News

ಯಾವ 8 ಕಾರಣಗಳು ನಿಮ್ಮ ಕಂತುಗಳಲ್ಲಿ ಭಾದೆ ನಿರ್ಮಿಸುತ್ತವೆ ? PM KISAN SAMMAN NIDHI Yojana

01 January, 2022 12:52 PM IST By: Ashok Jotawar
Farmer

ಈ ಪ್ರಶ್ನೆಯನ್ನು ನಾವು ಕೃಷಿ ಸಚಿವಾಲಯದ ಅಧಿಕಾರಿಗಳಿಗೆ ಕೇಳಿದಾಗ, ಅವರು ದೇಶದ ಅತಿದೊಡ್ಡ ರೈತ ಯೋಜನೆಯ (PM KISNAN) ಲಾಭ ಪಡೆಯಲು ಹಲವು ವಿಶೇಷ ವಿಷಯಗಳನ್ನು ಕಾಳಜಿ ವಹಿಸಬೇಕು ಎಂದು ಹೇಳಿದರು. ಫಾರ್ಮ್ ಅನ್ನು ಭರ್ತಿ ಮಾಡುವಾಗ ಸರಿಯಾದ ದಾಖಲೆಗಳನ್ನು ಹೊಂದಿರುವುದು ಮುಖ್ಯ. ಇಲ್ಲದಿದ್ದರೆ ಅರ್ಜಿ ಸಲ್ಲಿಸಿದರೂ ಹಣ ಬರುವುದಿಲ್ಲ. ಒಂದು ಸಣ್ಣ ತಪ್ಪು ನಿಮ್ಮನ್ನು ಈ ಪ್ರಯೋಜನದಿಂದ ಹೊರಹಾಕುತ್ತದೆ.

(1) ಕೃಷಿ ಸಚಿವಾಲಯದ ಅಧಿಕಾರಿಗಳು ಯೋಜನೆಯಡಿಯಲ್ಲಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವಾಗ, ಫಾರ್ಮ್ ಅನ್ನು ಸಂಪೂರ್ಣವಾಗಿ ಭರ್ತಿ ಮಾಡಿ ಎಂದು ಹೇಳುತ್ತಾರೆ. ಮತ್ತು ಈ ಅರ್ಜಿಯನ್ನು ತುಂಬುವಾಗ ನೀವು  ಎಲ್ಲ ಬೇಕಾದ ಮಾಹಿತಿಗಳನ್ನು ಸರಿಯಾಗಿ ಎರಡುಸಲ ಮತ್ತೆ ಮತ್ತೆ ಯೋಚಿಸಿ ತುಂಬಬೇಕು.

Farmer

(2) ಈಗ ಸರ್ಕಾರಿ ವ್ಯವಸ್ಥೆಯಲ್ಲಿ ಯಾರ ದಾಖಲೆಯನ್ನು ಕ್ರಾಸ್ ಚೆಕ್ ಮಾಡುವುದು ಸುಲಭವಾಗಿದೆ. ಇದರಲ್ಲಿ, ಬ್ಯಾಂಕ್ ಖಾತೆ ಮಾಹಿತಿಯನ್ನು ಭರ್ತಿ ಮಾಡುವಾಗ IFSC ಕೋಡ್ ಅನ್ನು ಸರಿಯಾಗಿ ಭರ್ತಿ ಮಾಡಿ. ಏಕೆಂದರೆ ನಿಮ್ಮIFSC ಕೋಡ್ ನಿಮ್ಮ ಖಾತೆಗೆ ಹಣ ಜಮಾ ಮಾಡಲು ತುಂಬಾನೇ ಸಹಾಯಕ ವಾಗುತ್ತೆ ಮತ್ತು ನೀವು ಈ ಒಂದು ಮಾಹಿತಿಯನ್ನು ಸರಿಯಾಗಿ ನೀಡದೆ  ಇದ್ದರೆ ನಿಮ್ಮ ಅರ್ಜಿಯನ್ನು ನೇರವಾಗಿ ರದ್ದು ಮಾಡಲಾಗುತ್ತೆ. ಎಂದು ಸ್ಪಷ್ಟವಾಗಿ ಹೇಳಿದರು.

