ಪ್ರತಿ ಬಾರಿಯಂತೆ ಈ ಬಾರಿಯೂ ಹಲವು ಅಚ್ಚರಿಗಳಿಗೆ ಗ್ರಾಮ ಪಂಚಾಯಿತಿ ಚುನಾವಣೆ ಕಾರಣವಾಗಿದ್ದು, ಅಚ್ಚರಿಯೆಂಬಂತೆ ಅನೇಕ ಹೊಸ ಮುಖಗಳು ಹಳ್ಳಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿವೆ.
ಅತ್ತೆ ಸೊಸೆ, ತಂದೆ ಮಗ, ಅಕ್ಕ ತಂಗಿ, ಗಂಡ ಹೆಂಡತಿ ಸ್ಪರ್ಧೆ ಮಾಡಿ ಹೆಸರು ಮಾಡಿ ಜಯಭೇರಿ ಸಾಧಿಸಿದ್ದು ಎಲ್ಲರಿಗೂ ಗೊತ್ತಿದ ಸಂಗತಿ. ಅಷ್ಟೇ ಅಲ್ಲ, ಅತ್ಯಂಕ ಕಿರಿಯ ವಯಸ್ಸಿನವರೂ ಗೆದ್ದಿರುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವಯೋವೃದ್ಧಿ 95 ರ ವಯಸ್ಸಿನಲ್ಲಿ ಸ್ಪರ್ಧಿಸಿ ಜಯಗಳಿಸಿದ್ದಾರೆ.
ಹೌದು 95 ವರ್ಷದ ಅಜ್ಜಿಯೊಬ್ಬರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಹಳ್ಳಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಬೀದರ್ ಜಿಲ್ಲೆಯ ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದ ಗುಜ್ಜಮ್ಮ ಶಂಕ್ರಪ್ಪ ಹೊಸಮನಿ 23 ಮತಗಳಿಂದ ಪ್ರತಿಸ್ಪರ್ಧಿಯನ್ನು ಸೋಲಿಸಿ ಮುತ್ತಂಗಿ ಗ್ರಾಪಂನ ನೂತನ ಸದಸ್ಯೆಯಾಗಿದ್ದಾರೆ.
ವಾರ್ಡ್ ನಂ.2ರಲ್ಲಿ ಸ್ಪರ್ಧಿಸಿದ್ದ ಗುಜ್ಜಮ್ಮ ಅವರು 287 ಮತಗಳನ್ನು ಪಡೆದುಕೊಂಡಿದ್ದಾರೆ. ಇವರ ವಿರುದ್ಧ ಸ್ಪರ್ಧಿಸಿದ್ದ ಗ್ರಾಮದ ಪುಣ್ಯವತಿ ಪ್ರಭು ಅವರು 254 ಮತಗಳನ್ನಷ್ಟೇ ಪಡೆದು, ಸೋಲೊಪ್ಪಿಕೊಂಡಿದ್ದಾರೆ.