿನಗಳು ಕಬ್ಬು ಬೆಳೆಗಾರ ರೈತರು ಸತತ ಹೋರಾಟ ಮಾಡಿದಾಗ ತಾವು ವಿರೋಧ ಪಕ್ಷದ ನಾಯಕರಾಗಿ ಬೆಳಗಾವಿ ವಿಧಾನಸಭೆಯಲ್ಲಿ ಕಬ್ಬುದರ ಏರಿಕೆ ಮಾಡುವಂತೆ ಆಗ್ರಹಿಸಿದಾಗ ರಾಜ್ಯ ಸರ್ಕಾರ ಕಬ್ಬಿನ ಎಫ್ ಆರ್ ಪಿ ಹೆಚ್ಚುವರಿ ದರ ಟನಗೆ 150 ರೂ ನಿಗದಿ ಮಾಡಿ ಆದೇಶ ಹೊರಡಿಸಿದೆ.

ಸಕ್ಕರೆ ಕಾರ್ಖಾನೆಗಳು ಈ ಆದೇಶಕ್ಕೆ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವುದನ್ನ  ಉಚ್ಚ ನ್ಯಾಯಾಲಯದಲ್ಲಿ ಅಡ್ವಕೇಟ್ ಜನರಲ್ ಮೂಲಕ ಕೂಡಲೇ ತೆರವುಗೊಳಿಸಿ ರಾಜ್ಯಾದ್ಯಂತ ಕಬ್ಬು ಬೆಳೆಗಾರ ರೈತರಿಗೆ ಸುಮಾರು 950 ಕೋಟಿ ಹಣ ಕೊಡಿಸಬೇಕು.

ರೈತರು ಕೃಷಿ ಸಾಲ ತೆಗೆದುಕೊಳ್ಳುವಾಗ ರೈತನ ಸಿಬಿಲ್ ಸ್ಕೋರ್ ಪರಿಶೀಲಿಸಿ ಸಾಲ ಕೊಡಬೇಕು ಎನ್ನುವ ನಿಯಮ ಜಾರಿಗೆ ಬಂದಿರುವ ಕಾರಣ ಲಕ್ಷಾಂತರ ರೈತರು ಬ್ಯಾಂಕುಗಳಲ್ಲಿ ಸಾಲ ಸಿಗದೇ ಖಾಸಗಿ ಲೆವಾದೇವಿದಾರದಿಂದದ ದುಬಾರಿ  ಬಡ್ಡಿ ಸಾಲ ಪಡೆಯಬೇಕಾಗಿದೆ.

ರೈತರ ಮಕ್ಕಳಿಗೆ ವಿದ್ಯಾಭ್ಯಾಸ ಸಾಲವು ಸಿಗುತ್ತಿಲ್ಲ ಆದ್ದರಿಂದ ಸಿಬಿಲ್ ಸ್ಕೋರ್ ಮಾನದಂಡ ರದ್ದು ಮಾಡಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚನೆ ನೀಡಬೇಕು ಎಂದರು.

ಹಿಂದಿನ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿರುವುದರಿಂದ ರಹಧಾರಿ ಇಲ್ಲದ ಖಾಸಗಿ ಖರೀದಿದಾರರು ರೈತರ ಉತ್ಪನ್ನಗಳನ್ನು ಖರೀದಿಸಿ ಮೋಸಗೊಳಿಸುತ್ತಿದ್ದಾರೆ.

ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಎಪಿಎಂಸಿಗಳು  ಹಣಕಾಸಿನ ತೊಂದರೆಯಿಂದ ಸಂಕಷ್ಟಕ್ಕೆ ಸಿಲುಕಿವೆ ತಾವು ಹಲವಾರು ಬಾರಿ ನಾವು ಅಧಿಕಾರಕ್ಕೆ ಬಂದರೆ ತಿದ್ದುಪಡಿ ಕಾಯ್ದೆ ರದ್ದು ಮಾಡುತ್ತೇವೆ ಎಂದು ಬಹಿರ೦ಗವಾಗಿ ರಾಜ್ಯದ ರೈತರಿಗೆ ತಿಳಿಸಿದ್ದೀರಿ ಅದರಂತೆ ಕ್ರಮ ಕೈಗೊಳ್ಳಬೇಕು