(3) ಪ್ರಸ್ತುತ ಸ್ಥಿತಿಯಲ್ಲಿರುವ ಅದೇ ಖಾತೆಯ ಸಂಖ್ಯೆಯನ್ನು ನಮೂದಿಸಿ. ಜಮೀನಿನ ವಿವರಗಳನ್ನು - ವಿಶೇಷವಾಗಿ ಖಾಸ್ರಾ ಸಂಖ್ಯೆ ಮತ್ತು ಖಾತೆ ಸಂಖ್ಯೆಯನ್ನು ಬಹಳ ಎಚ್ಚರಿಕೆಯಿಂದ ತುಂಬಬೇಕು. ಇಲ್ಲವಾದರೆ ಇದರಿಂದ ತುಂಬಾನೇ ಕಷ್ಟಕರವಾಗುತ್ತೆ. ಮತ್ತು ನಿಮ್ಮ ಕಥೆಗೆ ಎಷ್ಟು ಹನು ಬರಬೇಕೋ ಅದು ಬೇರೆಯವರ ಖಾತೆಗೂ ಕೂಡ ಹೋಗಬಹುದು.

Farmer

(4) ಕೃಷಿಗಾಗಿ ವಾರ್ಷಿಕ 6000 ರೂ.ಗಳ ಲಾಭವನ್ನು ಪಡೆಯದಿರುವವರ ದಾಖಲೆಗಳಲ್ಲಿ ಕೆಲವು ಆಕ್ಷೇಪಣೆಗಳು ತುಂಬಾ ಸಾಮಾನ್ಯವಾಗಿದೆ.

(5) ಅಮಾನ್ಯ  ಖಾತೆಯಲ್ಲಿ ತಾತ್ಕಾಲಿಕ ಫ್ರೀಜ್. ಅಂದರೆ, ಖಾತೆ ಸರಿಯಾಗಿಲ್ಲ. ದುರಸ್ತಿ ಮಾಡಿದರೆ ಹಣ ಬರುತ್ತದೆ. ಕಾರಣ ಹಣ ಪಾವತಿಸುವಾಗ ಎಲ್ಲರು ತಮ್ಮ ಒಂದು ಖಾತೆಯ ಮಾಹಿತಿಯನ್ನು (Information ) ಸರಿಯಾಗಿ ನೀಡಬೇಕು.

(6) ನೀಡಲಾದ ಖಾತೆ ಸಂಖ್ಯೆಯು ಬ್ಯಾಂಕಿನಲ್ಲಿ ಇರಲಿಲ್ಲ. ಇದರರ್ಥ ತಪ್ಪು ಖಾತೆ ಸಂಖ್ಯೆಯನ್ನು ನಮೂದಿಸಲಾಗಿದೆ. ಮತ್ತು ಇವರ ಖಾತೆಗೆ ಮುಂಬರುವಂತ ಹಣವನ್ನು ನೀಡಲಾಗುದಿಲ್ಲ.

Farmer

(7) ರೈತರ ದಾಖಲೆಯನ್ನು ಸಾರ್ವಜನಿಕ ಹಣಕಾಸು ನಿರ್ವಹಣಾ ವ್ಯವಸ್ಥೆ (PFMS) ಸ್ವೀಕರಿಸಿಲ್ಲ. ಇದರಿಂದ ನಿಮ್ಮ ಖಾತೆಯಲ್ಲಿ  ಏನೋ ಕಷ್ಟ ಇರಲೇಬೇಕು ಎಂದರ್ಥ. ಈ ಸಮಸ್ಯೆ ನಿಮ್ಮ ಮುಂದೆ ಎದುರಾದಾಗ  ನೀವು ನಿಮ್ಮ ಹತ್ತಿರದ ಪಂಚಾಯತಿ ಕಚೇರಿಗೆ ಭೇಟಿ ನೀಡಬೇಕು ಮತ್ತು ಒಂದು ತಕರಾರು ಪ್ರತಿಯನ್ನು ಜಮಾಮಾಡಬೇಕು.

(8) ಬ್ಯಾಂಕ್ ತಿರಸ್ಕರಿಸಿದ ಖಾತೆ ಎಂದರೆ ಖಾತೆಯನ್ನು ಮುಚ್ಚಲಾಗಿದೆ ಎಂದರ್ಥ. ಕಿಸಾನ್ ದಾಖಲೆಯನ್ನು PFMS/ಬ್ಯಾಂಕ್ ತಿರಸ್ಕರಿಸಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮದಲ್ಲಿ ಆಧಾರ್ ಕಾರ್ಡ್ ಸೀಡಿಂಗ್ ಮಾಡಲಾಗಿಲ್ಲ. ರಾಜ್ಯ ಸರ್ಕಾರದಿಂದ ತಿದ್ದುಪಡಿ ಬಾಕಿ ಇದೆ.

ಇನ್ನಷ್ಟು ಓದಿರಿ:

ಯಾರಿಗೆ ಸಾಗುವದಿಲ್ಲ 10 ನೇ ಕಂತು! 2000 ರೂಪಾಯಿ?