News

ಗಮನಿಸಿ: 8.83 ಲಕ್ಷ ರೈತರ ಮುಂಗಾರು ಹಂಗಾಮಿನ ಬೆಳೆಹಾನಿಗೆ ₹947.8 ಕೋಟಿ ಪರಿಹಾರ-ಬಿ.ಸಿ.ಪಾಟೀಲ್‌

14 October, 2022 12:46 PM IST By: Kalmesh T
₹947.8 crore compensation for monsoon crop loss of 8.83 lakh farmers-BC Patil

ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಸಂಭವಿಸಿದ್ದ ಬೆಳೆ ಹಾನಿ ಹಾಗೂ ಇನ್ನಿತರೆ ಹಾನಿಗಳ ಕುರಿತು ವರದಿ ಸಲ್ಲಿಕೆಯಾಗಿದ್ದು, ಯಾವ ಹಾನಿಗೆ ಎಷ್ಟೆಷ್ಟು ಪರಿಹಾರ ನೀಡಲಾಗಿದೆ ಎನ್ನುವುದನ್ನು ಕೃಷಿ ಸಚಿವ ಬಿ.ಸಿ. ಪಾಟೀಲ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ಭತ್ತದ ಹುಲ್ಲು ಆಧಾರಿತ ಪ್ಲಾಂಟ್‌ಗಳ ಸ್ಥಾಪನೆಗೆ ಉತ್ತೇಜನ; 1.4 ಕೋಟಿ ರೂ ಹಣಕಾಸಿನ ನೆರವು!

ರಾಜ್ಯದೆಲ್ಲೆಡೆ ಮುಂಗಾರು ಹಂಗಾಮಿನಿ ಸಮಯದಲ್ಲಿ ಸುರಿದಿದ್ದ ಭಾರೀ ಮಳೆಯಿಂದಾಗಿ ರಾಜ್ಯದ ಹಲವಾರು ಪ್ರದೇಶಗಳಲ್ಲಿ ಸಮಸ್ಯೆಗಳು ಉಂಟಾಗಿದ್ದವು.

ಈ ಸಂದರ್ಭದಲ್ಲಿ ರೈತರ ಬೆಳೆಹಾನಿ, ರೈತರ ಜಾನುವಾರುಗಳ ಸಾವು, ಸಾಮಾನ್ಯ ಜನರ ಮನೆಹಾನಿ ಮುಂತಾದ ಹಾನಿಗಳು ಉಂಟಾಗಿದ್ದವು.

ಆದರೆ ಈ ಎಲ್ಲ ಸಂತ್ರಸ್ಥರಿಗೆ ಪರಿಹಾರ ಒದಗಿರಲಿಲ್ಲ. ಈಗ ರಾಜ್ಯದ ಕೃಷಿ ಸಚಿವರಾದ ಬಿ.ಚಿ. ಪಾಟೀಲ್‌ ಅವರು ಇದಕ್ಕೆ ತಮ್ಮ ಸಾಮಾಜಿಕ ಜಾಲತಾಣವಾದ ಫೇಸಬುಕ್‌ನಲ್ಲಿ ಈ ಕುರಿತಾದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಸಚಿವ ಬಿ.ಸಿ. ಪಾಟೀಲ್‌ ಅವರ ನೀಡಿರುವ ವರದಿಗಳ ಪ್ರಕಾರ, ಒಟ್ಟು 9,90,957 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, 6,16,138 ಹೆಕ್ಟೇರ್ ಪ್ರದೇಶದ ಬೆಳೆಹಾನಿಗೆ 8.83 ಲಕ್ಷ ರೈತರಿಗೆ 947.8 ಕೋಟಿ ರೂಪಾಯಿಗಳ ಪರಿಹಾರ ವಿತರಿಸಲಾಗಿದೆ.

ಜಾನುವಾರು ಮಾಲೀಕರಿಗೆ ಸಿಹಿಸುದ್ದಿ; ದೇಶದ ಎಲ್ಲಾ ಪಂಚಾಯತ್‌ಗಳಲ್ಲಿ ಸರ್ಕಾರ ಡೈರಿ ತೆರೆಯಲು ನಿರ್ಧಾರ!

ರಾಜ್ಯದಲ್ಲಿ ಹಿಂಗಾರು ಹಂಗಾಮಿನಲ್ಲಿ ದಿನಾಂಕ 1-10-2022ರಿಂದ ಈ ವರೆಗೆ ಸಂಬಂಧಿಸಿದಂತೆ ವರದಿಯಾಗಿರುವ ಮಳೆಹಾನಿಯ ವಿವರ:

  1. ಜೀವಹಾನಿ- 13
  2. ಜಾನುವಾರುಗಳ ಸಾವು- 28
  3. ಮನೆಹಾನಿ- 3309
  4. ಬೆಳೆಹಾನಿ- 6279 ಹೆಕ್ಟೇರ್
  5. ಕಾಳಜಿ ಕೇಂದ್ರಗಳ ಸ್ಥಾಪನೆ- 5, ಆಶ್ರಯ ಪಡೆದವರ ಸಂಖ್ಯೆ 1330

ಕರ್ನಾಟಕದಲ್ಲಿ ಇನ್ನೂ 5 ದಿನ ಭಾರೀ ಮಳೆ; ಹವಾಮಾನ ಇಲಾಖೆ ನೀಡಿದ ಎಚ್ಚರಿಕೆ ಏನು ಗೊತ್ತೆ?

ಪರಿಹಾರ ವಿತರಣೆ ವಿವರ

ಬೆಳೆಹಾನಿ ಪರಿಹಾರ:

ಮುಂಗಾರು ಹಂಗಾಮಿನಲ್ಲಿ ಒಟ್ಟು 9,90,957 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಹಾನಿ ಸಂಭವಿಸಿದ್ದು, 6,16,138 ಹೆಕ್ಟೇರ್ ಪ್ರದೇಶದ ಬೆಳೆಹಾನಿಗೆ 8.83 ಲಕ್ಷ ರೈತರಿಗೆ 947.8 ಕೋಟಿ ರೂ. ಪರಿಹಾರ ವಿತರಿಸಲಾಗಿದೆ.

ಇನ್ನು ಎರಡು ದಿನಗಳಲ್ಲಿ ಇನ್ನೊಂದು ಹಂತದಲ್ಲಿ ಸುಮಾರು 2 ಲಕ್ಷ ರೈತರಿಗೆ ಅಂದಾಜು 250 ಕೋಟಿ ರೂ. ಬೆಳೆ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುತ್ತಿದೆ.

ಮನೆಹಾನಿ ಪರಿಹಾರ: ಜೂನ್ 1 ರಿಂದ ಸೆಪ್ಟೆಂಬರ್ 30ರ ವರೆಗೆ 48485 ಮನೆ ಹಾನಿ ಸಂಭವಿಸಿದ್ದು, 42,661 ಮನೆಗಳಿಗೆ ಪರಿಹಾರ ವಿತರಿಸಲಾಗಿದೆ.