News

ವಿದ್ಯುತ್ ಮಗ್ಗಗಳ ಖರೀದಿಗೆ ಶೇ. 90 ರಷ್ಟು, ಹೊಲಿಗೆ ಕ್ಷೇತ್ರದಲ್ಲಿ ಸ್ವ ಉದ್ಯೋಗ ಕೈಗೊಳ್ಳಲು ಶೇ. 50 ರಷ್ಟು ಸಹಾಯಧನ

04 January, 2021 3:32 PM IST By:
Handloom

ಕೈಮಗ್ಗ ಮತ್ತು ಜವಳಿ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಸ್ವ-ಉದ್ಯೋಗ ಕೈಗೊಳ್ಳಲು ರೂ.2.70 ಲಕ್ಷದವರೆಗೂ ಸಹಾಯಧನ ನೀಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

2 ವಿದ್ಯುತ್ ಮಗ್ಗಗಳ ಖರೀದಿಗೆ ಘಟಕ ವೆಚ್ಚ ರೂ.3.00 ಲಕ್ಷದಲ್ಲಿ ಶೇಕಡ.90 ಸಬ್ಸಿಡಿಯಾಗಿ ರೂ.2.70 ಲಕ್ಷ ಸಹಾಯ ಧನ ನೀಡಲಿದೆ.
ಅರ್ಹತೆಗಳು: - ಕರ್ನಾಟಕ ರಾಜ್ಯದ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಾಗಿರಬೇಕು. ವಿದ್ಯುತ್ ಮಗ್ಗ ನೇಯ್ಗೆ ತರಬೇತಿ / ತಿಳುವಳಿಕೆ ಹೊಂದಿರಬೇಕು.  ವಿದ್ಯುತ್ ಮಗ್ಗಗಳನ್ನೂ ಸ್ಥಾಪಿಸಲು ಅವಶ್ಯವಿರುವ ಜಾಗ ಮತ್ತು ವಿದ್ಯುತ್ ಸಂಪರ್ಕ ಹೊಂದಿರಬೇಕು.

ಹೊಲಿಗೆ ಕ್ಷೇತ್ರದಲ್ಲಿ ಸ್ವ ಉದ್ಯೋಗ ಕೈಗೊಳ್ಳಲುಶೇ. 50 ರಷ್ಟು ಸಹಾಯಧನ

ಇಂಡಸ್ಟ್ರಿಯಲ್ ಸೀವಿಂಗ್ ಮಷಿನ್ ಘಟಕ ವೆಚ್ಚ ರೂ.30,000 ದಲ್ಲಿ ಶೇಕಡ.50 ರಷ್ಟು ಸಬ್ಸಿಡಿಯಾಗಿ ರೂ.15 ಸಾವಿರ ಸಹಾಯಧನ ನೀಡಲಾಗುತ್ತದೆ.

ಅರ್ಹತೆಗಳು: ಕರ್ನಾಟಕ ರಾಜ್ಯದ ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಾಗಿರಬೇಕು.  ಫಲಾನುಭವಿಯು ಇಂಡಸ್ಟ್ರಿಯಲ್ ಹೊಲಿಗೆ ಯಂತ್ರ ಅಳವಡಿಸಲು ಅವಶ್ಯವಿರುವ ಜಾಗ ಮತ್ತು ವಿದ್ಯುತ್ ಸಂಪರ್ಕ ಹೊಂದಿರಬೇಕು. ಇಲಾಖೆಯ ಜವಳಿ ನೀತಿಯಡಿ ಸೀವಿಂಗ್ ಮಷಿನ್ ಅಪರೇಟರ್ ತರಬೇತಿ ಪಡೆದವರಾಗಿರಬೇಕು.

ಮಾಹಿತಿಗಾಗಿ ಉಪ/ಸಹಾಯಕ ನಿರದ್ಶಕರು, ಕೈಮಗ್ಗ ಮತ್ತು ಜವಳಿ ಇಲಾಖೆಯ ಜಿಲ್ಲಾ ಕಚೇರಿ ಹಾಗೂ ವಿಭಾಗಮಟ್ಟದ ಜಂಟಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ಕೈಮಗ್ಗ ಮತ್ತು ಜವಳಿ ಇಲಾಖೆಯ ವೆಬ್‌ಸೈಟ್‌ :  www.karnatakadht.org  ಅಥವಾ ದೂರವಾಣಿ ಸಂಖ್ಯೆ : 080-23568223 ಗೆ ಸಂಪರ್ಕಿಸಬಹುದು.