News

Breaking: 90 ಸಾವಿರ ಕ್ವಿಂಟಾಲ್‌ ಅಕ್ರಮ ಪಡಿತರ ಅಕ್ಕಿ ವಶಕ್ಕೆ!

27 June, 2022 2:34 PM IST By: Kalmesh T
90,000 quintals of illegal rations seized

ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ಅಕ್ಕಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕುರಿತು ವರದಿ ಪಡೆಯಲಾಗಿ 90 ಸಾವಿರ ಕ್ವಿಂಟಾಲ್‌ ಅಕ್ಕಿ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿರಿ: ಶುಂಠಿಗೆ ಉತ್ತರ ಭಾರತದಿಂದ ಭಾರೀ ಬೇಡಿಕೆ; ಬೆಲೆಯಲ್ಲೂ ಹೆಚ್ಚಳ!

ಅನ್ನಭಾಗ್ಯ ಯೋಜನೆಯಲ್ಲಿ ನೀಡುವ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಿ, ಕಾಳಸಂತೆಯಲ್ಲಿ ಮಾರುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದ್ದು, 14 ತಿಂಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ 90 ಸಾವಿರ ಕ್ವಿಂಟಲ್ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಗಳು ತಿಳಿಸಿವೆ.

ಅಕ್ಕಿ ಗಿರಣಿ, ಗೋದಾಮು, ಮನೆ, ಬಂಕರ್, ಲಾರಿಗಳ ಮೇಲೆ ದಾಳಿ ನಡೆಸಿ, ಅಗತ್ಯ ವಸ್ತುಗಳ ಸರಕು ಕಾಯ್ದೆಯಡಿ 2021ರ ಏಪ್ರಿಲ್‌ನಿಂದ ಈ ವರ್ಷದ ಮೇ 15ರವರೆಗೆ 779 ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ ಗುಡುಗು-ಬಿರುಗಾಳಿ ಸಮೇತ ಭಾರೀ ಮಳೆ ಎಚ್ಚರಿಕೆ!

ಮಂಡ್ಯ (24,406 ಕ್ವಿಂಟಲ್) ಹಾಗೂ ಕೋಲಾರ (11,466 ಕ್ವಿಂಟಲ್) ಜಿಲ್ಲೆಯಲ್ಲೇ ಹೆಚ್ಚು ಪಡಿತರ ಅಕ್ರಮವಾಗಿ ದಾಸ್ತಾನು, ಸಾಗಣೆಮಾಡಿರುವುದನ್ನು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿದ್ದಾರೆ. ಬಾಗಲಕೋಟಿ (45) ಹಾಗೂ ಬಳ್ಳಾರಿ (44) ಅತ್ಯಧಿಕ ಪ್ರಕರಣ ದಾಖಲಾಗಿವೆ.

ನಿಷೇಧದ ನಡುವೆಯೂ ಭಾರತದಿಂದ 18 ಲಕ್ಷ ಟನ್‌ ಗೋಧಿ ರಫ್ತು..!

ಅಕ್ರಮವೆಸಗಿದರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಅಧಿಕಾರಿಗಳು ಎಚ್ಚರಿಸಿ ದಾಳಿ ನಡೆಸಿದರೂ ಅವ್ಯಾಹತವಾಗಿ ನಡೆಯುತ್ತಿದೆ.