ದೇವರಾಜ್ ಅರಸು ಅವರ ಕಾಲದಲ್ಲಿಜಾರಿಗೆ ತಂದಿದ್ದ ಭೂ ಸುಧಾರಣಾ ಕಾಯ್ದೆಯನ್ನು  ತಿದ್ದುಪಡಿ ಮಾಡಿ ಜಾರಿಗೆ ತಂದಿರುವುದರಿಂದ ಸಣ್ಣ ಸಣ್ಣ ರೈತರು ಕೃಷಿ ಭೂಮಿ ಕಳೆದುಕೊಳ್ಳುತ್ತಿದ್ದಾರೆ

ಕೃಷಿ ಕ್ಷೇತ್ರ ದುರ್ಬಲಗೊಳ್ಳುತ್ತಿದೆ ಇದರ ವಿರುದ್ಧ ನಾವು ರಾಜ್ಯಾದ್ಯಂತ ಹೋರಾಟ ಮಾಡಿದಾಗ ತಾವು ನಮ್ಮ ಹೋರಾಟಕ್ಕೆ ಬೆಂಬಲ ನೀಡಿ ವಿಧಾನಸಭೆಯಲ್ಲಿ ವಿರೋಧ ಮಾಡಿದ್ದೀರಿ ಅದರಂತೆ ತಾವು ಕೂಡಲೇ ತಿದ್ದುಪಡಿ ಕಾಯ್ದೆ ರದ್ದು ಮಾಡಲು ಕ್ರಮ ಕೈಗೊಳ್ಳಬೇಕು

ಕೃಷಿ ಪಂಪ್ಸೆಟ್ಟುಗಳ ರೈತರು ಆಧಾರ್ ಲಿಂಕ್ ಮಾಡಬೇಕು ಇಲ್ಲದಿದ್ದರೆ ಉಚಿತ ವಿದ್ಯುತ್ ನಿಲ್ಲಿಸುತ್ತೇವೆ ಎಂದು ಕೆಇಆರ್‌ಸಿ ಸೂಚನೆ ನೀಡಿದೆ ಈ ಆದೇಶವನ್ನು ರದ್ದುಗೊಳಿಸಬೇಕು.

ರಾತ್ರಿ ವೇಳೆ ರೈತರು ಬೆಳೆಗಳಿಗೆ ನೀರು ಹಾಯಿಸಲು ಹೋಗಿ ಪ್ರಾಣಿಗಳ ದಾಳಿಯಿಂದ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದ್ದರಿಂದ ಹಗಲು ವೇಳೆ ನಿರಂತರ 12 ಗಂಟೆಗಳ ವಿದ್ಯುತ್ ನೀಡಲು ತಾವು ಕ್ರಮ ಕೈಗೊಳ್ಳಬೇಕು.

ತೊಗರಿ ಬೆಳೆಗಾರರು ಶೇಕಡ 80ರಷ್ಟು ರೈತರು ತೊಗರಿ ಬೆಳೆಗೆ ನೆಟ್ಟೆ ರೋಗದಿಂದ ಬೆಳೆ ನಷ್ಟ ಅನುಭವಿಸಿದ್ದಾರೆ ಸರ್ಕಾರ ಎಕರೆಗೆ ಕನಿಷ್ಠ 25,000 ಪರಿಹಾರ ನೀಡಬೇಕು.

ರಾಜ್ಯಾದ್ಯಂತ ಕಾಡಂಚಿನ ಪ್ರದೇಶದಲ್ಲಿ ಲಕ್ಷಾಂತರ ರೈತರು ಅರಣ್ಯ ಒತ್ತುವರಿ ಭೂಮಿ  ಸಾಗುವಳಿ ಮಾಡುತ್ತಿರುವ ರೈತರಿಗೆ

ಕಾನೂನು ಪ್ರಕಾರ ಈ ರೈತರ ಜಮೀನು ಸಕ್ರಮಗೊಳಿಸಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿಕೊಂಡರು.